Ganesh Chaturthi: ಗಣಪ ಪ್ರೇರಣ ಶಕ್ತಿ
Team Udayavani, Sep 19, 2023, 12:00 PM IST
ಗಣೇಶ ಅದೆಷ್ಟೋ ಜನರ ಅತ್ಯಂತ ಪ್ರೀತಿಯ ದೇವರು. ಅವನ ಗುಣಗಳು ಅವನು ನೀಡುವ ಪ್ರೇರಣೆ ಸಮಸ್ತ ಜನ ಕೋಟಿಗೆ ಜಾಗೃತಿಯ ಬಾಗಿಲು ತೆಗೆಸುವ ಸಂಗತಿ. ಅದೇ ಕಾರಣಕ್ಕಾಗಿಯೋ ಏನೋ ಲೋಕಮಾನ್ಯ ತಿಲಕರು ಸಮಸ್ತ ಭಾರತೀಯರನ್ನು ಒಂದುಗೂಡಿಸುವ ಸಲುವಾಗಿ ಅವನ ಹಬ್ಬವನ್ನೇ ಆಯ್ಕೆ ಮಾಡಿಕೊಂಡು ಭಾರತೀಯರಲ್ಲಿ ರಾಷ್ಟ್ರ ಜಾಗೃತಿಯನ್ನು ಮೂಡಿಸಲು ಪ್ರಾರಂಭ ಮಾಡಿದ್ದು.
ಗಣೇಶ ಎಲ್ಲ ರೀತಿಯಿಂದಲೂ ಪ್ರೇರಣಾದಾಯಿಯೇ ಸರಿ. ಅವನ ದೇಹ ರಚನೆ ಅವನ ಅನುಭವೋಪೇತ ಜೀವನ ಎಲ್ಲವೂ ನಮಗೆ ಪ್ರೇರಣೆ. ಒಬ್ಬ ಮನುಷ್ಯ ಹೇಗೆ ಬದುಕಬೇಕು ಎಂಬ ಸಂದೇಶವನ್ನು ನೀಡುವವನೂ ಅವನೇ. ಅವನ ದೇಹವೇ ಎಲ್ಲ ಸಂದೇಶವನ್ನೂ ನೀಡುತ್ತದೆ. ಅವನದ್ದು ದೊಡ್ಡ ಹೊಟ್ಟೆ ಅದರರ್ಥ ಎಲ್ಲವನ್ನೂ ಹೊಟ್ಟೆಗೆ ಹಾಕಿಕೋ ಎಂದು. ಎಷ್ಟೋ ಬಾರಿ ನಾವು ಅನೇಕರು ಮಾಡಿದ ತಪ್ಪನ್ನು ಹಾಗೆಯೇ ಹಿಡಿದುಕೊಂಡಿರುತ್ತೇವೆ. ಆದರೆ ಗಣೇಶ ಹೇಳುತ್ತಾನೆ. ಇಷ್ಟು ದೊಡ್ಡ ಹೊಟ್ಟೆ ಇದೆ ಎಲ್ಲವನ್ನೂ ಅಲ್ಲಿಗೆ ಸೇರಿಕೊಂಡು ಬಿಡು ಎಂದು. ಇತರರು ಮಾಡಿದ ಸಣ್ಣ ತಪ್ಪು ನಮಗೆಂದಿಗೂ ಹೊರೆಯಾಗಬಾರದು ಎಂದು. ಅದು ತಲೆಯಲ್ಲಿ ಅಲ್ಲ ಹೊಟ್ಟೆಯಲ್ಲಿರಬೇಕು ಆಗ ಅದು ಜೀರ್ಣವಾಗಿ ಹೋಗುತ್ತದೆ. ಹಾಗೆಯೇ ಗಣೇಶನಿಗೆ ದೊಡ್ಡ ಕಿವಿ, ಸಣ್ಣ ಬಾಯಿ ಅದರರ್ಥ ಹೆಚ್ಚು ಕೇಳಿಸಿಕೋ ಕಡಿಮೆ ಮಾತನಾಡು ಎಂದು. ಅನೇಕ ಬಾರಿ ನಾವು ಮಾಡುವ ತಪ್ಪು ಕೇಳಿಸಿ ಕೊಳ್ಳದೇ ಮಾತನಾಡುವುದು. ಬಹಳಷ್ಟು