Bulgaria: ಸಾವಿರಾರು ವರ್ಷಗಳ ಇತಿಹಾಸ ಸಾರುವ ನೆಲವಿದು…

ಬಲ್ಗೇರಿಯಾದ ಸಾಂಸ್ಕೃತಿಕ ರಾಜಧಾನಿ ಪ್ಲಾವ್ಡಿವ್‌ ನಗರ

Team Udayavani, Sep 23, 2023, 2:50 PM IST

Bulgaria: ಸಾವಿರಾರು ವರ್ಷಗಳ ಇತಿಹಾಸ ಸಾರುವ ನೆಲವಿದು

ಪ್ಲಾವ್ಡಿವ್‌ ಬಲ್ಗೇರಿಯಾದ ಜನ ಹೆಚ್ಚು ಇಷ್ಟಪಡುವ ನಗರ. ಇದೇ ತಿಂಗಳು ಸುಮಾರು ಹತ್ತು ದಿನಗಳ ಕಾಲ ಇಲ್ಲಿಗೆ ಪ್ರವಾಸ ಹೋಗಿದ್ದೇವು. ಕರ್ನಾಟಕದ ಹಳೇ ರಾಜಧಾನಿ ಮೈಸೂರಿನಂತೆ, ಹಿಂದೆ ಇದು ಬಲ್ಗೇರಿಯಾ ದೇಶದ ರಾಜಧಾನಿಯಾಗಿತ್ತು. ಬೆಂಗಳೂರಿಗಿಂತ ಮೈಸೂರನ್ನು ಹೆಚ್ಚು ಇಷ್ಟಪಡುವ ನಮ್ಮ ಜನರಂತೆ ಈಗಿನ ರಾಜಧಾನಿ ಸೊಫಿಯಾಗಿಂತ ಪ್ಲಾವಿxವ್‌ ನಗರವನ್ನು ಇಷ್ಟಪಡುವ ಸಹಸ್ರಾರು ಬಲ್ಗೇರಿಯನ್ನರಿದ್ದಾರೆ.

ಬಲ್ಗೇರಿಯಾ ಸಂಸ್ಕೃತಿಯಲ್ಲಿ ಯೂರೋಪ್‌, ಮದ್ಯಪ್ರಾಚ್ಯ ಮತ್ತು ಏಷಿಯಾ ಖಂಡಗಳ ಪ್ರಭಾವ ದಟ್ಟವಾಗಿರುವುದನ್ನು ನೋಡಬಹುದು. ಬಲ್ಗೇರಿಯಾದ ರಾಜಧಾನಿ ಸೊಫಿಯಾ ನಗರ. ಅನಂತರದ ದೊಡ್ಡ ನಗರವೇ ಪ್ಲಾವ್ಡಿವ್‌. ಇದೀಗ ಭಾರತದಿಂದ ಇಲ್ಲಿಗೆ ಹೋಗಿ ಬರುವ ಪ್ರವಾಸಿಗರ ಸಂಖ್ಯೆ ಬೆಳೆಯುತ್ತಿದೆ.

ಹಿಂದೆ ಈ ಬಾಲ್ಕನ್‌ ದೇಶಗಳು ಹಿಟ್ಲರಿನ ಕ್ರೂರತೆಗೆ ಬಲಿಯಾದಂತವು. ಆಗ ಬಲ್ಗೇರಿಯಾ ದೇಶಕ್ಕೆ ನೆರವು ನೀಡಿದ್ದು ಸೋವಿಯತ್‌ ಒಕ್ಕೂಟದ ರಷ್ಯಾ. ಇದೀಗ ಬಲ್ಗೇರಿಯಾ ಸ್ವತಂತ್ರ ದೇಶ. ಆದರೆ ಇಲ್ಲಿನ ಶೇಕಡಾ ಅರವತ್ತರಷ್ಟು ಜನ, ಅದರಲ್ಲು ಹಳೆಯ ತಲೆಮಾರಿನವರು ಇಂದಿಗೂ ರಷ್ಯಾ ಮಾಡಿದ ಆ ಉಪಕಾರವನ್ನು ನೆನೆಯುತ್ತಾರೆ. ಪ್ಲಾವಿxವ್‌ ಎನ್ನುವ ನಗರದ ಬೆಟ್ಟವೊಂದರ ಮೇಲೆ ದೈತ್ಯ ಗಾತ್ರದ ಸೋವಿಯತ್‌ ಸೈನಿಕನೊಬ್ಬನ ಶಿಲೆಯೊಂದನ್ನು ಕೆತ್ತಿ ನಿಲ್ಲಿಸಿ ರಷ್ಯನ್ನರ ಉಪಕಾರವನ್ನು ಶಾಶ್ವತವಾಗಿ ನೆನೆಪಿನಲ್ಲಿ ಇಟ್ಟುಕೊಳ್ಳುವ ಪ್ರಯತ್ನವನ್ನು ಬಲ್ಗೇರಿಯಾ ದೇಶದವರು ಮಾಡಿದ್ದಾರೆ.

