Canada: ಖಲಿಸ್ಥಾನ ಪುಂಡಾಟಕ್ಕೆ ಟ್ರಾಡೊ ಬೆಂಬಲ- ಭಾರತದ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ

ಪಾಕ್‌ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಕೆನಡಾ ಪಿಎಂ ಭಾಗಿ | ಆಡಳಿತ ಪಕ್ಷದ ಸದಸ್ಯ ಕೂಡ ಶಾಮೀಲು

Team Udayavani, Sep 23, 2023, 12:33 AM IST

CANADA PM

ಟೊರಂಟೋ/ಹೊಸದಿಲ್ಲಿ: ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಕೃತ್ಯಗಳಿಗೆ ನೇರ ಪಿಎಂ ಜಸ್ಟಿನ್‌ ಟ್ರಾಡೊ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ಅಂಶ ಖಚಿತಪಡಿಸಿವೆ.

ಎರಡು ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾದ ಬಳಿಕ ಆ ದೇಶದಲ್ಲಿನ ರಹಸ್ಯಗಳ ಬಗ್ಗೆ ದಿನ ಕಳೆದಂತೆ ಹೊಸ ಮಾಹಿತಿ ಬಹಿರಂಗವಾಗತೊಡಗಿದೆ. ಕಿಡಿಗೇಡಿತನದ ಕೃತ್ಯಗಳಿಗೆ ಆಡಳಿತಾರೂಢ ಲಿಬರಲ್‌ ಪಾರ್ಟಿ ಆಫ್ ಕೆನಡಾದ ನಾಯಕ ಬಿಲಾಲ್‌ ಚೀಮಾ ಬಹಿರಂಗವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.
ಕೆನಡಾದಲ್ಲಿ ವಲಸೆ ಕೂಟವೊಂದು ಸಕ್ರಿಯವಾಗಿದ್ದು, ಅದು ಭಾರತೀಯ ಯುವಕರನ್ನು ಗ್ಯಾಂಗಸ್ಟರ್‌ಗಳೊಂದಿಗೆ ಸೇರುವಂತೆ, ಡ್ರಗ್ಸ್‌ ವಹಿವಾಟಿನಲ್ಲಿ ಭಾಗಿಯಾಗುವಂತೆ ಅಥವಾ ಭಾರತ-ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹೇರುತ್ತಿದೆ. ಅಷ್ಟೇ ಅಲ್ಲ, ಪಂಜಾಬ್‌ನ ಯುವತಿ ಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಲಸವನ್ನೂ ಮಾಡುತ್ತಿದೆ ಎಂದು ಗುಪ್ತಚರ ಮೂಲಗಳು ಆರೋಪಿಸಿವೆ.

ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮುಂದೆ ಪ್ರತಿಭಟನೆ ನಡೆಸುವವರು ಪ್ರಮುಖವಾಗಿ ಯುಕೆ, ಜರ್ಮನಿ ಮತ್ತಿತರ ದೇಶಗಳ ಯುವಕರಾಗಿದ್ದಾರೆ. ಸ್ಥಳೀಯ ಸಿಕ್ಖ್ ಕೆನಡಿಯನ್ನರ ಆಹ್ವಾನದ ಮೇರೆಗೆ ಅವರು ಇಲ್ಲಿಗೆ ಬರುತ್ತಾರೆ ಮತ್ತು ಇವರಿಗೆ ಪ್ರಧಾನಿ ಟ್ರಾಡೊ ಅವರ ಸಂಪೂರ್ಣ ಬೆಂಬಲವಿದೆ ಎಂದೂ ಮೂಲಗಳು ಹೇಳಿವೆ.
ಪಾಕ್‌ ಐಎಸ್‌ಐ-ಚೀಮಾ ನಂಟು: ಲಿಬರಲ್‌ ಪಾರ್ಟಿಯ ಸಂಸದ ಬಿಲಾಲ್‌ ಚೀಮಾ ಪಾಕ್‌ ಐಎಸ್‌ಐ ಜತೆ ಆತ್ಮೀಯ ನಂಟು ಹೊಂದಿದ್ದಾರೆ. ಐಎಸ್‌ಐ ಪರ ಕೆಲಸ ಮಾಡುವ ಚೀಮಾ, ಆಡಳಿತಾರೂಢ ಪಕ್ಷಕ್ಕೆ ಸಾಕಷ್ಟು ದೇಣಿಗೆ ನೀಡುತ್ತಾ ಬಂದಿದ್ದಾರೆ.

