Roopa Rayappa: ತುಂಡುಡುಗೆಯ ಫೋಟೋ ಹಂಚಿಕೊಂಡು.. ಟ್ರೋಲ್ ಮಾಡ್ಬೇಡಿ ಎಂದ ʼಕೆಜಿಎಫ್ʼ ನಟಿ
Team Udayavani, Sep 17, 2023, 3:22 PM IST
ಬೆಂಗಳೂರು: ಕನ್ನಡದ ʼಕೆಜಿಎಫ್ʼ ಸಿನಿಮಾದಲ್ಲಿ ಪುಟ್ಟ ಪಾತ್ರವೊಂದನ್ನು ಮಾಡಿ ಬಣ್ಣದ ಲೋಕದಲ್ಲಿ ಅದೃಷ್ಟವನ್ನೇ ಬದಲಾಯಿಸಿಕೊಂಡಿರುವ ನಟಿ ರೂಪ ರಾಯಪ್ಪ ಸಖತ್ ಹಾಟ್ ಲುಕ್ ಗಳಿಂದ ಮತ್ತೆ ಗಮನ ಸೆಳೆದಿದ್ದಾರೆ.
ʼಕೆಜಿಎಫ್-1ʼ ಸಿನಿಮಾದಲ್ಲಿ ಮಗುವಿನ ತಾಯಿ ಪಾತ್ರದಲ್ಲಿ ಮಿಂಚಿದ್ದ ರೂಪ ರಾಯಪ್ಪ ಆ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟನೆಯಲ್ಲಿ ಮಾತ್ರವಲ್ಲದೇ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ. ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡು ಪಡ್ಡೆ ಹೈಕಳ ಗಮನ ಸೆಳೆದಿದ್ದಾರೆ.
ಅವರು ಹಾಟ್ ಫೋಟೋಗಳನ್ನು ಹಂಚಿಕೊಂಡು ಅನೇಕ ಬಾರಿ ಸುದ್ದಿಯಾಗಿದ್ದಾರೆ. ಇದೀಗ ನಟಿ ಒಳ ಉಡುಪಿನಲ್ಲಿ ವಿವಿಧ ಭಂಗಿಯಲ್ಲಿ ನಿಂತುಕೊಂಡಿರುವ ಗ್ಲಾಮರಸ್ & ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕಪ್ಪು – ಬಿಳುಪಿನ ಬೆಳಕಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ರೂಪ ಟ್ರೋಲ್ ಮಾಡುವವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
“ಟ್ರೋಲರ್ಸ್ ಗಳಿಗೆ ಒಂದು ಮನವಿ: ನಾನು ಅಪ್ಲೋಡ್ ಮಾಡಿರುವ ಫೋಟೋಸ್ ಗಳನ್ನು ಒಂದು ಪ್ರೊಫೆಷನಲ್ ಎನ್ವೀರಾಂನ್ಮೆಂಟ್ನಲ್ಲಿ ಮಾಡೆಲಿಂಗ್ ಗಾಗಿ ತೆಗೆದದ್ದು. ಅವುಗಳನ್ನ ಅಪಹಸ್ಯ ಮಾಡಿ ನಮ್ಮ ಪ್ರಯತ್ನಗಳು ವ್ಯರ್ಥವೆಂದು ಅನಿಸುವಂತೆ ಮಾಡಬೇಡಿ. ಕೆಟ್ಟದಾಗಿ ಕಾಮೆಂಟ್ ಹಾಕುವುದಕ್ಕೆ ಒಂದು ನಿಮಿಷ ಸಾಕು. ನಮಗೆ ಅವುಗಳ ಪರಿಣಾಮದಿಂದ ಹೊರಬರಲು ಹೆಚ್ಚು ಸಮಯ ಬೇಕು. ಆದ್ದರಿಂದ ದಯವಿಟ್ಟು ಕಲೆಯ ಕೆಲಸವನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ. ಹಾಲಿವುಡ್ ಕನಸಿನ ಬಗ್ಗೆ ಮಾತನಾಡುತ್ತಾ ತಮ್ಮ ಟ್ರೋಲರ್ಸ್ ಗಳಿಗೆ ಮನವಿ ಮಾಡಿದ್ದಾರೆ.
ನಟಿ ರೂಪಾ ʼದಿ ಜಡ್ಜ್ ಮೆಂಟ್ʼ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಂದನ್ ಶೆಟ್ಟಿ ಅವರ ʼಎಲ್ರ ಕಾಲೆಳೆಯುತ್ತ ಕಾಲʼ ಸಿನಿಮಾದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇನ್ನು ʼಕಾಡʼ ಸಿನಿಮಾದಲ್ಲಿ ನಾಯಕಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ನಟನೆ ಮೂಲಕ ಮಿಂಚಿರುವ ಅವರು ಹಿಂದಿಯ ʼಆನ್ ದಿನ ರಾಕ್ʼ ಎನ್ನುವ ವೆಬ್ ಸಿರೀಸ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಕನ್ನಡದ ಬಿಗ್ ಬಾಸ್ 10 ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಇನ್ನು ಅಧಿಕೃತಗೊಂಡಿಲ್ಲ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.