ಸಾಂಸ್ಕೃತಿಕ ರಾಜಧಾನಿ
ಸೊಫಿಯ ಬಲ್ಗೇರಿಯಾದ ರಾಜಧಾನಿಯಾದರು, ಪ್ಲಾವ್ಡಿವ್‌ ನಗರವನ್ನು ಬಲ್ಗೇರಿಯಾದ ಇಲ್ಲಿನ ಸಾಂಸ್ಕೃತಿಕ ರಾಜಧಾನಿಯೆಂದು ಕರೆಯುತ್ತಾರೆ. 2019ರಲ್ಲಿ ಈ ನಗರಕ್ಕೆ ಯೂರೋಪಿಯನ್‌ ಸಾಂಸ್ಕೃತಿಕ ನಗರಿಯೆಂಬ ಪಟ್ಟ ದೊರಕಿತ್ತು. ವಾಣಿಜ್ಯ, ಸಾರಿಗೆ, ಶಿಕ್ಷಣ ಮತ್ತು ಸಂಸ್ಕೃತಿಗಳು ಇಲ್ಲಿ ರೋಮ್‌ನ್ನ ರ ಕಾಲದಿಂದ ಬೆಳೆದುಬಂದಿವೆ.

ಯುನೆಸ್ಕೋದವರ ಶೈಕ್ಷಣಿಕ ನಗರಗಳ ಪಟ್ಟಿಯಲ್ಲಿ ಪ್ಲಾವ್ಡಿವ್‌ ನಗರವೂ ಸೇರಿದೆ. ಇದು ಮರಿಟ್ಸಾ ನದಿಯ ತಪ್ಪಲಿನ ಏಳು ದಿಬ್ಬಗಳ ನಡುವೆ ಬೆಳೆದ ನಗರವಾದ ಕಾರಣ ಏಳು ಬೆಟ್ಟಗಳ ನಗರವೆಂಬ ಹೆಸರನ್ನು ಪಡೆದಿದೆ. ಇಲ್ಲಿಂದ ಯೂರೋಪ್‌ನ ಹಲವು ದೇಶಗಳಿಗೆ ಸಾರಿಗೆ ಇರುವ ಕಾರಣ ಈ ನಗರಕ್ಕೆ ಟರ್ಕಿ, ರೊಮಾನಿಯಾ ಇತ್ಯಾದಿ ದೇಶಗಳಿಂದ ಪ್ರವಾಸಿಗರು ವಾರಾಂತ್ಯದ ಮೋಜಿಗಾಗಿ ಬಂದು ಹೋಗುವುದೂ ಇದೆ.

