Moodabidri ಸಾರ್ವಜನಿಕ ಶ್ರೀ ಗಣೇಶೋತ್ಸವ: ವಜ್ರಮಹೋತ್ಸವಕ್ಕೆ ಭಟ್ಟಾರಕ ಸ್ವಾಮೀಜಿ ಚಾಲನೆ
Team Udayavani, Sep 20, 2023, 11:54 PM IST
ಮೂಡುಬಿದಿರೆ: ಐವತ್ತೂಂಬತ್ತು ವರ್ಷಗಳ ಹಿಂದೆ ಸಮಾನಾಸಕ್ತರು ಸೇರಿ ಮೂಡುಬಿದಿರೆಯಲ್ಲಿ ಆರಂಭಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಜ್ರ ಮಹೋತ್ಸವಕ್ಕೆ ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾತನಾಡಿ, ಗಣಪತಿ ವಿಗ್ರಹಕ್ಕೆ ಮಾಲಾರ್ಪಣೆಗೈದು, ಉತ್ಸವಗಳ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರೂ ಸಹಕರಿಸಬೇಕಾಗಿದೆ ಎಂದರು.
ಪರಿಸರ ಸಂರಕ್ಷಣೆಯ
ಬದ್ಧತೆ ಇರಲಿ
ಶ್ರೀ ಕ್ಷೇತ್ರ ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಅವರು ಮಾತನಾಡಿ, ಸಾರ್ವಜನಿಕ ಉತ್ಸವ ಆಚರಿಸುವ ನಾವೆಲ್ಲರೂ ವ್ಯಕ್ತಿಗತವಾಗಿ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನಾದರೂ ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕು ಎಂದರು. ಪ್ರಧಾನ ಅರ್ಚಕ ಅಲಂಗಾರು ಈಶ್ವರ ಭಟ್ ಶ್ರೀ ಗಣೇಶ ದೇವರ ವಿಗ್ರಹ ಪ್ರತಿಷ್ಠಾಪನೆಗೈದರು.
ಟ್ರಸ್ಟ್ ಅಧ್ಯಕ್ಷ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಮಾತನಾಡಿದರು.
ಉಪಾಧ್ಯಕ್ಷರಾದ ಚೌಟರ ಅರಮನೆ ಕುಲದೀಪ ಎಂ., ಜಯಶ್ರೀ ಅಮರನಾಥ ಶೆಟ್ಟಿ , ಉದ್ಯಮಿ ತಿಮ್ಮಯ್ಯ ಶೆಟ್ಟಿ, ಸಂಚಾಲಕ ರಾಜಾರಾಮ್ ನಾಗರಕಟ್ಟೆ, ಜತೆ ಕಾರ್ಯದರ್ಶಿ ಸುದರ್ಶನ ಉಪಸ್ಥಿತರಿದ್ದರು.
ತೊಡುಗೆ ಕೊಡುಗೆ
ಕೋಶಾಧಿಕಾರಿಯಾಗಿದ್ದ ದಿ| ಲಕ್ಷ್ಮಣ ಸಂಸ್ಮರಣಾರ್ಥ ಪತ್ನಿ ಕಸ್ತೂರಿ, ಪುತ್ರ, ಹಾಲಿ ಕೋಶಾಧಿಕಾರಿ ಪ್ರಸನ್ನ ರಾವ್-ವಾಣಿಶ್ರೀ ದಂಪತಿ ಗಣಪತಿಗೆ ಚಿನ್ನದ ಅಮೃತ ಹಸ್ತಗಳು, ಟ್ರಸ್ಟ್ ಸದಸ್ಯರು, ಭಕ್ತರು ಸೇರಿ 90 ಗ್ರಾಂ. ಚಿನ್ನದ ಹಾರ,
ಸಂಚಾಲಕ ರಾಜಾರಾಮ್ ಸಾವಿರ ಮಲ್ಲಿಗೆ ಮೊಗ್ಗುಗಳ ರಜತ ಹಾರ,ಸರ್ವೋದಯ ಫ್ರೆಂಡ್ಸ್ ಅರಡಿ ಎತ್ತರದ ಬೆಳ್ಳಿಯ ಕಬ್ಬು, ನಾರಾಯಣ ಪಿ.ಎಂ.-ಮೀನಾಕ್ಷಿ ದಂಪತಿರೇಷ್ಮೆ ವಸ್ತ್ರ, ಹೇಮಚಂದ್ರ ಆಚಾರ್ಯ-ದಿವ್ಯಾ ದಂಪತಿ ರಜತ ಮಾಲೆ ಸಮರ್ಪಿಸಿದರು. ಪ್ರ. ಕಾರ್ಯದರ್ಶಿ ನಾರಾಯಣ ಪಿ.ಎಂ. ಸ್ವಾಗತಿಸಿದರು. ಉಪಾಧ್ಯಕ್ಷ ಕೃಷ್ಣರಾಜ ಹೆಗ್ಡೆವಂದಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.