ದೊಡ್ಡ ದೊಡ್ಡ ಸಮಸ್ಯೆಗಳಿಗೆ ಇದೇ ಕಾರಣವಾಗಿದ್ದೂ ಇದೆ. ಯಾವಾಗ ನಾವು ಎಲ್ಲವನ್ನೂ ಸರಿಯಾಗಿ ಕೇಳಿಸಿಕೊಂಡು ಅದಕ್ಕೆ ಬೇಕಾದಷ್ಟು ಮಾತ್ರ ಉತ್ತರವನ್ನು ನೀಡುತ್ತೇವೆಯೋ ಆಗ ಯಾವ ಸಮಸ್ಯೆಗಳೂ ಅಗುವುದಿಲ್ಲ ಎಂಬ ಶ್ರೇಷ್ಠ ಸಂದೇಶವನ್ನು ಗಣೇಶನೇ ನೀಡುತ್ತಾನೆ. ಇನ್ನು ಅವನನ್ನು ಯಾವಾಗಲೂ ಹೊತ್ತು ತಿರುಗಾಡುವ ಇಲಿ ಅಂತಹಾ ಧಡೂತಿ ದೇಹದ ಗಣಪನನ್ನು ಇಷ್ಟು ಸಣ್ಣ ಹೊತ್ತು ತಿರುಗಲು ಹೇಗೆ ಸಾಧ್ಯ.
ಅದಕ್ಕೂ ಉತ್ತರ ಇದೆ ಮತ್ತದು ಗಣೇಶ ನೀಡುವ ಮಹತ್ವದ ಸಂದೇಶ. ಅದರರ್ಥ ನೀನು ಎಷ್ಟೇ ದೊಡ್ಡ ಮನುಷ್ಯನೇ ಆಗಿರು ನಿನ್ನನ್ನು ಸಣ್ಣ ಇಲಿಯೂ ಎತ್ತಿಕೊಳ್ಳಬಹುದು ಎಂದು. ಅಂದರೆ ನಾವು ಕೆಲವರನ್ನು ಅವರ ದೇಹರಚನೆಯಿಂದಲೇ ಅಳೆದುಬಿಡುತ್ತೇವೆ. ಅದನ್ನು ಯಾವತ್ತೂ ಮಾಡಬೇಡಿ ನನ್ನಂತಹವನನ್ನೇ ಒಂದು ಸಣ್ಣ ಇಲಿ ಕೊಂಡು ಹೋಗುವಾಗ ಇನ್ನು ನೀನು ಯಾವ ಲೆಕ್ಕ ಎಂಬ ಲೆಕ್ಕಾಚಾರ ಗಣೇಶನದ್ದು.
ಆದರೆ ಭಾರತೀಯರಿಗೆ ಯಾವತ್ತಿಗೂ ಗಣೇಶ ಒಂದು ಧಾರ್ಮಿಕ ಆಚರಣೆಯಾಗಿ ಆಗಲೇ ಇಲ್ಲ. ಅದು ಭಾರತೀಯ ಸಂಸ್ಕಾರ ಮತ್ತು ಸಭ್ಯತೆ. ತಪ್ಪುದಾರಿಯಲ್ಲಿ ನಡೆಯುವವರಿಗೆ ಅವನನ್ನು ನೋಡಿ ಕಲಿಯಿರಿ ಎಂಬ ಮಾರ್ಗದರ್ಶಕ ಹಬ್ಬ. ಒಂದು ಕಾಲಕ್ಕೆ ಭಾರತೀಯರನ್ನು ಒಂದುಗೂಡಿಸಿದ್ದ ಹಬ್ಬ ಒಂದು ಕಡೆಯಿಂದಾದರೆ ಮತ್ತೂಂದು ಕಡೆಯಿಂದ ಭವ್ಯಭಾರತದ ನವಸಮಾಜದ ಜಾಗೃತಿ ಮಾಡಿದ ಭವ್ಯ ಹಬ್ಬ. ಒಟ್ಟಿನಲ್ಲಿ ಗಣಪ ಎಂಬುವವನೇ ಒಂದು ಮಾರ್ಗದರ್ಶಕ.
-ಲತೇಶ್
ಬಾಕ್ರಬೈಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.