ಆದಿಮಾನವರು ಇಲ್ಲಿ ಕ್ರಿಸ್ತಪೂರ್ವ 6ನೇ ಶತಮಾನದಲ್ಲೇ ನೆಲೆಯೂರಿದ್ದರೆಂಬುದಕ್ಕೆ ಸಾಕ್ಷಿಗಳು ದೊರೆತಿವೆ. ಅಲ್ಲಿಂದ ಮುಂದಕ್ಕೆ ಮೆಸೆಡೋನಿಯ, ಸೆಲ್ಟಿಕ್‌, ರೋಮನ್‌, ರಷ್ಯನ್ನರ ಗೊತ್‌, ಹನ್ನರು, ಬಲ್ಗೇರಿಯನ್ನರು, ಸ್ಲೊವೇನಿಯಾದವರು, ಟರ್ಕಿಯ ಒಟ್ಟೊಮನ್ನರು ಹೀಗೆ ಎಲ್ಲರೂ ಈ ನಗರವನ್ನು ತಮ್ಮದಾಗಿ ಮಾಡಿಕೊಂಡು ಆಳಿದ್ದಾರೆ. ಆದರೂ ಇಂದು ಅದು ಬಲ್ಗೇರಿಯನ್ನರದಾಗಿ ಉಳಿದಿದೆ. ಅಲೆಕ್ಸಾಂಡರಿನ ತಂದೆ ಫಿಲಿಪ್‌ ದಿ ಗ್ರೇಟ್‌ (359-336BCE) ಈ ನಗರದ ನಿಯಂತ್ರಣಕ್ಕಾಗಿ ಯುದ್ಧ ಮಾಡಿದ್ದಾನೆ. ಪ್ರತಿಯೊಬ್ಬರೂ ಇನ್ನೊಬ್ಬರು ಕಟ್ಟಿದ ನಗರವನ್ನು ¨ಧ್ವಂಸ ಮಾಡಿ ತಾವು ಅದೇ ಜಾಗದಲ್ಲಿ ತಮ್ಮ ಹೊಸ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ನಗರದ ಸುತ್ತಕ್ಕೂ ಕೋಟೆಗಳನ್ನು ಕಟ್ಟಿ ಕೆಡವಿದ್ದಾರೆ. ಸಣ್ಣ ಸಣ್ಣ ತುಣುಕು ಭೂಮಿಗೂ ಸಂಸ್ಥಾನ ರಾಜರು ಇದ್ದ ಕಾಲದಲ್ಲಿ ಈ ನಗರವೇ ಒಂದು ದೇಶವೂ ಆಗಿದ್ದ ದಾಖಲೆಗಳಿವೆ. ಹಲವು ವಿಸ್ತ್ರತ ಸಂಸ್ಥಾನಗಳಿಗೆ ಈ ನಗರ ರಾಜಧಾನಿಯಾಗಿ ಕೆಲಸ ಮಾಡಿದೆ. ಅನಂತರ ಅದು ಬಲ್ಗೇರಿಯಾ ದೇಶಕ್ಕೆ ಸೇರಿದೆ.

ಈ ನಗರ ರೋಮನ್ನರ ಕಾಲದಲ್ಲಿ ಫಿಲ್ಲಿ ಪೊಲೀಸ್‌ ಎನ್ನುವ ಅತ್ಯಂತ ಆಕರ್ಷಕವಾದ ರೋಮನ್ನರ ಗುಡಿಯನ್ನು ಹೊಂದಿತ್ತು. ಅದರ ಅವಶೇಷಗಳ ಉತ್ಖನನ ನಡೆದಾಗ ಬಲ್ಗೇರಿಯನ್ನರಿಗೆ ಆಘಾತ ಕಾದಿತ್ತು. ಒಂದು ತಳಪಾಯದ ಮೇಲೆ ಮತ್ತೊಂದು ತಳಪಾಯಗಳು ಕಂಡು ಬಂದವು. ಒಂದು ಕಾಲದ ಮೊಸಾಯಿಕ್‌ ಮೇಲೆ ಮತ್ತೊಂದು ಪದರದ ಮೊಸಾಯಿಕ್‌ ನೆಲ ತೆರೆದುಕೊಂಡಿತು. ಸಮಾಧಿಗಳ ಮೇಲೆ ಸಮಾಧಿಗಳು ದೊರಕಿದವು. ಪ್ರತೀ ರೋಮನ್‌ ರಾಜನ ಕಾಲದಲ್ಲಿ ಒಬ್ಬರು ಇನ್ನೊಬ್ಬರ ಕಟ್ಟಡವನ್ನು ಉರುಳಿಸಿ, ಅಗೆದು ತೆಗೆಯಲಾಗದ ತಳಪಾಯವನ್ನು ಹಾಗೇ ಬಿಟ್ಟು ಹೊಸ ವಿನ್ಯಾಸದ ಕಟ್ಟಡಗಳನ್ನು ಅದೇ ಜಾಗದಲ್ಲಿ ಕಟ್ಟಿರುವುದನ್ನು ಕಂಡುಹಿಡಿದರು. ಈಗಲೂ ಇಲ್ಲಿ ಉತ್ಖನನ ನಡೆಯುತ್ತಲೇ ಇದೆ.

