World Ozone Day: ಮನುಕುಲದ ಉಳಿವಿಗಾಗಿ ಓಝೋನ್ ರಕ್ಷಿಸಿ
ಸೆ.16 ರಂದು ವಿಶ್ವ ಓಝೋನ್ ದಿನ ಆಚರಣೆ
Team Udayavani, Sep 18, 2023, 11:16 AM IST
“ವಿಜ್ಞಾನ-ತಂತ್ರಜ್ಞಾನದ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಮಾನವ ಇಡೀ ಮಾನವ, ಪಶು, ಪಕ್ಷಿ, ಜೀವಜಂತು, ಸಸ್ಯರಾಶಿಗಳಿಗೆ ಆಶ್ರಯ ತಾಣವಾಗಿರುವ ಪೃಥ್ವಿ ಮತ್ತು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಖಾಸಗೀಕರಣ. ಜಾಗತೀಕರಣ ಮತ್ತು ಉದಾರೀಕರಣಗಳಿಂದ ಅಭಿವೃದ್ಧಿ ಸಾಧಿಸಬೇಕೆಂಬ ಮರೀಚಿಕೆಗೆ ಬೆನ್ನು ಹತ್ತಿರುವ ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ಅರಣ್ಯ ಸಂಪತ್ತನ್ನು ನಾಶಗೊಳಿಸಿ ತನ್ನ ಬದುಕಿಗೆ ತಾನೇ ಕೈಯಾರೆ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾನೆ.
ಹಣ ಗಳಿಕೆ, ನಗರೀಕರಣ, ಕೈಗಾರಿಕೆ, ಸಂಶೋಧನೆ, ಹೊಸ ಆವಿಷ್ಕಾರ, ಅಣ್ವಸ್ತ್ರ ಪ್ರಯೋಗ, ಐಷಾರಾಮಿ ವಸ್ತುಗಳ ಬಳಕೆ ಮತ್ತು ವಿಜಾnನ-ತಂತ್ರಜ್ಞಾನದ ಮಿತಿಮೀರಿದ ಉಪಯೋಗದಿಂದ ಭೂಮಿಯ ಮೇಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇಂದು ಆಧುನಿಕತೆಗೆ ಮಾರು ಹೋಗುತ್ತಿರುವ ಮಾನವ ಕಂಪ್ಯೂಟರ್, ಏರ್‌ಕಂಡಿಷನ್, ಏರ್‌ಕೂಲರ್, ಪೀಠೊಪಕರಣಗಳನ್ನು ಸ್ವಚ್ಛಗೊಳಿಸಬಲ್ಲ ಸಾಧನಗಳು ಮತ್ತು ಕೈಗಾರಿಕೆಗಳಿಂದ ಹೊರ ಸೂಸುವ ಕಾರ್ಬನ್ ಮೋನಾಕ್ಸೆ„ಡ್ ಇತ್ಯಾದಿಗಳಿಂದ ಉತ್ಪತ್ತಿಯಾಗುವ ಕ್ಲೋರೋಫಾರಂ ಕಾರ್ಬನ್‌ದಿಂದ ಜೀವ ರಕ್ಷಕ ಓಝೋನ್ ಪದರವು ತೆಳುವಾಗುತ್ತದ್ದು.
ಇದರ ಪರಿಣಾಮದಿಂದಾಗಿ ಸೂರ್ಯನಲ್ಲಿರುವ ಅತಿ ನೇರಳೆ ಕಿರಣಗಳು ನೇರವಾಗಿ ಭೂಮಿಗೆ ತಲುಪಿ, ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗುವ ರೋಗ-ರುಜಿನಗಳು ಉತ್ಪತ್ತಿಯಾಗುತ್ತವೆ. ಅಷ್ಟೇ ಅಲ್ಲದೆ ಸೂರ್ಯನ ಶಾಖದಿಂದ ಬಿಡುಗಡೆಯಾಗುವ ತೀವ್ರತರವಾದ ಉಷ್ಣತೆ ಬಿಡುಗಡೆ ಹೊಂದಿ, ಪರಿಸರದಲ್ಲಿ ಅನೇಕ ಬದಲಾವಣೆಗಳುಂಟಾಗುತ್ತವೆ.