ಆರೋಪ ಸತ್ಯವಂತೆ; ಆದರೆ ಸಾಕ್ಷ್ಯ ಇಲ್ಲ!: ಈ ನಡುವೆ ಗುರುವಾರ ಮಾತನಾಡಿದ ಪ್ರಧಾನಿ ಟ್ರಾಡೊ, ಭಾರತದ ವಿರುದ್ಧ ಮಾಡಿರುವ ಆರೋಪ ಮತ್ತೂಮ್ಮೆ ಸಮರ್ಥಿಸಿಕೊಂಡಿದ್ದಾರೆ. “ನಿಜ್ಜರ್‌ ಹತ್ಯೆಯಲ್ಲಿ ಭಾರತ ಸರಕಾರದ ಏಜೆಂಟ್‌ಗಳ ಕೈವಾಡವಿದೆ ಎಂಬ ಆರೋಪವನ್ನು ನಂಬಲು ವಿಶ್ವಾಸಾರ್ಹ ಕಾರಣಗಳಿವೆ’ ಎಂದಿದ್ದಾರೆ. ಜತೆಗೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಪಾರದರ್ಶಕ ತನಿಖೆಗೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಭಾರತ ಸರಕಾರ ನಮ್ಮ ಜತೆ ಕೈಜೋಡಿಸಬೇಕು ಎಂದೂ ಟ್ರಾಡೊ ಮನವಿ ಮಾಡಿದ್ದಾರೆ. ಆದರೆ ಭಾರತದ ವಿರುದ್ಧ ಅವರ ಆರೋಪಕ್ಕೆ ಸಾಕ್ಷ್ಯ ನೀಡಲು ನಿರಾಕರಿಸಿದ್ದಾರೆ.

ವರದಿ ಆಧರಿಸಿ ಆರೋಪ?: ಭಾರತೀಯ ಅಧಿಕಾರಿಗಳ ಸಂಭಾಷಣೆಗಳು ಹಾಗೂ ಒಟ್ಟಾವಾದ ಫೈವ್‌ ಐ ಗುಪ್ತಚರ ಜಾಲದ ಮಾಹಿತಿಯನ್ನು ಆಧರಿಸಿಯೇ ಕೆನಡಾವು ಖಲಿಸ್ಥಾನಿ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದೆ. ಹೀಗೆಂದು ಕೆನಡಾ ಸರಕಾರದ ಮೂಲಗಳನ್ನು ಉಲ್ಲೇಖೀಸಿ ಅಲ್ಲಿನ ಸಿಬಿಸಿ ನ್ಯೂಸ್‌ ವರದಿ ಮಾಡಿದೆ. “ನಿಜ್ಜರ್‌ ಹತ್ಯೆಗೆ ಸಂಬಂಧಿಸಿ “ಫೈವ್‌ ಐಸ್‌ ಇಂಟೆಲಿಜೆನ್ಸ್‌ ಅಲಯನ್ಸ್‌’ ನೀಡಿ ರುವ ವಿವರಗಳೂ ಈ ಆರೋಪಕ್ಕೆ ಪುಷ್ಟಿ ನೀಡಿವೆ.

ಬಿಕ್ಕಟ್ಟು ಪರಿಹರಿಸಿ; ಕಾಂಗ್ರೆಸ್‌: ಭಯೋ ತ್ಪಾದನೆಯ ವಿರುದ್ಧದ ಹೋರಾಟದಲ್ಲಿ, ಅದ ರಲ್ಲೂ ಉಗ್ರವಾದವು ಭಾರತದ ಸಮಗ್ರತೆ, ಏಕತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವಂಥ ಸಂದ ರ್ಭದಲ್ಲಿ ಯಾವುದೇ ರೀತಿ ರಾಜಿ ಮಾಡಿ ಕೊಳ್ಳಲಾಗದು ಎಂದು ಹೇಳಿರುವ ಕಾಂಗ್ರೆಸ್‌, “ಕೆನಡಾದಲ್ಲಿರುವ ಭಾರತೀಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಆ ದೇಶದೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸಿಕೊಳ್ಳುವ ಕೆಲಸ ಆಗಬೇಕು’ ಎಂದು ಸಲಹೆ ನೀಡಿದೆ.

