Darshan Puttannaiah: ಮೇಲುಕೋಟೆ ದೇಗುಲದ ಸುತ್ತ ಕಾಂಕ್ರಿಟ್‌ ರಸ್ತೆ


Team Udayavani, Sep 18, 2023, 3:54 PM IST

tdy-15

ಮೇಲುಕೋಟೆ: ಚೆಲುವ ನಾರಾಯಣನ ದಿವ್ಯಕ್ಷೇತ್ರ ವಾದ ಮೇಲುಕೋಟೆ ಅಭಿವೃದ್ಧಿಯನ್ನು ದೇಗುಲದ ಸುತ್ತ ಕಾಂಕ್ರಿಟ್‌ ರಸ್ತೆ ನಿರ್ಮಿಸುವ ಮೂಲಕ ಆರಂಭಿಸಲಾಗುತ್ತಿದೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು.

ಶ್ರೀ ಚೆಲುವನಾರಾಯಣಸ್ವಾಮಿ ದೇಗುಲದ ಸುತ್ತ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ದರು. ರಸ್ತೆ ನಿರ್ಮಾಣಕ್ಕೆ ಹಲವು ವರ್ಷ ಗಳಿಂದ ಇದ್ದ ತೊಡಕನ್ನು ನಿವಾರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಚೆಲುವ ನಾರಾಯಣಸ್ವಾಮಿ ದೇಗುಲ ಭಾರತೀಯ ಸಂರಕ್ಷಿತ ಸ್ಮಾರಕವಾಗಿರುವ ಕಾರಣ ಕೇಂದ್ರ ಪುರಾತತ್ವ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆದು ನಂತರವೇ ಕಾಮಗಾರಿ ಕಾರ್ಯ ಆರಂಭಿಸಲು ಮತ್ತು ಇಲಾಖಾ ಅಧಿಕಾರಿಗಳ ಸಮಕ್ಷಮದಲ್ಲೇ ಕೆಲಸ ನಿರ್ವಹಿಸಲು ಭೂ ಸೇನಾ ನಿಗಮದ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದ್ದೇನೆ ಎಂದರು.

ಅನುಮತಿ ದೊರೆತ ನಂತರ ಕಾಮಗಾರಿ ಆರಂಭಿಸಿ ಗುಣಮಟ್ಟದೊಂದಿಗೆ ಶೀಘ್ರ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲು ಗುತ್ತಿಗೆ ದಾರರಿಗೂ ಸೂಚಿಸಿ ದ್ದೇನೆ. ಪ್ರತಿಹಂತದಲ್ಲೂ ನಾನೇ ನಿಂತು ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸುತ್ತೇನೆ. ದೇಗುಲ ಕೈಂಕ ರ್ಯ ಪರರೂ ಹಾಗೂ ನಾಗರಿಕರೂ ರಸ್ತೆ ನಿರ್ಮಾಣ ದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಜಿಲ್ಲಾಉಸ್ತುವಾರಿ ಸಚಿವ ಚಲುವ ರಾಯಸ್ವಾಮಿ ಸೇರಿದಂತೆ ಸರ್ಕಾರ ಮೇಲುಕೋಟೆ ಅಭಿವೃದ್ಧಿಗೆ ಪ್ರೋತಾಹ ನೀಡುತ್ತಿದ್ದು ಹಲವು ಸಚಿವರೂ ಸಹಕಾರ ನೀಡುತ್ತಿದ್ದಾರೆ. ವೈರಮುಡಿ ಉತ್ಸವದ ವೇಳೆಗೆ ಮೇಲುಕೋಟೆಯಲ್ಲಿ ಅತ್ಯಾಧುನಿಕ ಮಾದರಿಯ ಶೌಚಾಲಯಗಳು, ಶುದ್ಧೀಕರಿಸಿದ ಕುಡಿವ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸುವುದರ ಜತೆಗೆ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗು ತ್ತದೆ. ವೈರಮುಡಿ ಉತ್ಸವವವನ್ನು ಕಳೆದೆಲ್ಲ ಸಲಕ್ಕಿಂತ ವೈಭವವಾಗಿ ನಡೆಸಲಾಗುತ್ತದೆ ಎಂದರು.