ಓಝೋನ್ ಪದರ ಉಳಿಸಿ ಅಭಿಯಾನ ಒಂದು ಭಾಗವಾಗಿ ಪ್ರತಿ ವರ್ಷ ಸೆಪ್ಟಂಬರ್ 16ರಂದು ವಿಶ್ವ ಓಝೋನ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜಗತ್ತಿನಲ್ಲಿ ಪ್ರಪ್ರಥಮವಾಗಿ 1987, ಸೆಪ್ಟಂಬರ್ 16ರಂದು ಕೆನಡಾದ ಮಾಂಟ್ರಿಯಾಲ್ ನಗರದಲ್ಲಿ ಜರುಗಿದ ಕೆಲವು ದೇಶಗಳ ಮಧ್ಯೆ ಒಪ್ಪಂದವೊಂದು ನಡೆದಿತ್ತು. ಈ ಐತಿಹಾಸಿಕ ದಿನದ ಸವಿನೆನಪಿಗಾಗಿ ವಿಶ್ವಸಂಸ್ಥೆಯು 1994ರಿಂದಲೂ ಈ ದಿನವನ್ನು ಆಚರಿಸಲು ತೀರ್ಮಾನಿಸಿತು.
ಇಂದು ಓಝೋನ್ ಪದರದಲ್ಲುಂಟಾದ ಸಣ್ಣ ರಂಧ್ರಗಳಿಂದ ಪ್ರಕೃತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಇದರಿಂದ ಜಾಗತಿಕ ತಾಪಮಾನದಲ್ಲಿ ಏರಿಳಿತ, ಅತೀ ಉಷ್ಣತೆ, ಆಮ್ಲ ಮಳೆ, ಪ್ರವಾಹ, ûಾಮಗಳಂತಹ ಪ್ರಕೃತಿ ವಿಕೋಪಗಳು ಎದುರಾಗುತ್ತಿವೆ. ಆದ್ದರಿಂದ ನಾವೆಲ್ಲರೂ ಮನುಕುಲದ ಉಳಿವಿಗೆ ಹಾಗೂ ಮುಂದಿನ ಜನಾಂಗಕ್ಕೆ ನಿಸರ್ಗದ ಪರಿಕರಗಳನ್ನು ಉಳಿಸಿ-ಸಂರಕ್ಷಿಸಲು ಓಝೊàನ್ ರಕ್ಷಿಸಬೇಕಾಗಿದೆ, ಅದಕ್ಕಾಗಿ ವಿದ್ಯಾರ್ಥಿಗಳು, ಜನರು, ಸಮಾಜ ಹಾಗೂ ಸಮುದಾಯವನ್ನು ಎಚ್ಚರಿಸಲು ಹಾಗೂ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟಂಬರ್16 ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತಿದೆ.
ಈ ವರ್ಷದ (2023) ಓಝೋನ್ ದಿನದ ಇಡೀ ವಿಶ್ವವು “ಜನರಲ್ಲಿ ಓಝೋನ್ ರಕ್ಷಣೆಯ ಪರಿಕಲ್ಪನೆಯನ್ನು ಮೂಡಿಸಲು’ ಭೂಮಿಯ ಮೇಲೆ ವಾಸಿಸುವ ಜೀವಿಯ ರಕ್ಷಣೆಗೆ ಜಾಗತಿಕ ಸಹಕಾರ’ ಎಂಬ ಘೋಷವಾಕ್ಯದೊಂದಿಗೆ ಸಾಮಾಜಿಕ ಜಾಗೃತಿಗಾಗಿ ಕರೆ ಕೊಟ್ಟಿದೆ. ಎಲ್ಲ ರಾಷ್ಟ್ರಗಳ ಪಾಲುಗಾರಿಕೆ ಮತ್ತು ಸಹಭಾಗಿತ್ವದಡಿಯಲ್ಲಿ ಅನೇಕ ಕ್ರೀಯಾಯೋಜನೆಗಳನ್ನು ರೂಪಿಸಿ ಚಟುವಡಿಕೆಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ಓಝೋನ್ ರಕ್ಷಣೆಗಾಗಿ ಕೈ ಜೋಡಿಸಬೇಕೆಂಬುದೇ ಈ ದಿನದ ಪ್ರಮುಖ ಧ್ಯೇಯೋದ್ದೇಶವಾಗಿದೆ.