ವಿಮಾನ ದರದಲ್ಲಿ ಭಾರೀ ಹೆಚ್ಚಳ: ಕೆನಡಾ ಮತ್ತು ಭಾರತ ನಡುವಿನ ಬಿಕ್ಕಟ್ಟು ತಾರಕಕ್ಕೇ ರುತ್ತಿರುವ ಬೆನ್ನಲ್ಲೇ ಕೆನಡಾದಿಂದ ಭಾರತಕ್ಕೆ ಆಗಮಿಸುವ ನೇರ ವಿಮಾನಗಳ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗತೊಡಗಿದೆ. ವಿಮಾನ ಟಿಕೆಟ್‌ ಕಾದಿರಿಸುವ ವೆಬ್‌ಸೈಟ್‌ಗಳಲ್ಲಿನ ಮಾಹಿ ತಿಯಂತೆ, ಟೊರಂಟೊದಿಂದ ಹೊಸದಿಲ್ಲಿಗೆ ಬರುವ ನೇರ ವಿಮಾನಗಳ ದರ 1.41 ಲಕ್ಷ ರೂ. ವರೆಗೂ ತಲುಪಿದೆ. 1.01 ಲಕ್ಷ ರೂ. ಗಳಿಂದ ಹಿಡಿದು 1. 45 ಲಕ್ಷ ರೂ ವರೆಗೂ ತಲುಪಿದೆ. ಹಾಗೆಯೇ ಮಾಂಟ್ರೇಲ್‌, ವ್ಯಾಂಕೋವರ್‌ ಸೇರಿ ದಂತೆ ವಿವಿಧ ಪ್ರದೇಶಗಳಿಂದ ಹೊಸದಿಲ್ಲಿಯನ್ನು ತಲುಪುವ ಬಹುತೇಕ ವಿಮಾನಗಳ ದರ 1.01 ಲಕ್ಷ ರೂ. ನಿಂದ 1.50 ಲಕ್ಷವರೆಗೂ ವಿವಿಧ ರೀತಿಯಲ್ಲಿ ದರ ಗಳಿವೆ. ಟ್ರಾವೆಲ್‌ ಬುಕ್ಕಿಂಗ್‌ ವೆಬ್‌ಸೈಟ್‌ಗಳ ಪ್ರಕಾರ, ಕೊನೇ ಕ್ಷಣದ ವಿಮಾನ ಟಿಕೆಟ್‌ ದರ ಶೇ. 25 ರಷ್ಟು ಹೆಚ್ಚಳವಾಗಿದೆ.

ಹಿಂದೂಗಳು ಭಯಪಡಬೇಕಾಗಿಲ್ಲ: ಕೆನಡಾ ಸರಕಾರ

ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುವ ಕೆನಡಾಕ್ಕೆ ವೀಸಾ ನೀಡುವುದನ್ನು ನಿಲ್ಲಿಸಿದ ಕೂಡಲೇ ಆ ದೇಶದ ಸರಕಾರ ಹಾದಿಗೆ ಬಂದಿದೆ. ಕೆನಡಾದಲ್ಲಿ ಇರುವ ಹಿಂದೂಗಳಿಗೆ ಯಾವುದೇ ಭಯವಿಲ್ಲ ಎಂದು ಅಲ್ಲಿನ ಸರಕಾರ ಸ್ಪಷ್ಟನೆ ನೀಡಿದೆ. ಖಲಿಸ್ಥಾನ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಹಿಂದೂಗಳು ದೇಶ ಬಿಟ್ಟು ತೊಲಗಿ ಎಂದು ಬೆದರಿಕೆ ಹಾಕಿರುವ ವೀಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವಂತೆಯೇ ಅಲ್ಲಿನ ಸಾರ್ವಜನಿಕ ಭದ್ರತಾ ಇಲಾಖೆ ಎಚ್ಚೆತ್ತುಕೊಂಡಿದೆ. “ನಮ್ಮ ದೇಶದಲ್ಲಿ ದ್ವೇಷಾಪರಾಧಗಳಿಗೆ ಅವಕಾಶವೇ ಇಲ್ಲ’ ಎಂದು ಟ್ವೀಟ್‌ ಮಾಡಿದೆ. ಜಾಲತಾಣ ಗಳಲ್ಲಿ ವೈರಲ್‌ ಆಗಿರುವ ವೀಡಿಯೋದಲ್ಲಿನ ಅಂಶಗಳನ್ನು ಒಪ್ಪಲು ಸಾಧ್ಯವೇ ಇಲ್ಲ.