ಹಿಂದೆ ಇದ್ದ ಅಗಾಧ ಗಾತ್ರದ ಫಿಲಿ ಪೊಲೀಸ್‌ ಕಟ್ಟಡದ ತಳಪಾಯ ಈಗ ನೆಲದ ಅಡಿಯಲ್ಲಿ ಗಾಜಿನ ಪರದಗಳ ಕೆಳಗೆ ಸಂರಕ್ಷಿತವಾಗಿದೆ. ಅದರ ಅಳತೆಯಿಂದಲೇ ಆ ಜಾಗದಲ್ಲಿ ಹಿಂದೆ ಎಂತಹ ಬೃಹತ್‌ ಕಟ್ಟಡವೊಂದು ನಿಂತಿತ್ತು ಎಂಬ ಅಂದಾಜು ಸಿಗುತ್ತದೆ. ಅದನ್ನು ಕಣ್ಣಾರೆ ಕಾಣುವ ಡಿಜಿಟಲ್‌ ಸಾಧನಗಳನ್ನು ಇಲ್ಲಿ ಪ್ರವಾಸಿಗರಿಗಾಗಿ ಅಳವಡಿಸಿದ್ದಾರೆ. ಅವುಗಳಿಂದ ದೂರದೂರದ ಊರು ಮತ್ತು ದೇಶಗಳಿಂದ ಇಲ್ಲಿಗೆ ಯಾತ್ರಾರ್ಥಿಗಳನ್ನು ಈ ಚರ್ಚ್‌ ಗೆ ಕರೆತರುತ್ತಿತ್ತು ಎನ್ನುವ ವಿಚಾರವನ್ನು ತಿಳಿಯಬಹುದಾಗಿದೆ.

ಪ್ಲಾವಡಿವ್‌ನ್ನು ಆಳುತ್ತಿದ್ದ ರಾಜರುಗಳು ಬದಲಾದಂತೆ ಈ ನಗರದ ಹೆಸರೂ ಕಾಲಚಕ್ರದಲ್ಲಿ ಬದಲಾಗುತ್ತ ಬಂದಿದೆ. ಗ್ರೀಕರು ಒಡ್ರಿಸ್ಸಾ ಅಥವಾ ಓಡ್ರಿನ್‌ ಎಂದು ಕರೆದರೆ, ಹಲವು ನೂರು ವರ್ಷಗಳ ಅನಂತರ ಬಂದ ಗ್ರೀಕರು ಕೆಂಡ್ರಿಸ್ಸ ಎಂದು ಕರೆದ ದಾಖಲೆಗಳು ದೊರೆತಿವೆ. ರೋಮನ್ನರು ಟ್ರಿಮೋಂಟಿಯಮ್‌ ಎಂದರೆ ಮೂರು ಬೆಟ್ಟಗಳ ನಗರವೆಂತಲೂ, ಇತರೆ ದೊರೆಗಳು ಫಿಲಿಪ್ರೋಪೊಲಿಸ್‌ ಅಂದರೆ ಫಿಲಿಪ್ಪನ ಸಿಟಿ ಎಂದು ಉಲ್ಲೇಖಿಸಿದ್ದಾರೆ.