ಹೀಗೆ ಓಝೋನ್ ಪದರದಲ್ಲಿ ಉಂಟಾಗುತ್ತಿರುವ ಸಣ್ಣ ರಂಧ್ರಗಳಿಂದ ಸೂರ್ಯನಿಂದ ಬಿಡುಗಡೆಗೊಳ್ಳುವ ಶಾಖ ಅಥವಾ ಉಷ್ಣತೆಯು ಮಿತಿಮೀರಿದೆ. ಇದರಿಂದ ನಮ್ಮ ಸುತ್ತಮುತ್ತಲಿನ ಪರಿಸರ, ಜಾಗತಿಕ ತಾಪಮಾನದಲ್ಲಿ ಏರುಪೇರು, ಇಂಗಾಲದ ಹೊರಸೂಸುವಿಕೆಯ ಪ್ರಮಾಣದಲ್ಲಿ ಹೆಚ್ಚಳ, ವಾಯು ಮಾಲಿನ್ಯ ಮತ್ತು ಹಸುರು ಮನೆ ಪರಿಣಾಮಗಳಂತಹ ಸನ್ನಿವೇಶಗಳು ನಿರ್ಮಾಣವಾಗುತ್ತಿರುವದು ತೀರಾ ಕಳವಳಕಾರಿ ಸಂಗತಿ.
ಇವೆಲ್ಲವುಗಳಿಂದ ಹಿಮ ಪರ್ವತಗಳು ಕರಗಿ ಸಮುದ್ರ ಮಟ್ಟ ಹೆಚ್ಚಾಗಿ ಹವಾಮಾನದಲ್ಲಿ ವಿಪರೀತ ಏರುಪೇರುಗಳಾಗಿ ಪ್ರಕೃತಿ ವಿಕೋಪಗಳಿಗೆ ಆಹ್ವಾನ ಒಡ್ಡುತ್ತಿದೆ. ಇದು ಹೀಗೆಯೇ ಮುಂದುವರೆದರೆ ಜಾಗತಿಕ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಭೀಕರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಪರಿಸರವನ್ನು ಹಾಳು ಮಾಡುತ್ತಿರುವದರಿಂದಲೇ ನಾವು ಬರಗಾಲ, ಅತಿವೃಷ್ಟಿ, ಸುನಾಮಿ, ಆಮ್ಲ ಮಳೆ, ಪ್ರವಾಹ, ತಾಪಮಾನ ಏರಿಕೆ, ಹಿಮ ಪರ್ವಗಳು ಕರಗುವುದು ಮತ್ತು ವಾಯು ಮಾಲಿನ್ಯ ಮತ್ತು ಹಸಿರು ಮನೆ ಪರಿಣಾಮಗಳಂತಹ ಎಲ್ಲ ಸಮಸ್ಯೆಗಳು ಎದುರಾಗುತ್ತವೆ. ಇಂದು ಮನುಕುಲಕ್ಕೊಂದು ಎಚ್ಚರಿಕೆಯ ಗಂಟೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಆದ್ದರಿಂದ ಭೂಮಿಯ ಮೇಲೆ ರಕ್ಷಾ ಕವಚ ಅಥವಾ ಹೊದಿಕೆಯಂತೆ ಇರುವ ಓಝೋನ್ ಪದರವು ಭೂಮಿಯಿಂದ ಮೇಲ್ಮೈ ಸುಮಾರು 23 ರಿಂದ 24 ಕಿ.ಮೀ ದೂರದಲ್ಲಿದ್ದು, ಅದು 0.3ರಿಂದ 1ರ ಪ್ರಮಾಣದಲ್ಲಿ ಅನಿಲವನ್ನು ಪರಿಸರದಲ್ಲಿ ಹರಡದಂತೆ ಎಚ್ಚರ ವಹಿಸಬೇಕಾಗಿದೆ. ಇರುವುದೊಂದೆ ಭೂಮಿ, ಉಸಿರಾಡುವುದೋಂದೇ ಗಾಳಿ, ಕುಡಿಯುವುದೊಂದೇ ನೀರು ಹೀಗಿರುವಾಗ ಅವುಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಉಳಿಸಬೇಕಾದ ಅಗತ್ಯವಾಗಿದೆ.
