Kolara: ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಗುರಿ ವಿಫಲ!


Team Udayavani, Sep 23, 2023, 2:36 PM IST

Kolara: ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಗುರಿ ವಿಫಲ!

ಕೋಲಾರ: ದೇಶವು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿಯೂ ಸಂಪೂರ್ಣ ಸಾಕ್ಷರತಾ ರಾಷ್ಟ್ರವಾಗಿ ಹೊರ ಹೊಮ್ಮಲು ಸಾಧ್ಯವಾಗಿಲ್ಲ. ನಾಲ್ಕೈದು ದಶಕಗಳಿಂದಲೂ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಮಾಡಿದಾಗಲೂ ಗುರಿ ತಲುಪಲಾಗಿಲ್ಲ. ಈ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ದೇಶವನ್ನು ಸಂಪೂ ರ್ಣ ಸಾಕ್ಷರತಾ ರಾಷ್ಟ್ರವನ್ನಾಗಿಸುವ ಪ್ರ ಯತ್ನದ ಭಾಗವಾಗಿ ನವಭಾರತ ಸಾಕ್ಷರತಾ ಕಾರ್ಯಕ್ರಮವನ್ನು ರೂಪಿಸಿದೆ.

ಏನಿದು ಕಾರ್ಯಕ್ರಮ?: ನವ ಭಾರತ ಸಾಕ್ಷರತಾ ಕಾರ್ಯಕ್ರಮವು ದೇಶಾದ್ಯಂತ ಸುಮಾರು 1 ಸಾವಿರ ಕೋಟಿ ರೂ. ವೆಚ್ಚದಲ್ಲಿ 2022ರಿಂದ 2027ರ ಅವಧಿಯೊಳಗೆ ಅನುಷ್ಠಾನಗೊಳ್ಳುತ್ತಿದೆ. ಹದಿನೈದು ವರ್ಷ ಮೇಲ್ಪಟ್ಟ ಅನಕ್ಷರಸ್ಥರಿಗೆ ಮೊಬೈಲ್‌ ಆ್ಯಪ್‌ ಮತ್ತು ಇನ್ನಿತರ ಆನ್‌ ಲೈನ್‌ ಕಲಿಕಾ ಮಾದರಿಗಳ ಮೂಲಕ ಅಕ್ಷರ ಮತ್ತು ಸಂಖ್ಯಾ ಜ್ಞಾನವನ್ನು ಕಲಿಸುವುದು ಈ ಯೋಜನೆಯ ಉದ್ದೇಶ. ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಕಲಿಸುವು ದರ ಜೊತೆಗೆ ಆರ್ಥಿಕ ಸಾಕ್ಷರತೆ, ಡಿಜಿಟಲ್‌ ಸಾಕ್ಷರತೆ, ವಾಣಿಜ್ಯ ಕೌಶಲ್ಯಗಳು, ಆರೋಗ್ಯ ರಕ್ಷಣೆ ಮತ್ತು ಜಾಗೃತಿ, ಮಕ್ಕಳ ಆರೈಕೆ ಮತ್ತು ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮ ಪರಿಚಯಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ನೆರವು ಪಡೆಯಲಾಗುತ್ತಿದೆ.

ಪೂರ್ಣ ಸಾಕ್ಷರತೆಯತ್ತ ತಲುಪುವ ನಿರೀಕ್ಷೆ: ಕೋಲಾರ ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ ಶೇ.71ರಷ್ಟು ಸಾಕ್ಷರರು ಇದ್ದು, ಇದೀಗ ಅದರ ಪ್ರಮಾಣ ಶೇ.84ಕ್ಕೇರಿದೆ. ಆದರೆ, ಇದು ಇನ್ನೂ ಅಧಿ ಕೃತವಾಗಿ ಘೋಷಣೆಯಾಗಬೇಕಿದೆ. ನವಭಾರತ ಕಾರ್ಯಕ್ರಮ ಪೂರ್ಣಗೊಳ್ಳುವ ವೇಳೆಗೆ ಕೋಲಾರ ಜಿಲ್ಲೆಯ ಸಾಕ್ಷರರ ಪ್ರಮಾಣ ಶೇ.90 ದಾಟಿ ಪೂರ್ಣ ಸಾಕ್ಷರತೆಯತ್ತ ತಲುಪುವ ನಿರೀಕ್ಷೆ ಹೊಂದಲಾಗಿದೆ.

