Dubai: ಅದ್ದೂರಿಯಾಗಿ ನಡೆದ ಗಲ್ಫ್ ಕರ್ನಾಟಕೋತ್ಸವ

ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

Team Udayavani, Sep 23, 2023, 10:28 AM IST

Dubai: ಅದ್ದೂರಿಯಾಗಿ ನಡೆದ ಗಲ್ಫ್ ಕರ್ನಾಟಕೋತ್ಸವ

ದುಬೈ:ಗಲ್ಫ್ ಪ್ರದೇಶದಲ್ಲಿರುವ ಕರ್ನಾಟಕ ಮೂಲದ ಉದ್ಯಮಿಗಳ ಅತ್ಯುತ್ತಮ ಕೊಡುಗೆಗಳನ್ನು ಮತ್ತು ಕೆಲಸಗಳನ್ನು ಗೌರವಿಸಲು ಮೀಸಲಾಗಿರುವ ಗಲ್ಫ್ ಕರ್ನಾಟಕೋತ್ಸವ ಸಮಾರಂಭವು ಸೆ.11ರಂದು ಅದ್ದೂರಿಯಾಗಿ ಜರಗಿತು. ಸಮಾರಂಭದಲ್ಲಿ ಒಟ್ಟಾರೆ 21 ವ್ಯಕ್ತಿಗಳಿಗೆ ಗೌರವ ಸಲ್ಲಿಸಲಾಯಿತು.

ಈ ಸಮಾರಂಭದಲ್ಲಿ ಕರ್ನಾಟಕದ 21 ಅತ್ಯಂತ ಪ್ರಭಾವಶಾಲಿ ವ್ಯಾಪಾರ ಐಕಾನ್‌ಗಳನ್ನು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದುಬೈ ರಾಜಮನೆತನದ ಸದಸ್ಯ ಮತ್ತು M&M ಗ್ರೂಪ್‌ನ ಅಧ್ಯಕ್ಷರಾದ ಹಿಸ್‌ ಹೈನೆಸ್‌ ಶೇಖ್‌ ಮೊಹಮ್ಮದ್‌ ಮಕೂ¤ಮ್‌ ಜುಮಾ ಅಲ್‌ ಮಕೌ¤ಮ್‌ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಈ ಸಮಾರಂಭದ ಪ್ರಮುಖ ಭಾಗವಾಗಿದ್ದ ಗಲ್ಫ್ ರಾಷ್ಟ್ರಗಳು ಮತ್ತು ಕರ್ನಾಟಕಕ್ಕೆ ಸಾಧಕರ ಸಾಧನೆಗಳನ್ನು, ಸಮರ್ಪಣೆಯನ್ನು ಸೆರೆಗಹಿಡಿದು ಸಂಗ್ರಹಿಸಲಾದ ಕಾಫಿ ಟೇಬಲ್‌ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ವರ್ಗಗಳಿಂದ ಸುಮಾರು 1000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಹಾಗೆಯೇ ಇದೇ ವೇಳೆ ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ವ್ಯಾಪಾರದ ಸಾರವನ್ನು ಅನಾವರಣಗೊಳಿಸಲಾಯಿತು.

