Tortoises ಅಪರೂಪದ ಆಮೆಯೊಂದನ್ನು ಸಂರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಮಕ್ಕಳು

Team Udayavani, Sep 19, 2023, 7:13 PM IST

Tortoises ಅಪರೂಪದ ಆಮೆಯೊಂದನ್ನು ಸಂರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಮಕ್ಕಳು

ಗಂಗಾವತಿ: ಅಳಿವಿನಂಚಿನ ಜೀವಿಗಳ ಪಟ್ಟಿಯಲ್ಲಿರುವ ಸುಮಾರು 60 ವಯಸ್ಸಿನ ಮತ್ತು ಮೂರುವರೆ ಕೆಜಿ ತೂಕದ ಆಮೆಯೊಂದನ್ನು ಮಕ್ಕಳು ಸಂರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿ ಪರಿಸರ ಕಾಳಜಿಯ ಅಪರೂಪದ ಘಟನೆ ಜಯನಗರದ ಸತ್ಯನಾರಾಯಣ ಪೇಟೆಯಲ್ಲಿ ಜರುಗಿದೆ.

ಮಕ್ಕಳು ಆಟವಾಡಿಕೊಂಡಿರುವ ಸಂದರ್ಭದಲ್ಲಿ ನಸುಸಂಜೆಯ ಕತ್ತಲಲ್ಲಿ ಆಮೆಯೊಂದು ನಡೆದುಕೊಂಡು ಬಂದಿದೆ. ಇದನ್ನು ಗಮನಿಸಿದ ಎಸ್‌ಕೆಎನ್‌ಜಿ ಕಾಲೇಜಿನ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿ ಚೇತನ ಮುದ್ಗಲ್ ಹಾಗೂ ಇತರೆ ಮಕ್ಕಳು ರಕ್ಷಣೆ ಮಾಡಿದ್ದಾರೆ.

ಮಕ್ಕಳಾದ ಮಾನಸ, ಶ್ರೇಯಸ್, ಸಂಹಿತಾ ನೇತೃತ್ವದಲ್ಲಿನ ತಂಡ, ಆಮೆಯನ್ನು ಹಿಡಿದು ಟಬ್‌ನಲ್ಲಿ ನೀರು ತುಂಬಿಸಿ ಆಹಾರ ನೀಡಿ ಆರೈಕೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಪ್ರಾದೇಶಿಕ ಅಧಿಕಾರಿ ಶಿವರಾಜ ಮೇಟಿ ಅವರಿಗೆ ದೂರವಾಣಿ ಕರೆ ಮಾಡಿ ಆಮೆಯ ಬಗ್ಗೆ ಮಾಹಿತಿ ನೀಡಿದ್ದು ಕೂಡಲೆ ಸ್ಪಂದಿಸಿದ ಶಿವರಾಜ ಮೇಟಿ, ತಮ್ಮ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿ ಆಮೆಯನ್ನು ವಶಕ್ಕೆ ಪಡೆದುಕೊಂಡು ಸಮೀಪದ ದೇವಘಾಟದ ತುಂಗಭದ್ರಾ ನದಿಯ ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

ಮಕ್ಕಳು ರಕ್ಷಣೆ ಮಾಡಿರುವ ಈ ಆಮೆ ಬ್ಲಾಕ್ ಮಾರ್ಶ್ ಟರ್ಟಲ್ ಎಂಬ ಜಾತಿಗೆ ಸೇರಿದ್ದು ಅಂತರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಹೊರಡಿಸಿರುವ ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಈ ಆಮೆ ಕೆಂಪು ಪಟ್ಟಿಯಲ್ಲಿದೆ. ಸುಮಾರು ಮೂರರಿಂದ ನಾಲ್ಕು ಕೆಜಿ ಭಾರವಿದ್ದು, ಸುಮಾರು 60 ವರ್ಷ ವಯಸ್ಸಾಗಿದೆ. 12ರಿಂದ 15 ಇಂಚು ಉದ್ದ, 16 ಇಂಚು ಅಗಲವಿದೆ. ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣಕ್ಕೆ ಸಮೀಪದ ಕೆರೆ, ದೊಡ್ಡ ಕಾಲುವೆಗಳಿಂದ ಆಮೆ ಬಂದಿರುವ ಸಾಧ್ಯತೆ ಇದೆ. ಇಂತಹ ಗ್ರಾಣಿಗಳು ಕಂಡ ತಕ್ಷಣ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಸಂರಕ್ಷಿಸಬೇಕು.
-ಶಿವರಾಜ್ ಮೇಟಿ ತಾಲೂಕು ಅರಣ್ಯಾಧಿಕಾರಿ.

ಟಾಪ್ ನ್ಯೂಸ್

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

1-kushtagi

Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.