ಜೋರ್ಡನ್ನರು ಪುಲ್ಪುದೇವ (ಲೇಕ್‌ ಸಿಟಿ) ಎಂದು ಕರೆದ ಅನಂತರ ಅದೇ ಹೆಸರು ನಾನಾ ರೀತಿಯಲ್ಲಿ ಭಿನ್ನಗೊಂಡು ಪ್ಲೇಡಿವ್‌, ಪಪಾಲ್ಡಿವ್‌, ಪ್ಲಾವಡಿವ್‌, ಪ್ಲಾಪ್ಡಿವ್‌ ಕೊನೆಗೆ ಇಂದಿನ ಪ್ಲಾವ್ಡಿವ್‌ ಎಂದಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಎಲ್ಲರಿಗೂ ಬೇಕಾದ, ಎಲ್ಲರಿಂದಲೂ ಪತನವಾದ, ಇತರರಿಂದ ಮರುಹುಟ್ಟು ಪಡೆದ, ಬೇಕಾದಂತೆ ನಾಮಕರಣಗೊಂಡ ಈ ಊರಿನ ತುಂಬ ಚರಿತ್ರೆ ಬರೆದುಕೊಂಡಿದೆ. ಈ ಊರಿನ ಮಣ್ಣಿನ ಆಳದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದೆ. ಆದಿಮಾನವರ ತಂಗುದಾಣವಾಗಿದ್ದ (ಸುಮಾರು 6000-5000 BCE) ಈ ಊರಿಗೆ ಭೂಗೋಳವನ್ನು ಅಲೆಮಾರಿಗಳಾಗಿ ಸುತ್ತುತ್ತಿದ್ದ ಮನುಷ್ಯರನ್ನು ಹಿಡಿದು ನಿಲ್ಲಿಸಿ ನೆಲೆಯೂರಲು ಬೇಕಾದ ಎಲ್ಲ ಆಕರ್ಷಣೆಗಳು ಇದ್ದವು ಎನ್ನುವುದು ಅತ್ಯಂತ ಮಹತ್ತರ ವಿಚಾರವೆನಿಸುತ್ತದೆ.

ಇದೆಲ್ಲ ಇತಿಹಾಸದ ಹೊಂದಿದ ಈ ನಗರ ಅದೆಷ್ಟು ಆಕರ್ಷಣೀಯವಾಗಿತ್ತೆಂದರೆ ಅಮೆರಿಕ ತನ್ನ ನೆಲದ ಹೊರತಾಗಿ ಎಲ್ಲಿಯಾದರೂ ಶೈಕ್ಷಣಿಕ ಸಂಸ್ಥೆ ನಿರ್ಮಿಸಲು ನಿರ್ಧರಿಸಿದಾಗ ಮೊಟ್ಟಮೊದಲಿಗೆ ಆಯ್ದುಕೊಂಡ ಜಾಗವೆಂದರೆ ಅದು ಪ್ಲಾವ್ಡಿವ್‌ ನಗರವನ್ನು. 1860ರಲ್ಲಿ “ಅಮೆರಿಕನ್‌ ಕಾಲೇಜ್‌ ಆಫ್ ಪ್ಲಾವ್ಡಿವ್‌’ ಎಂಬ ಹೆಸರಿನಲ್ಲಿ ಅದು ಇಲ್ಲಿ ಕಾರ್ಯಾಚರಣೆ ನಡೆಸಿತ್ತಂತೆ. ರಾಜಧಾನಿ ಸೊಫಿಯಾ ಪ್ರವರ್ಧಮಾನಕ್ಕೆ ಬಂದ ಅನಂತರ ಈ ಸಂಸ್ಥೆ “ಅಮೆರಿಕನ್‌ ಕಾಲೇಜ್‌ ಆಫ್ ಸೊಫಿಯಾ’ ಎನ್ನುವ ಹೆಸರಿನಲ್ಲಿ ಸೊಫಿಯಾ ನಗರಕ್ಕೆ ಸ್ಥಳಾಂತರಗೊಂಡಿದೆ.

ಒಂದು ಅಂದಾಜಿನ ಪ್ರಕಾರ ಎಂಟು ಮಿಲಿಯನ್‌ ವರ್ಷಗಳ ಚರಿತ್ರೆ ಈ ಸ್ಥಳಕ್ಕೆ ತಳುಕು ಹಾಕಿಕೊಂಡಿದೆ. ಇದು ಬಲ್ಗೇರಿಯಾದ ಎರಡನೇ ದೊಡ್ಡ ನಗರ. 1874ರಿಂದಲೇ ಇಲ್ಲಿ ಒಟ್ಟೊಮಾನ್‌ ಸಾಮ್ರಾಜ್ಯದವರೆಗೆ ಹೋಗಲು ಬೇಕಿದ್ದ ರೈಲ್ವೇ ಸಂಪರ್ಕ ಸೃಷ್ಟಿಯಾಗಿದೆ. 1927 ರಿಂದ ವಿದ್ಯುತ್ತಿನ ವ್ಯವಸ್ಥೆ ಶುರುವಾಗಿದೆ. 1943ರಲ್ಲಿ ಈ ನಗರ 1,500 ಯಹೂದಿಗಳನ್ನು ಜರ್ಮನಿಯ ಕ್ರೂರತೆಯಿಂದ ರಕ್ಷಿಸಿದೆ. 1944ರಲ್ಲಿ ಈ ನಗರದ ಮೇಲೆ ಅಮೆರಿಕದ ಒಕ್ಕೂಟ ರಾಷ್ಟ್ರಗಳ ಬಾಂಬಿನ ದಾಳಿ ನಡೆದು ಅದು ಮತ್ತೆ ಬೆಳೆದ ನಗರವಾಗಿದೆ.