ರಸ್ತೆ ಗುತ್ತಿಗೆದಾರ ಮನ್‌ಮುಲ್‌ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಪ್ರಥಮ ಸ್ಥಾನೀಕ ಕರಗಂ ರಾಮಪ್ರಿಯ, ಗ್ರಾಪಂ ಸದಸ್ಯ ಜಯರಾಮು, ರೈತಸಂಘದ ಮುಖಂಡ ನ್ಯಾಮನಹಳ್ಳಿ ಬಿ.ಶಿವ ರಾಮೇಗೌಡ ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ, ತಾಲೂಕು ರೈತಸಂಘದ ಉಪಾಧ್ಯಕ್ಷ ಈಶಮುರುಳಿ, ಪುಳಿಯೋಗರೆ ಸುಬ್ಬಣ್ಣ, ದಿಲೀಪ್‌, ಗಂಗಾ, ಯೋಗಿ, ನಾಗೇಗೌಡ, ಲಕ್ಷ್ಮೀ ನರಸಿಂಹೇಗೌಡ, ನ್ಯಾಮನಹಳ್ಳಿ ಎನ್‌.ಎಸ್‌ನಾಗರಾಜು, ಬಳಿಘಟ್ಟ ಪುಟ್ಟರಾಜು, ಬೋರಾಪುರ ಉಮೇಶ್‌, ದೊಡ್ಡಿಘಟ್ಟ ಸುರೇಶ್‌, ಹೊಸಹಳ್ಳಿ ಯೋಗಣ್ಣ ಕಾಂಗ್ರೆಸ್‌ ಮುಖಂಡ ಯೋಗಾನರಸಿಂಹೇಗೌಡ. ಭೂಸೇನಾ ನಿಗಮ ಸಹಾಯಕ ಕಾರ್ಯಪಾಲಕ ಅಭಿನಂತರೆ ಚೈತ್ರಾ ಕಾರ್ಯಪಾಲಕ ಅಭಯಂತರರು ಕೆಆರ್‌ಐಡಿಎಲ್‌ ಸೋಮಶೇಖರ್‌ ಇತರರಿದ್ದರು.

ಮರು ಚಾಲನೆ: ಶಾಸಕರಾಗಿದ್ದ ವೇಳೆ ಕೆ.ಎಸ್‌ಪುಟ್ಟಣ್ಣಯ್ಯ ಮಂಜೂರು ಮಾಡಿಸಿದ್ದ ರಸ್ತೆ ಕಾಮಗಾರಿಗೆ ಸಚಿವ ನಾರಾಯಣಗೌಡರು ಭೂಮಿಪೂಜೆ ಮಾಡಿದ್ದರಾದರೂ ಕೆಲಸ ಮಾತ್ರ ಪ್ರಗತಿ ಯಾಗದೆ ನಿಂತು ಹೋಗಿತ್ತು. ದರ್ಶನ್‌ ಪುಟ್ಟಣ್ಣ ಯ್ಯ ಶಾಸಕರಾದ ನಂತರ ತಂದೆ ಮಂಜೂರು ಮಾಡಿಸಿದ್ದ ಕಾಮಗಾರಿಯ ಆರಂಭಕ್ಕಿದ್ದ ತೊಡಕು ಬಗೆಹರಿಸಿ ಭೂಮಿಪೂಜೆ ಮಾಡಿದರು. ಇದರಿಂದ ತಂದೆಯ ಇಚ್ಛೆಯನ್ನು ಮಗ ಶಾಸಕರಾಗಿ ಪೂರೈಸಿದಂತಾಗಿದೆ.

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.