ಕಲಿಸುವರಿಗೆ ತರಬೇತಿ: ಉಲ್ಲಾಸ್‌ ಆ್ಯಪ್‌ ಮೂಲಕ ನವ ಭಾರತ ಸಾಕ್ಷರತಾ ಕಾರ್ಯಕ್ರಮಕ್ಕೆ ಒಳಪಡುವ ಕಲಿಕಾರ್ಥಿಗಳು ಮತ್ತು ಸ್ವಯಂಸೇವಕರಿಗೆ ಆನ್‌ಲೈನ್‌ ಮೋಡ್‌ ಮೂಲಕ ಯೋಜನೆಯನ್ನು ಕಾರ್ಯತಂತ್ರಗೊಳಿಸಲಾಗುತ್ತದೆ. ಸ್ವಯಂಸೇವಕರ ತರಬೇತಿಗಳು ದೃಷ್ಟಿಕೋನಗಳು ಕಾರ್ಯಾಗಾರಗಳನ್ನು ಮುಖಾಮುಖಿ ಮೋಡ್‌ ಮೂಲಕ ಆಚರಿಸಲಾಗುತ್ತದೆ. ನೋಂದಾಯಿತ ಸ್ವಯಂ ಸೇವಕರಿಗೆ ಸುಲಭವಾಗಿ ಪ್ರವೇಶ, ಡಿಜಿಟಲ್‌ ವಿಧಾನಗಳು. ಆದರೆ, ಟೀವಿ, ರೇಡಿಯೋ, ಸೆಲ್‌ ಫೋನ್‌ ಆಧಾರಿತ ಉಚಿತ, ಓಪನ್‌ ಸೋರ್ಸ್‌ ಅಪ್ಲಿಕೇಶನ್‌ಗಳು, ಹೋಟಲ್‌ ಇತ್ಯಾದಿಗಳ ಮೂಲಕ ಸುಲಭವಾಗಿ ಪ್ರವೇಶಿಸಲು ಹಾಗೂ ಯಶಸ್ವಿಗೊಳಿಸಲು ಸಹಕಾರವಾಗುತ್ತಿದೆ. ನವ ಭಾರತಸಾಕ್ಷರತಾ ಕಾರ್ಯಕ್ರಮ, ಲಿಂಕ್‌ ಡ್ಯಾಕುಮೆಂಟ್‌ ಹಾಗೂ ಸಾವಿರ ಗ್ರಾಪಂ ಯೋಜನೆಯಡಿ ಕೋಲಾರ ಜಿಲ್ಲೆಯಲ್ಲಿ ಗುರುತಿಸಿರುವ 50 ಸಾವಿರಕ್ಕೂ ಹೆಚ್ಚು ಅನಕ್ಷರಸ್ಥರನ್ನು ಪ್ರಸಕ್ತ ಅವಧಿಯಲ್ಲಿ ಸಾಕ್ಷರನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಈ ಮೂಲಕ ಕೋಲಾರ ಜಿಲ್ಲೆಯಿಂದಲೂ ದೇಶದ ಸಂಪೂರ್ಣ ಸಾಕ್ಷರತೆಗೆ ಕೊಡುಗೆ ನೀಡುವ ಪ್ರಯತ್ನ ಸಾಗಿದೆ.

ಅನುಷ್ಠಾನಕ್ಕಾಗಿ ಉಲ್ಲಾಸ್‌ ಆ್ಯಪ್‌: ನವ ಭಾರತ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನಕ್ಕಾಗಿಯೇ ಉಲ್ಲಾಸ್‌ ಆ್ಯಪ್‌ ತಯಾರಿಸಾಗಿದ್ದು, ಲಿಂಕ್‌ ಡಾಕ್ಯುಮೆಂಟ್‌ ಮತ್ತು ಮುಖ್ಯಮಂತ್ರಿಗಳ ಸಾವಿರ ಗ್ರಾಪಂ ಯೋಜನೆಯಡಿ ಅನುಷ್ಠಾನವಾಗುತ್ತಿದೆ. ಉಲ್ಲಾಸ್‌ ಆ್ಯಪ್‌ ಮೂಲಕ ಪ್ರತಿ ಶಾಲಾ ಹಂತದಲ್ಲಿರುವ ಹದಿನೈದು ವರ್ಷ ಮೇಲ್ಪಟ್ಟ ಅನಕ್ಷರನ್ನು ಗುರುತಿಸುವುದು ಹಾಗೂ ಅವರಿಗೆ ಬಿಎಡ್‌ ಮತ್ತು ಡಿಎಡ್‌ ಕಲಿಕಾರ್ಥಿಗಳ ಮೂಲಕ ಬೋಧನೆ ಮಾಡುವುದು. ಅವರಿಗಾಗಿ ಪರೀಕ್ಷೆಗಳನ್ನು ನಡೆಸುವುದು, ನವ ಕಲಿಕಾರ್ಥಿಗಳನ್ನಾಗಿಸಿ ಪ್ರಮಾಣ ಪತ್ರ ವಿತರಿ ಸುವುದು ಯೋಜನೆಯ ಉದ್ದೇಶವಾಗಿದೆ. ನವ ಕಲಿಕಾರ್ಥಿಗಳ ತಯಾರು ಮಾಡಿದವರಿಗೆ ಅಂಕ ಪಟ್ಟಿಯಲ್ಲಿಯೇ ಶ್ರೇಣಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುವುದು.

