UV Fusuion: ರಾಜ್ಯದ ಮೊದಲ ಆಸ್ಟ್ರೋ ಫಾರ್ಮ್: ಅತ್ಯುತ್ತಮ ಖಗೋಳ ಪ್ರವಾಸಿ ಕೇಂದ್ರ
Team Udayavani, Sep 20, 2023, 3:00 PM IST
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಕುನ್ನೂರು ಗ್ರಾಮದ ರೈತನ ಮಗ, ಹಳ್ಳಿ ಹೈದ, ಯುವ ಪ್ರತಿಭೆ ನಿರಂಜನಗೌಡ ಖಾನಗೌಡ್ರ ಅವರು ದುಂಡಶಿ ಅರಣ್ಯ ವಲಯದ ಅಂಚಿನಲ್ಲಿರುವ ಹಳೇ ತರ್ಲಘಟ್ಟ ಸಮೀಪದ ನವಿಲಗದ್ದೆ ಗುಡ್ಡದಲ್ಲಿರುವ ತಮ್ಮ ಸುಮಾರು 60 ಎಕರೆ ಜಮೀನಿನಲ್ಲಿ ರಾಜ್ಯದಲ್ಲೇ ಮೊದಲ ಆಸ್ಟ್ರೋಫಾರ್ಮ್ ನಿರ್ಮಿಸುವ ಮೂಲಕ ಖಗೋಳ ಪ್ರವಾಸೋದ್ಯಮ ಕೇಂದ್ರ ತೆರೆದಿದ್ದಾರೆ.
ನವಿಲಗದ್ದೆ ಗುಡ್ಡವು ಹುಬ್ಬಳ್ಳಿಯಿಂದ 40 ಕಿ.ಮೀ. ಮತ್ತು ಮುಂಡಗೋಡದಿಂದ 10 ಕಿ.ಮೀ. ಅಂತರದಲ್ಲಿದೆ. ದೇಶದ ಕೆಲವು ರಾಜ್ಯಗಳಲ್ಲಿ ಖಗೋಳ ವೀಕ್ಷಣೆಗೆ ವಾರಕ್ಕೊಮ್ಮೆ ಸಾರ್ವಜನಿಕವಾಗಿ ಅವಕಾಶವಿರುವ ತಾಣಗಳು ಬೆರಳೆಣಿಕೆಯಷ್ಟು ಸಿಗುತ್ತವೆ ಹಾಗೂ ವೈಯಕ್ತಿಕ ಸಂಸ್ಥೆಗಳ ಸಂಶೋಧನ ಕೇಂದ್ರದಲ್ಲಿ ಇವೆ. ಆದರೆ ಪ್ರತಿದಿನ ಸಾರ್ವಜನಿಕರಿಗೆ ಖಗೋಳ ವೀಕ್ಷಣೆ ಸ್ಥಳಗಳು ಯಾವುದು ಇರಲಿಲ್ಲ. ಹಳ್ಳಿ ಹುಡುಗನ ಸತತ ಪ್ರಯತ್ನದಿಂದ ಕರ್ನಾಟಕದ ಏಕೈಕ ಖಗೋಳ ವೀಕ್ಷಣಾ ತಾಣವಾಗಿದ್ದು, ಇದುವರೆಗೂ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಇಲ್ಲಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ.
ಹೈದ್ರಾಬಾದ್ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಎಂಎಸ್ಸಿ(ಆಸ್ಟ್ರೊಫಿಸಿಕ್ಸ್) ಪೂರ್ಣಗೊಳಿಸಿರುವ ನಿರಂಜನ ಗೌಡ 27 ವರ್ಷದ ಯುವಕ. ನಕ್ಷತ್ರ ವೀಕ್ಷಣೆಗೆ ಬೆಳಕಿನ ಮಾಲಿನ್ಯ ಕಡಿಮೆ ಇರುವ ನವಿಲಗದ್ದೆ ತಮ್ಮ ಜಮೀನು ಆಯ್ಕೆ ಮಾಡಿದ್ದಾರೆ. ಜನರಿಗೆ ತಾರೆಗಳ ಲೋಕ ಪರಿಚಯಿಸಲು 6 ದೂರದರ್ಶಕ ಉಪಕರಣಗಳು, ಮಸೂರಗಳು, ಐಪೀಸ್‌ಗಳನ್ನು ಖರೀದಿಸಿ ಆಸ್ಟ್ರೊ ಫಾರ್ಮ್ ಆರಂಭಿಸಿದ್ದಾರೆ.
