Ganesh Chathurthi: ಪರಿಸರ ಸ್ನೇಹಿ ಮಣ್ಣಿನ ಗಣಪನ ಪೂಜಿಸಿ

Team Udayavani, Sep 18, 2023, 5:00 PM IST

6-ganapathi-fusion

ಇತ್ತೀಚಿನ ದಿನಗಳಲ್ಲಿ ಫ್ಯಾಷನ್‌ ಗಳೆಂದು ಅನೇಕ ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸಿಕೊಂಡು ಗಣಪತಿಯನ್ನು ತಯಾರಿಸಿ ಮಾರಾಟ ಮಾಡುವುದುಂಟು. ಇಂತಹ ಗಣಪತಿಯನ್ನು ಭಾರತೀಯ ಶಾಸ್ತ್ರಗಳು ಒಪ್ಪುವುದಿಲ್ಲ. ಗಣಪತಿಯನ್ನು ಆರಾಧಿಸುವವರು ಚತುರ್ಥಿ ದಿನದಂದು ಶುದ್ಧವಾದ ಮಣ್ಣಿನಿಂದ ಮೂರ್ತಿಯನ್ನು ತಯಾರಿಸಿ ಪೂಜೆ ಮಾಡಬೇಕೆಂದು ನಮ್ಮ ಶಾಸ್ತ್ರ ಹಾಗೂ ಪುರಾಣಗಳು ಹೇಳುತ್ತವೆ.

ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ತಯಾರಿಸಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ಗಣಪತಿ ಹೆಚ್ಚಾಗಿ ಆಕರ್ಷಿತವಾಗಿ ಕಾಣಬೇಕೆಂದು ರಾಸಾಯನಿಕವಾಗಿ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಮಣ್ಣಿನ ಗಣಪತಿಗೂ ಹಾಗಾ ರಾಸಾಯನಿಕವಾಗಿ ತಯಾರಿಸಿದ  ಗಣಪತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಇಂತಹ ಗಣಪತಿಗಳು ಆರೋಗ್ಯಕ್ಕೂ ಹಾನಿಕರವಾಗಿದ್ದು, ಶಾಸ್ತ್ರಗಳು ಇಂತಹ ಗಣಪತಿಗಳ ಮೂರ್ತಿಯನ್ನು ಒಪ್ಪುವುದಿಲ್ಲ.

ಮಣ್ಣಿನ ಗಣಪತಿಗಳನ್ನು ಪೃಥ್ವಿತಣ್ತೀದಿಂದ ತಯಾರಾಗಿರುವ ಮೂರ್ತಿಗಳಾಗಿದ್ದು, ಇದರಲ್ಲಿ ಬ್ರಹ್ಮಾಂಡ ಮಂಡಲದಿಂದ ಆಕರ್ಷಿಸಿದ ದೇವತೆಯ ತಣ್ತೀಗಳು ದೀರ್ಘ‌ಕಾಲ ಕಾರ್ಯನಿರ್ವಹಿಸುತ್ತವೆ. ಪೂಜೆಯಾದ ಬಳಿಕ ಮಣ್ಣಿನ ಗಣಪತಿಯನ್ನು ಹರಿಯುವ ನೀರಿಗೆ ವಿಸರ್ಜನೆ ಮಾಡುವುದರಿಂದ ಅದು ಕೂಡಲೇ ನೀರಿನಲ್ಲಿ ಕರಗಿ, ಹರಿಯುವ ನೀರಿನಿಂದ ಸುತ್ತಮುತ್ತಲಿನ ಪರಿಸರದಲ್ಲಿ ದೂರದವರೆಗೆ ದೇವತೆಗಳ ಸಾತ್ತ್ವಿಕ ಲಹರಿಗಳನ್ನು ಕಡಿಮೆ ಮಾಡಿ ಕಾಲಾವಧಿಯನ್ನು ಪ್ರಕ್ಷೇಪಿಸುತ್ತದೆ. ಇದರಿಂದ ಸಂಪೂರ್ಣ ಪರಿಸರದ ವಾಯುಮಂಡಲ ಶುದ್ಧವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ.

ಗಣಪತಿಯನ್ನು ಪೂಜೆ ಮಾಡುವುದು ಒಳ್ಳೆಯದಾಗಲಿ ವಿಘ್ನಗಳು ಬಾರದಿರಲಿ ಎಂದು ರಾಸಾಯನಿಕದಿಂದ ಮಾಡಿದ ಗಣೇಶನಿಂದ ನಮ್ಮ ಪೂಜೆಗಳು ವಿಫಲವಾಗುವುದೇ ಹೆಚ್ಚು. ಇದಕ್ಕೆ ಕಾರಣ ಪೂಜೆ ಮಾಡುವುದು ಎಷ್ಟು ಮುಖ್ಯವೋ ಮೂರ್ತಿಯನ್ನು ಅದೇ ರೀತಿಯನ್ನು ವಿಸರ್ಜನೆ ಮಾಡುವುದೂ ಕೂಡ ಅಷ್ಟೇ ಮುಖ್ಯ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ರಾಸಾಯನಿಕದಿಂದ ಮಾಡಿದ ಗಣಪತಿಗಳನ್ನು ನಾವು ನೀರಿನಲ್ಲಿ ವಿಸರ್ಜನೆ ಮಾಡಿದರೂ ಅವುಗಳು ನೀರಿನಲ್ಲಿ ಕರಗುವುದಿಲ್ಲ. ಇದರಿಂದಾಗಿ ಗಣಪತಿಯ ಅವಶೇಷಗಳು ನೀರಿನ ಮೇಲೆ ತೇಲುತ್ತವೆ. ಅನೇಕ ಕಡೆಗಳಲ್ಲಿ ವಿಸರ್ಜಿತವಾದ ಮೂರ್ತಿಗಳನ್ನು ಒಟ್ಟಾರೆ ಸೇರಿಸಿ ಬುಲ್ಡೋರ್ಝ ಅನ್ನು ಚಲಾಯಿಸಿ ನೆಲಸಮ ಮಾಡಲಾಗುತ್ತದೆ. ಇದಕ್ಕೆ ಕಾರಣ ನಾವೇ ಆದ್ದರಿಂದ ಇಂತಹ ತಪ್ಪುಗಳು ಘೋರ ಪಾಪ ಮಾಡಿದಂತಾಗುತ್ತದೆ. ಆದ್ದರಿಂದ ಶಾಸ್ತ್ರದ ಪ್ರಕಾರ ಮಣ್ಣಿನ ಗಣಪತಿಯನ್ನು ಕೂರಿಸಿ ಸನ್ಮಾನದಿಂದ ಗಣಪತಿಯನ್ನು ಬೀಳ್ಕೊಡುವುದು ಆವಶ್ಯಕವಾಗಿದೆ.

-ರೇಣುಕಾರಾಜ್‌

ಕುವೆಂಪು ವಿಶ್ವವಿದ್ಯಾಲಯ  ಶಂಕರಘಟ್ಟ

ಟಾಪ್ ನ್ಯೂಸ್

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಮೃಗಗಳ ಜಗತ್ತು

14-uv-fusion

Women: ಕ್ಷಮಯಾ ಧರಿತ್ರಿ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.