ಈ ಊರಿನ ತುಂಬಾ ಎಲ್ಲೆಲ್ಲಿಯೂ ರೋಮನ್ನರ ಸ್ಮಾರಕಗಳ ಅವಶೇಷಗಳಿವೆ. ರೋಮನ್ನರ ಆಂಫಿ ಥಿಯೇಟರ್‌ ಈ ನಗರದಲ್ಲಿರುವ ರೋಮನ್ನರ ಬಯಲು ರಂಗಮಂದಿರ ಬಹಳ ಪ್ರಸಿದ್ಧವಾದುದು. ಅರೆಭಾಗ ಬಿಟ್ಟರೆ ವೇದಿಕೆಯೂ ಸೇರಿದಂತೆ ಮೂರಂತಸ್ತಿನ ಎತ್ತರದ ಈ ಆಂಫಿಥಿಯೇಟರ್‌ ಬಹಳ ಸುಸ್ಥಿತಿಯಲ್ಲಿದೆ. ತೆರೆದ ಬಯಲಿನಲ್ಲಿ ಇರುವ ಮಂದಿರವಾದರೂ, ಇದನ್ನು ಪ್ರವೇಶಿಸಲು ಟಿಕೆಟ್‌ ಖರೀದಿಸಬೇಕು.

ಇಲ್ಲಿ ಸ್ಟೇಡಿಯಂ ರೀತಿಯ ಆಸನ ವ್ಯವಸ್ಥೆಯಿದ್ದು, ಕೆಲವು ಭಾಗಗಳಲ್ಲಿ ಧುರೀಣರು ಕೂರಲು ಸೋಫಾದ ಶೈಲಿಯಲ್ಲಿ ಕಲ್ಲಿನಲ್ಲಿ ಕಡೆದ ಆಸನಗಳ ವ್ಯವಸ್ಥೆಯಿದೆ. ರಾಜರು ಕೂರಲು ಮೊದಲ ಮತ್ತು ಎರಡನೇ ಅಂತಸ್ತಿನ ಮಹಡಿಯಿರುವ ಒಂದ ಭಾಗವಿದೆ. ಅದನ್ನು ಏರಲು ಮೆಟ್ಟಿಲುಗಳಿವೆ. ಎರಡನೇ ಶತಮಾನದ (ಎಡಿ) ಕೊನೆಯ ಭಾಗದಲ್ಲಿ ಇದನ್ನು ಕಟ್ಟಲಾದದ್ದು ಎನ್ನುವ ಉಲ್ಲೇಖದ ಕೆತ್ತನೆ ದೊರಕಿದೆ. ರೋಮನ್ನರ ದೊರೆ ಟ್ರಾಜನ್‌ ಡೊಮಿಷಿಯನ್ನನ ಕಾಲದಲ್ಲಿ ಈ ನಗರ ಭಾಗವನ್ನು ಟೈಟಸ್‌ ಫ್ಲೇವಿಯಸ್‌ ಕೊಟಿಸ್‌ ಎನ್ನುವವನು ಆಳುತ್ತಿದ್ದ ಎಂದು ಕೆತ್ತಲಾಗಿದೆ. ಒಂದೇ ಬಾರಿ ಸುಮಾರು 7,000 ಜನರು ಕೂರಲು ವ್ಯವಸ್ಥೆಯಿದೆ. 1968 – 1984 ನಡುವೆ ಇದನ್ನು ಮತ್ತೆ ಉತ್ತಮ ಸ್ಥಿತಿಗೆ ತರಲಾಗಿದ್ದು ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಈ ಬಯಲು ಮಂದಿರದಲ್ಲಿ ನಡೆಸಲಾಗುತ್ತದೆ.