ಈ ಸಮಾರಂಭವು ಕರ್ನಾಟಕದ ರೋಮಾಂಚಕ ಸಂಸ್ಕೃತಿ ಮತ್ತು ಕಲಾ ಪರಂಪರೆಯ ಆಚರಣೆಯಾಗಿ ಹೊರಹೊಮ್ಮಿತು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು ಹಾಗೂ ಹಾಸ್ಯ ಚಟುವಟಿಕೆಗಳು ಪ್ರೇಕ್ಷಕರನ್ನು ಸೆಳೆಯಿತು. ಖ್ಯಾತ ಕಲಾವಿದರು ಮತ್ತು ಸಂಗೀತಗಾರರಾದ ಸಂತೋಷ್‌ ವೆಂಕಿ, ಗುರುಕಿರಣ್‌ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಚೈತ್ರಾ ಎಚ್‌.ಜಿ. ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕನ್ನಡದ ಹಾಸ್ಯನಟರಾದ ಪ್ರಕಾಶ್‌ ತೂಮಿನಾಡ್‌ ಮತ್ತು ದೀಪಕ್‌ ರೈ ಪಾಣಾಜೆ ಅವರು ಪ್ರೇಕ್ಷಕರಿಗೆ ಸಂಜೆಯ ವೈಭವದ ನಡುವೆ ಶುದ್ಧ ಸಂತೋಷ ಮತ್ತು ವಿನೋದದ ಕ್ಷಣಗಳನ್ನು ನೀಡಿದರು. ಬಿ.ಕೆ. ಗಣೇಶ್‌ ರೈ ನಿರೂಪಿಸಿದರು. ಚಂದನವನದ ನಾಯಕ ನಟ ರೂಪೇಶ್‌ ಶೆಟ್ಟಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಪ್ರಶಸ್ತಿ ಪುರಸ್ಕೃತರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಉನ್ನತ ನಾಯಕ ಡಾ| ತುಂಬೆ ಮೊಯ್ದಿàನ್‌, ಹಿದಾಯತುಲ್ಲಾ ಅಬ್ಟಾಸ್‌, ಸ್ಥಾಪಕ ಮತ್ತು ಅಧ್ಯಕ್ಷರು, ಹಿದಾಯತ್‌ ಗ್ರೂಪ್‌; ಮೊಹಮ್ಮದ್‌ ಮೀರಾನ್‌, ಅಧ್ಯಕ್ಷರು ಉMಇO ಇಂಟರ್‌ ನ್ಯಾಶನಲ್‌ ಮತ್ತು ಎಲೆಕ್ಟ್ರಿಕ್‌ ವೇ; ಜಫ್ರುಲ್ಲಾ ಖಾನ್‌ ಮಂಡ್ಯ, ಅಧ್ಯಕ್ಷರು ಮತ್ತು ಸಂಸ್ಥಾಪಕರು, ಘಎಇ ಗ್ಲೋಬಲ್‌ / ಝೈನ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ , ಜೇಮ್ಸ್‌ ಮೆಂಡೋನ್ಕಾ, ಸ್ಥಾಪಕ ಮತ್ತು ಅಧ್ಯಕ್ಷರು, ವಿಶ್ವಾಸಾರ್ಹ ಸಮೂಹ ಕಂಪೆನಿಗಳು, ನಿಸ್ಸಾರ್‌ಅಹಮದ್‌, ಅಧ್ಯಕ್ಷರು, ನ್ಯಾಶ್‌ ಎಂಜಿನಿಯರಿಂಗ್‌, ರಾಮಚಂದ್ರ ಹೆಗಡೆ, ವ್ಯವಸ್ಥಾಪಕ ನಿರ್ದೇಶಕರು, ಸ್ಪ್ರೆಟೆಕ್‌ ಕೋಟಿಂಗ್ಸ್‌, ಜೋಸೆಫ್‌ ಮಥಾಯಸ್‌, ವ್ಯವಸ್ಥಾಪಕ ನಿರ್ದೇಶಕ, ಮೆರಿಟ್‌ ಪ್ರೈಟ್ ಸಿಸ್ಟಮ್ಸ್‌ , ವಾಸುದೇವ ಭಟ್‌ ಪುತ್ತಿಗೆ, ಮಾಲಕರು, ವೀನಸ್‌ ಗ್ರೂಪ್‌ ಆಫ್‌ ರೆಸ್ಟೋರೆಂಟ್‌, ಮಹಮ್ಮದ್‌ ನವೀದ್‌ ಮಾಗುಂಡಿ, ಇಂಟಿಗ್ನಿಸ್‌ ಕಂಪೆನಿ, ಮನ್ಸೂರ್‌ಅಹಮದ್‌, ಅಧ್ಯಕ್ಷರು, ಸಾರಾ ಸಮೂಹ ಸಂಸ್ಥೆಗಳು, ಎಂ. ಸೈಯದ್‌ ಖಲೀಲ್‌.ಸ್ಥಾಪಕ ಅಧ್ಯಕ್ಷರು, ಕೆ – ಕೆ ಎಂಟರ್‌ ಪ್ರೈ ಸಸ್‌,

ಮೈಕಲ್‌ ಡಿಸೋಜಾ, ವ್ಯವಸ್ಥಾಪಕ ನಿರ್ದೇಶಕ ಐವರಿ ಗ್ರ್ಯಾಂಡ್‌ ರಿಯಲ್‌ ಎಸ್ಟೇಟ್‌, ಇಬ್ರಾಹಿಂ ಗಡಿಯಾರ್‌, ಮ್ಯಾನೇಜಿಂಗ್‌ ಡೈರೆಕ್ಟರ್‌- ಗಡಿಯಾರ್‌ ಗ್ರೂಪ್‌ ಆಫ್‌ ಕಂಪೆನೀಸ್‌ ಮತ್ತು ಡೈರೆಕ್ಟರ್‌ಪ್ರಾಜೆಕ್ಟ್ ಸ್‌ – ಪ್ಯಾಂಥಿಯಾನ್‌ ಡೆವಲಪ್‌ಮೆಂಟ್‌ ಗ್ರೂಪ್‌, ಡಾ| ಬಿ.ಕೆ ಯೂಸುಫ್‌, ಎಕ್ಸಿಕ್ಯೂಟಿವ್‌ ಚೇರ್ಮನ್‌, ಏರ್‌ಚಟೌ ಇಂಟರ್‌ನ್ಯಾಶನಲ್‌, ಡಾ| ಸತೀಶ್‌ ಪಿ. ಚಂದ್ರ, ಸಿಇಒ ಗ್ಲೋಬಲ್‌ ಟೆಕ್‌ ಪಾರ್ಕ್‌, ಡೆವಿಡ್‌ ಫ್ರಾಂಕ್‌ ಫೆರ್ನಾಂಡಿಸ್‌, ಚಾನ್ಸೆಲರ್‌ ಜನರಲ್‌ MEA, ಶಾಂತಿ ರಾಯಭಾರಿ ಮತ್ತು ಚೀಫ್‌ ಆಫ್‌ ಮಿಷನ್‌ (UAE) ICDRHRP IGO,, ಮಾರ್ಟಿನ್‌ ಅರಾನ್ಹಾ, ವ್ಯವಸ್ಥಾಪಕ ನಿರ್ದೇಶಕ ಗ್ಲೋಬೆಲಿಂಕ್‌ ವೆಸ್ಟ್‌ ಸ್ಟಾರ್‌ಶಿಪ್ಪಿಂಗ್‌, ಜಾನ್‌ ಸುನಿಲ್‌, ಮುಖ್ಯ

ಕಾರ್ಯನಿರ್ವಹಣಾಧಿಖಾರಿ ಬುರ್ಜೀಲ್‌ ಹೋಲ್ಡಿಂಗ್ಸ್‌ ಗ್ರೂಪ್‌, ಮೊಹಮ್ಮದ್‌ ಆಶಿಫ್ ಸಿಇಒ ಹಾಗೂ ಸಹ ಅಧ್ಯಕ್ಷ ಎಕ್ಸ್‌ ಪರ್ಟೈಸ್‌ ಗುತ್ತಿಗೆ ಕಂಪನಿ.

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.