ಇಡಿ ಭೂ ಮಂಡಲವನ್ನು ಆವರಿಸಿರುವ ಓಝೊàನ್ ಪದರವು ಭೂಮಿಯ ಮೇಲಿರುವ ಸಕಲ ಜೀವ-ಸಂಕುಲಗಳನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ. ಅದಕ್ಕಾಗಿ ಎಲ್ಲರೂ ಗಿಡ-ಮರಗಳನ್ನು ನೆಟ್ಟು “”ಹಸುರೇ ನಮ್ಮ ಉಸಿರು” ಎಂಬುದನ್ನು ಅರಿತು ಪ್ರತಿಯೊಂದು ಶಾಲೆ-ಕಾಲೇಜುಗಳಲ್ಲಿ ವಿಶ್ವ ಪರಿಸರ ದಿನಾಚರಣೆ, ಮಾಲಿನ್ಯ ರಹಿತ ದಿನ, ಓಝೋನ್ ಡೇ, ವನ ಸಂವರ್ಧನೆ ಹೀಗೆ ಅನೇಕ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಸಮಾಜ/ಸಮುದಾಯಗಳಲ್ಲಿ ಪೃಥ್ವಿ, ಪರಿಸರ ಸಂರಕ್ಷಣೆ ಮತ್ತು ಪರಿಸರಾತ್ಮಕ ಪ್ರಜ್ಞೆ ಮೂಡಿಸುವುದು ಇಂದಿನ ಅಗತ್ಯತೆಯಾಗಿದೆ.
ಪ್ರತಿಯೊಂದು ಶಾಲೆ-ಕಾಲೇಜುಗಳಲ್ಲಿ ಎನ್.ಎಸ್.ಎಸ್. ಹಾಗೂ ಇಕೋ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ, ವಾಹನ ರಹಿತ ದಿನ, ಗಿಡ-ಮರ ಬೆಳೆಸುವುದು, ವೃಕ್ಷ ಮ್ಯಾರಾಥಾನ್ ಗಳಂತಹ ಪರಿಸರ ಸಂರಕ್ಷಣೆಗೆ ಸಂಬಂ ಸಿದ ಕಾರ್ಯಕ್ರಮಗಳು, ಜನಜಾಗೃತಿ ಜಾಥಾ ಹಾಗೂ ಅಭಿಯಾನಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕಾಗಿದೆ.
ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಯು ತನ್ನ ಹಾಗೂ ಮುಂದಿನ ಪೀಳಿಗೆಯ ಬದುಕಿಗೆ ಉತ್ತಮ ಪರಿಸರವನ್ನು ನೀಡಬೇಕಾಗಿರುವದು ಇಂದಿನ ಆವಶ್ಯಕತೆಯಾಗಿದೆ. ಮನುಕುಲದ ಉಳಿವಿಗಾಗಿ ಓಝೊàನ್ ರಕ್ಷಣೆ ಅತ್ಯಗತ್ಯವಾಗಿದ್ದು, ಪ್ರಕೃತಿ ಸಂಪತ್ತಿನ ಆಕರಗಳನ್ನು ಮುಂದಿನ ತಲೆಮಾರಿನವರಿಗೂ ಉಳಿಸಿ ಕೊಡಬೇಕಾದ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ. ಜಾಗತಿಕ ಮಟ್ಟದಲ್ಲಿ ಅನೇಕ ಸಮ್ಮೇಳನ, ಚರ್ಚೆ, ಸಭೆ ಮತ್ತು ಒಪ್ಪಂದಗಳು ಏರ್ಪಟ್ಟು ಪರಿಸರ ರಕ್ಷಣೆ ಮತ್ತು ಹವಾಮಾನದಲ್ಲಾಗುತ್ತಿರುವ ಬದಲಾವಣೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಪರಿಸರಾತ್ಮಕ ನೀತಿಗಳು, ಕಠಿಣ ನಿರ್ಧಾರಗಳು ಹೊರ ಬಂದಾಗ ಮಾತ್ರ ಪೃಥ್ವಿ, ಪರಿಸರ ಮತ್ತು ಓಝೊàನ್ ನಂತಹ ಪ್ರಕೃತಿಯ ಕೊಡುಗೆಗಳು ನಮ್ಮ ಮುಂದಿನ ಜನಾಂಗಕ್ಕೆ ಉಳಿಯಲು ಸಾಧ್ಯ.
-ಮಲ್ಲಪ್ಪ. ಸಿ.
ಖೊದ್ನಾಪೂರ ತಿಕೋಟಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.