Karwar ರವೀಂದ್ರನಾಥ ಠಾಗೋರ್ ಮೂರ್ತಿ ಬಲಗಣ್ಣಿಗೆ ಧಕ್ಕೆ!
ಠಾಗೋರ್ ಕಡಲತೀರದಲ್ಲಿರುವ ಮೂರ್ತಿಯ ಬಲಗಣ್ಣು ಕಳಚಿದೆ
Team Udayavani, Sep 20, 2023, 9:19 PM IST
ಕಾರವಾರ: ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಠಾಗೋರ್ ಅವರ ಮೂರ್ತಿಯ ಬಲಗಣ್ಣು ಕಳಚಿ ಹೋಗಿದ್ದು ನಗರಸಭೆ ತಕ್ಷಣ ಸರಿಪಡಿಸಬೇಕಿದೆ.
ಕವಿ, ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಠಾಗೋರರ ಮೂರ್ತಿ ಕಾರವಾರ ಬೀಚ್‌ನಲ್ಲಿ ವರ್ಷದ ಹಿಂದೆ ಮರು ಸ್ಥಾಪನೆ ಮಾಡಲಾಗಿತ್ತು. ಮಹಾರಾಷ್ಟ್ರದ ಕಲಾವಿದರಿಂದ ಈ ಮೂರ್ತಿ ರೂಪಿಸಿ ತರಲಾಗಿತ್ತು. ಆದರೆ ಇದೀಗ ರವೀಂದ್ರನಾಥ್ ಠಾಗೋರ್ ಅವರ ಬಲಗಣ್ಣು ಕಳಚಿ ಹೋಗಿದೆ. ಕಣ್ಣಿನ ಗುಡ್ಡೆಯ ಭಾಗಕ್ಕೆ ಪೆಟ್ಟಾಗಿದೆ. ಮೂರ್ತಿಯನ್ನು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಕವಿ ಕಣ್ಣು ಗುಡ್ಡೆಗೆ ಪೆಟ್ಟಾಗಿರುವುದು ಪ್ರವಾಸಿಗರ ಗಮನಕ್ಕೆ ಬರುತ್ತದೆ. ಅಲ್ಲದೆ ಕವಿಯ ಮೂರ್ತಿಯ ಪೀಠದ ಕೆಳಗೆ ಜನನ ಮತ್ತು ಮರಣ ದಿನಾಂಕ, ವರ್ಷ ನಮೂದಿಸಿಲ್ಲ.
ಫ್ಲೈಓವರ್ ನಿರ್ಮಾಣಕ್ಕೆ ಮುನ್ನ:
ಫ್ಲೈಓವರ್ ನಿರ್ಮಾಣ, ರಸ್ತೆ ಅಗಲೀಕರಣ ಕಾರಣ 2015ರಲ್ಲಿ ಕಾರವಾರ ಕಡಲತೀರದಲ್ಲಿದ್ದ ಕವಿ ರವೀಂದ್ರನಾಥ್ ಠಾಗೋರರ ಮೂರ್ತಿಯನ್ನು ಸ್ಥಳಾಂತರಿಸಲಾಯಿತು. ಆ ಮೂರ್ತಿ ಕೆಳಗೆ ಕವಿ ರವೀಂದ್ರನಾಥ ಠಾಗೋರ್ ಹೇಳಿದ್ದ ಅದ್ಭುತ ಸಾಲನ್ನು ಕಲ್ಲಿನಲ್ಲಿ ಕೆತ್ತಿಸಿ ಹಾಕಲಾಗಿತ್ತು. ಆದರೆ ಇದೀಗ ಹೆದ್ದಾರಿ ಅಗಲೀಕರಣ ಹಾಗೂ ಫ್ಲೈಓವರ್ ನಿರ್ಮಾಣದ ನಂತರ ನಗರಸಭೆ ರವೀಂದ್ರನಾಥ್ ಠಾಗೋರರ ಪ್ರತಿಮೆ ಮರು ಸ್ಥಾಪಿಸಿದೆ. ಆದರೆ ಅವರು ಕಾರವಾರ ಬೀಚ್ ಕುರಿತು ಹೇಳಿದ ಸಾಲನ್ನು ಕೈಬಿಡಲಾಗಿದೆ. ಮೂರ್ತಿ ಕಣ್ಣು ಸರಿಪಡಿಸುವ ವೇಳೆ ರವೀಂದ್ರನಾಥ್ ಠಾಗೋರ್ ಹೇಳಿದ ವಾಕ್ಯವನ್ನು ಪುನಃ ಬರೆಸಲು ಪ್ರಾಜ್ಞರು ಆಗ್ರಹಿಸಿದ್ದಾರೆ.
ಪ್ರಕೃತಿ ಪರಿಶೋಧ ಕೃತಿಯಲ್ಲಿ ಕಾರವಾರದ ಅರ್ಧಚಂದ್ರಾಕೃತಿಯ ಬೀಚ್ ಬಗ್ಗೆ ಪ್ರಸ್ತಾಪಿಸುವ ಟಾಗೋರ್ “ಕಾರವಾರದ ಕಡಲತೀರವು ನಿಸರ್ಗದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಅದರೊಳಗೆ ನಮ್ಮತನವನ್ನು ಕಳೆದುಕೊಳ್ಳುವಂತೆ ನಮ್ಮನ್ನು ಸೆಳೆಯುತ್ತದೆ ಎಂಬುದನ್ನು ಅರಿತುಕೊಳ್ಳಲು ಕಾರವಾರದ ಸಮುದ್ರ ತೀರವು ಖಂಡಿತವಾಗಿಯೂ ಸೂಕ್ತ ಸ್ಥಳವಾಗಿದೆ ” ಎಂದಿದ್ದಾರೆ.
ಕವಿ ರವೀಂದ್ರನಾಥ್ ಠಾಗೋರ್ 1882ರಲ್ಲಿ ಕಾರವಾರಕ್ಕೆ ಬಂದಿದ್ದರು. ಅವರ ಸಹೋದರ ಸತ್ಯೇಂದ್ರನಾಥ ಠಾಗೋರ್ ಬ್ರಿಟಿಷ್ ಸರಕಾರದ ಅಧೀನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ಕವಿ ರವೀಂದ್ರನಾಥ್ ಠಾಗೋರ್‌ರ ಸಾಹಿತ್ಯದ ಬರವಣಿಗೆಗೆ ಕಾರವಾರ ಕಡಲತೀರದ ಸೌಂದರ್ಯ ಮುನ್ನಡಿಯಾಗಿತ್ತು ಎಂಬುದು ಗಮನಾರ್ಹ.
-ನಾಗರಾಜ್ ಹರಪನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.