2 ನೇ ಶತಮಾನದ ರೋಮನ್ನರ ದೊರೆ ಹೇಡ್ರಿಯನ್ನನ ಕಾಲದಲ್ಲಿ ಕಟ್ಟಲಾಯಿತೆಂದು ಹೇಳಲಾಗಿರುವ ಪುರಾತನ ಸ್ಟೇಡಿಯಂ ಇದೆ. ಇದರ ಬಹುತೇಕ ಭಾಗ ನಗರದ ಮಧ್ಯೆ ನಿಂತಿರುವ ಕಟ್ಟಡಗಳ ಕೆಳಗೆ ಹೂತುಹೋಗಿದೆ. ಆದರೆ ಉತ್ತರ ಭಾಗದ 14 ಮೆಟ್ಟಿಲುಗಳನ್ನು ಪ್ರವಾಸಿಗರು ವೀಕ್ಷಿಸಬಹುದು. ಒಂದು ಕಾಲದಲ್ಲಿ ಈ ಸ್ಟೇಡಿಯಂನಲ್ಲಿ 30,000 ಜನರು ಒಟ್ಟಿಗೆ ಕೂತು ಆಟೋಟಗಳನ್ನು ವೀಕ್ಷಿಸುವ ವ್ಯವಸ್ಥೆ ಇತ್ತು ಎನ್ನಲಾಗಿದೆ.

ಇಷ್ಟೆಲ್ಲ ಚರಿತ್ರೆಯನ್ನು ಬಿಚ್ಚಿಡುವ ಬಲ್ಗೇರಿಯಾದಲ್ಲಿ ಹಲವಾರು ಮ್ಯೂಸಿಯಂಗಳಿವೆ. ಆದರೆ ಜನರನ್ನು ಬಹುವಾಗಿ ಆಕರ್ಷಿಸುವುದು ಓಲ್ಡ್ ಟೌನ್‌ ಅಥವಾ ಹಳೆಯ ಊರು.‌ ಇದು ಬಲ್ಗೇರಿಯಾದ ಅಸ್ಮಿತೆಯನ್ನು ಸಾರುವ ಭಾಗ. ಬಲ್ಗೇರಿಯಾದ ರೆನೈಸ್ಸನ್ಸ್‌ ವಾಸ್ತುಶಿಲ್ಪದ ವಿನ್ಯಾಸವಿರುವ ಬಣ್ಣ ಬಣ್ಣದ ಮನೆಗಳು, ಕಲ್ಲು ಹಾಸಿನ ರಸ್ತೆಗಳನ್ನು ಇಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇಲ್ಲಿ ಒಂದು ಮನೆಯಿದ್ದಂತೆ ಇನ್ನೊಂದಿಲ್ಲ. ಆದರೆ ಪ್ರತಿಮನೆಯೂ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತವೆ.

ಈ ನಗರ ಇತ್ತೀಚೆಗೆ ಪ್ರವಾಸಿ ಸ್ಥಳವಾಗಿ ಎಲ್ಲೆ ಡೆಯಿಂದ ಜನರನ್ನು ಆಕರ್ಷಿಸುತ್ತಿದೆ. ರಷ್ಯಾ-ಉಕ್ರೇನ್‌ನ ಯುದ್ಧ ನಿರಾಶ್ರಿತರು ಇಲ್ಲೀಗ ಬಹಳಷ್ಟು ಬಂದು ನೆಲೆಸಿದ್ದಾರೆ. ಆದರೆ ಇಲ್ಲಿನ ಜನಸಂಖ್ಯೆ ಬಹಳ ಕಡಿಮೆ. ಇಲ್ಲಿನ ಶಾಂತ ಬದುಕಿನ ವ್ಯವಸ್ಥೆ ನನಗೆ ಇಪ್ಪತ್ತೈದು ವರ್ಷಗಳ ಹಿಂದಿನ ಭಾರತದ ವಾತಾವರಣವನ್ನು ನೆನಪಿಸಿದ್ದು ಸುಳ್ಳಲ್ಲ.

ಡಾ| ಪ್ರೇಮಲತ ಬಿ., ಲಿಂಕನ್‌, ಯುಕೆ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.