Missing Case: ಅರಣ್ಯದಲ್ಲಿ 9 ಕಿ.ಮೀ. ದೂರು ಹುಡುಕಾಟ
Team Udayavani, Sep 22, 2023, 11:46 PM IST
ಸಿದ್ದಾಪುರ:ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ (28) ಅವರು ಮನೆಯಿಂದ ನಾಪತ್ತೆಯಾಗಿ 7 ದಿನಗಳು ಕಳೆದಿವೆ. ಅವರ ಹುಡುಕಾಟದ ಕಾರ್ಯ ಶುಕ್ರವಾರವೂ ಮುಂದುವರಿದಿದೆ.
ಪಶ್ಚಿಮ ಘಟ್ಟದ ತಪ್ಪಲ್ಲಿಗೆ ಹೊಂದಿಕೊಂಡಿರುವ ಮತ್ತು ದಟ್ಟ ಅರಣ್ಯಗಳಿಂದ ಆವೃತವಾದ ತೊಂಬಟ್ಟು ಮತ್ತು ಇರ್ಕಿಗದ್ದೆ ಪರಿಸರಲ್ಲಿ ಸಾಕಷ್ಟು ಕಾಡು ಪ್ರಾಣಿಗಳು, ದೊಡ್ಡ ದೊಡ್ಡ ಹೆಬ್ಟಾವುಗಳು, ಹುಲಿ-ಚಿರತೆಗಳು ಸಾಕಷ್ಟು ಇವೆ. ಇತಂಹ ದಟ್ಟವಾದ ಕಾಡಿನಲ್ಲಿ ಮರಗಳ ಮಧ್ಯೆ ಎತ್ತರ ಎತ್ತರವಾದ ಕುರುಚಲು ಗಿಡಗಳು ಇವೆ. ಈ ಗಿಡಗಳ ಮಧ್ಯೆ ಶೋಧ ಕಾರ್ಯ ಕಷ್ಟವಾದ ಕೆಲಸವಾಗಿದೆ. ದಟ್ಟವಾದ ಅರಣ್ಯದ ಒಳಗೆ ಸುಮಾರು 9 ಕಿ.ಮೀ ದೂರದವರೆಗೆ ಸ್ಥಳೀಯರೊಂದಿಗೆ ಅಮಾಸೆಬೈಲು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬಂದಿ ಶೋಧ ಕಾರ್ಯ ನಡೆಸಿದ್ದಾರೆ.
ಇಂದು ಘಾಟಿಯಲ್ಲಿ
ಯುವಕನ ಮನೆಯಿಂದ 9 ಕಿ.ಮೀ. ದೂರದ ಪಶ್ಚಿಮ ಘಟ್ಟದ ತಪ್ಪಲ್ಲಿನ ತನಕ ಹುಡುಕಾಟ ನಡೆಸಿದ್ದು, ಶನಿವಾರ ಘಾಟಿ ಪರಿಸರದಲ್ಲಿ ಹುಡುಕಾಟ ನಡೆಯಲಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.