ಪ್ರಚೋದನಾಕಾರಿ ಅಂಶಗಳಿಗೆ ಆಸ್ಪದವೇ ಇಲ್ಲ. ಕೆನಡಾ ನಾಗರಿಕರು ಇತರ ದೇಶಗಳ ಪ್ರಜೆಗಳ ಅಭಿಮತ ಗೌರವಿಸಿಕೊಂಡು, ಕಾನೂನು ಪಾಲನೆ ಮಾಡುವತ್ತ ಗಮನಿಸಬೇಕು. ಜತೆಗೆ ಅವರ ಭದ್ರತೆಯ ವಿಚಾರದ ಬಗ್ಗೆ ಕೂಡ ಗೌರವಿಸಬೇಕು ಎಂದು ಮನವಿ ಮಾಡಿದೆ. ಗುರುವಾರ ತುಮಕೂರು ಮೂಲದ ಸಂಸದ ಚಂದ್ರ ಆರ್ಯ ಅವರು ಹಿಂದೂಗಳಿಗೆ ಬೆದರಿಕೆ ಒಡ್ಡಿದ್ದ ವಿಚಾರ ಖಂಡನೀಯ. ಅದು ದ್ವೇಷದ ಅಪರಾಧಗಳಿಗೆ ಕುಮ್ಮಕ್ಕು ನೀಡುತ್ತದೆ ಎಂದು ಆರೋಪಿಸಿದ್ದರು.

ಕೆನಡಾ ಜತೆಗಿನ ಬಾಂಧವ್ಯ ಕಡಿದುಕೊಂಡ ಮಹೀಂದ್ರಾ
ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಿರುವ ನಡುವೆಯೇ ಭಾರತದ ಆಟೋ ಕ್ಷೇತ್ರದ ದಿಗ್ಗಜ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಸಂಸ್ಥೆಯು ಕೆನಡಾದ ರೆಸ್ಸನ್‌ ಏರೋಸ್ಪೇಸ್‌ ಕಾರ್ಪೊರೇಶ‌ನ್‌ ಜತೆಗಿನ ಬಾಂಧವ್ಯವನ್ನು ಕಡಿದುಕೊಂಡಿದೆ. ಆ ಸಂಸ್ಥೆಯಲ್ಲಿ ತಾನು ಹೊಂದಿದ್ದ ಶೇ.11.18ರಷ್ಟು ಷೇರುಗಳನ್ನು ವಾಪಸ್‌ ಪಡೆದಿರುವುದಾಗಿ ಶುಕ್ರವಾರ ಘೋಷಿಸಿದೆ. ಸೆ.20ರಿಂದ ಅನ್ವಯವಾಗುವಂತೆ, ಆ ಸಂಸ್ಥೆಯೊಂದಿಗಿನ ನಮ್ಮ ಬಾಂಧವ್ಯ ಅಂತ್ಯಗೊಂಡಿದೆ ಎಂದೂ ತಿಳಿಸಿದೆ. ಉಭಯ ದೇಶಗಳ ನಡುವಿನ ವೈಮನಸ್ಯದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದು ಹಲವು ಅನುಮಾನ ಗಳಿಗೆ ಕಾರಣವಾಗಿದೆ. ಆದರೆ ಈ ಕುರಿತು ಮಹೀಂದ್ರಾ ಕಂಪೆನಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.