ವಿವಿಧ ಇಲಾಖೆಗಳ ಕಾರ್ಯಪಡೆ : 2030ಕ್ಕೆ ನಮ್ಮ ದೇಶದ ಅನಕ್ಷರತೆ ಯನ್ನು ತೊಡೆದು ಹಾಕಿ ಶೇಕಡಾ ನೂರರಷ್ಟು ಸಾಕ್ಷರತೆಯನ್ನು ಸಾಧಿ ಸುವ ಗುರಿ ನವ ಭಾರತ ಸಾಕ್ಷರತಾದ ಕಾರ್ಯಕ್ರಮದ ಉದ್ದೇಶವಾಗಿದೆ. ಜಿಲ್ಲೆಯಲ್ಲಿಯೂ ಇದನ್ನು ಅನುಷ್ಠಾನಗೊಳಿಸಲು ಸಮಾಜ ಕಲ್ಯಾಣ, ಆರೋಗ್ಯ, ಡಿಡಿಪಿಐ, ಡಿಡಿಪಿಯು, ನಗರಸಭೆ ಮತ್ತಿತರ ಇಲಾಖೆಗಳನ್ನೊಳಗೊಂಡ ಕಾರ್ಯ ಪಡೆಯನ್ನು ರಚಿಸಲಾಗಿದೆ.

32,000 ಮಂದಿ ಅನಕ್ಷರಸ್ಥರು : ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಉಲ್ಲಾಸ್‌ ಆ್ಯಪ್‌ ಮೂಲಕ 32 ಸಾವಿರ ಮಂದಿ ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಈ ಪೈಕಿ ಕಳೆದ ವರ್ಷ 16 ಮಂದಿಗೆ ಯೋಜನೆಯನ್ನು ಆರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಆಯ್ದ 23 ಗ್ರಾಪಂಗಳ 16 ಸಾವಿರ ಮಂದಿಗೆ ಕಲಿಕೆ ಆರಂ ಭಿಸಲಾಗುತ್ತದೆ. ಪರಿಣಾಮಕಾರಿ ಕಲಿಕೆಗಾಗಿ ಭೌತಿಕ ಸಿದ್ಧತೆ ಹಾಗೂ ಆನ್‌ಲೈನ್‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ 2027 ರವರೆಗೂ ಕಲಿಕೆ ಮುಂದುವರಿಯಲಿದೆ.

ಕೇಂದ್ರ ಸರ್ಕಾರದ ಅಯವ್ಯಯದಲ್ಲಿ ನವಭಾರತ ಸಾಕ್ಷರತಾ ಕಾರ್ಯಕ್ರಮ ಎಂಬ ಶೀರ್ಷಿಕೆಯಡಿ ಸಾಕ್ಷರತಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಹೊಸ ಯೋಜನೆ ಘೋಷಿಸಲಾಗಿದ್ದು, ಈ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು. ಬ್ಲಾಕ್‌ ಪಡೆಯೊಂದಿಗೆ ನಿಯಮಿತವಾಗಿ ಪ್ರತಿ ತಿಂಗಳು ಸಂವಹನಕ್ಕೆ ಅವಕಾಶ ಮಾಡಿಕೊಂಡು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಬೇಕಾಗುತ್ತದೆ. – ಅಕ್ರಂ ಪಾಷ, ಜಿಲ್ಲಾಧಿಕಾರಿ

ಮನೆ ಮನೆ ಭೇಟಿ, ಫೋನ್‌ ಮೂಲಕ ಹಾಗೂ ಉಲ್ಲಾಸ್‌ ಆ್ಯಪ್‌ ಮೂಲಕ ಸಮೀಕ್ಷೆ ನಡೆಸಿ ಅನಕ್ಷರಸ್ಥರನ್ನು ಪತ್ತೆ ಮಾಡಿ ಅವರಿಗೆ ಬಿಎಡ್‌, ಡಿಎಡ್‌ ವಿದ್ಯಾರ್ಥಿಗಳ ಮೂಲಕ ಬೋಧಿಸುವ ಮೂಲಕ ವಿವಿಧ ಹಂತಗಳಲ್ಲಿ 2027 ರೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಶೇ.16 ರಷ್ಟು ಅನಕ್ಷರಸ್ಥರನ್ನು ಸಾಕ್ಷರನ್ನಾಗಿಸಿ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸುವುದು ನವಭಾರತ ಸಾಕ್ಷರತಾ ಕಾರ್ಯಕ್ರಮದ ಗುರಿಯಾಗಿದೆ. -ಸಿ.ಆರ್‌.ಅಶೋಕ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ

-ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.