ಆಸ್ಟ್ರೋ ಫಾರ್ಮ್ ಮೂಲಕ ನಕ್ಷತ್ರ ಮತ್ತು ಖಗೋಳ ವಿಸ್ಮಯಗಳನ್ನು ನೋಡಲು ಅಕ್ಟೋಬರ್ ನಿಂದ ಮೇ ತಿಂಗಳು ಸೂಕ್ತ ಸಮಯ. ಮಳೆಗಾಲದಲ್ಲಿ ಮೋಡ ಮುಸುಕಿರುತ್ತದೆ. ನಕ್ಷತ್ರಗಳ ವೀಕ್ಷಣೆ ಆಗದು. ಸಂಜೆ 5.30ಕ್ಕೆ ಬರುವ ವೀಕ್ಷಕರಿಗೆ ಲಘು ಉಪಾಹಾರದ ವ್ಯವಸ್ಥೆ ಇರುತ್ತದೆ. ಸಂಜೆ 7ರಿಂದ ನಕ್ಷತ್ರ ವೀಕ್ಷಿಸಬಹುದು. ರಾತ್ರಿ ಗುಡ್ಡದಲ್ಲೇ ತಂಗಲು 40 ಕ್ಯಾಂಪಿಂಗ್ ಟೆಂಟ್ ಮತ್ತು 8 ಶೆಲ್ಟರ್‌ಗಳಿವೆ. ರಾತ್ರಿ ಊಟ ಇರುತ್ತದೆ. ಆರಂಭಿಕ ದಿನಗಳಲ್ಲಿ ಉಚಿತ ಪ್ರವೇಶವಿತ್ತು. ಈಗ ಟಿಕೆಟ್ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದು ನಿರಂಜನ್ ಮಾಹಿತಿ ನೀಡಿದ್ದಾರೆ.
ಇಲ್ಲಿನ ಶಕ್ತಿಯುತ ಟೆಲಿಸ್ಕೋಪ್‌ಗಳ ಮೂಲಕ ಗುರುಗ್ರಹ, ಚಂದ್ರ, ಸೆಟರ್ನ್ ರಿಂಗ್ ಗಳು, ಮಾರ್ಸ್ ದಿ ರೆಡ್ ಪ್ಲಾನೆಟ್, ಉಲ್ಕೆಗಳು (ಶೂಟಿಂಗ್ ಸ್ಟಾರ್ಗಳು), ಓರಿಯನ್ ನೆಬ್ಯುಲಾ, ವಿಂಟರ್ ಕ್ಷೀರಪಥ ಮತ್ತು ಅನೇಕ ನಕ್ಷತ್ರ ಸಮೂಹಗಳು ಹಾಗೂ ಗ್ಯಾಲಕ್ಸಿಗಳನ್ನು ನೋಡಬಹುದು. ಇಲ್ಲಿ ಪ್ರವಾಸಿಗರಿಗೆ ಏರ್ ರೈಫಲ್ ಶೂಟಿಂಗ್, ಕ್ಯಾಪಿಂಗ್, ಮೂವಿ ನೈಟ್ ಸೌಲಭ್ಯವಿದೆ.
ಅರಣ್ಯ ಮತ್ತು ಸ್ವಚ್ಛ ಪರಿಸರವುಳ್ಳ ನವಿಲಗದ್ದೆಯು ಬಾರ್ಟಲ್ -2 ವಲಯದಲ್ಲಿ ಬರುತ್ತದೆ. ರಾತ್ರಿ ವೇಳೆ ಆಕಾಶ ವೀಕ್ಷಣೆಗೆ ಪ್ರಶಸ್ತ ಸ್ಥಳ. ದೂರದರ್ಶಕ ಯಂತ್ರಗಳ ಮೂಲಕ ತಾರಾ ಮಂಡಲ, ಗ್ರಹಗಳು, ಚಂದ್ರ, ಕ್ಷುದ್ರಗ್ರಹಗಳು, ಧೂಮಕೇತು, ನಿಹಾರಿಕೆಗಳನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಯುವ ವಿಜ್ಞಾನಿಗಳ ಸಂಶೋಧನೆಗೆ ಸೂಕ್ತ ಸ್ಥಳವಾಗಿದೆ.
ಇಲ್ಲಿ ನಕ್ಷತ್ರಪುಂಜಗಳು, ಚಂದ್ರನ ಹಂತಗಳು, ಅರೋರಾಗಳು, ಗ್ಯಾಲಕ್ಸಿ, ನೆಬ್ಯುಲಾ, ಗ್ರಹಗಳು ಮತ್ತು ಉಪಗ್ರಹಗಳನ್ನು ನೋಡುವದರ ಜತೆಗೆ ಬ್ರಹ್ಮಾಂಡದ ಆಚೆಗೆ ಏನಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಯುವ ವಿಜ್ಞಾನಿಗಳ ಸಂಶೋಧನೆಗೆ ಸಹಕಾರಿಯಾಗಿದೆ. ರಾಜ್ಯದಲ್ಲಿ ಖಗೋಳ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬುದು ನನ್ನ ಕನಸು. ಆಸ್ಟ್ರೋ ಫಾರ್ಮ್ ನಲ್ಲಿ ಇನ್ನಷ್ಟು ಉನ್ನತ ಮಟ್ಟದ ಟೆಲಿಸ್ಕೋಪ್ ಮತ್ತು ಮೌಂಟ್ಸ್‌ಗಳನ್ನು ಹಂತ ಹಂತವಾಗಿ ಅಳವಡಿಸುವ ಉದ್ದೇಶವಿದೆ ಎಂದು ಆಸ್ಟ್ರೋ ಫಾರ್ಮ್ ನಿರ್ಮಿಸಿದ ಯುವಕ ನಿರಂಜನ ಗೌಡ ಖಾನಗೌಡ್ರ ಹೇಳುತ್ತಾರೆ.
-ಶಿವಾನಂದ ಎನ್. ದೊಡ್ಡಮನಿ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.