IMEC ಗೆ ಟರ್ಕಿಯಿಂದ ಪ್ರತ್ಯಸ್ತ್ರ

Team Udayavani, Sep 24, 2023, 12:17 AM IST

IMEC MAP

ಹೊಸದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯ ವೇಳೆ ಚೀನದ ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಪ್ರತಿಯಾಗಿ ಭಾರತ- ಮಧ್ಯಪ್ರಾಚ್ಯ- ಯುರೋಪ್‌ ಕಾರಿಡಾರ್‌(ಐಎಂಇಸಿ) ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಭಾರತ, ಯುಎಇ, ಸೌದಿ ಅರೇಬಿಯಾ, ಅಮೆರಿಕ, ಜಪಾನ್‌, ಐರೋಪ್ಯ ಒಕ್ಕೂಟ, ಫ್ರಾನ್ಸ್‌, ಇಟಲಿ, ದೇಶಗಳು ಸೇರಿ ಹೊಸದಾಗಿ ಭಾರ ತ-ಮಧ್ಯ ಪ್ರಾಚ್ಯ-ಐರೋಪ್ಯ ರಾಷ್ಟ್ರಗಳೊಂದಿಗೆ ಸಂಪರ್ಕ ಕೊಂಡಿ ಯಾಗಿ ಈ ಆರ್ಥಿಕ ಕಾರಿಡಾರ್‌ ರಚಿ ಸುವ ತೀರ್ಮಾನಕ್ಕೆ ಬರಲಾಗಿದೆ. ಆದರೆ ಈ ಬಗ್ಗೆ ಟರ್ಕಿ ಅಸಮಾಧಾನಗೊಂಡಿದೆ. ಸದ್ಯ ಟರ್ಕಿಯು ತನ್ನ ಮಿತ್ರರಾಷ್ಟ್ರಗಳನ್ನು ಒಗ್ಗೂಡಿಸಿಕೊಂಡು ಪರ್ಯಾಯವಾಗಿ ಹೊಸ ಕಾರಿಡಾರ್‌ ರಚನೆಯ ಕಾರ್ಯದಲ್ಲಿ ತೊಡಗಿ ಕೊಂಡಿದೆ. ಟರ್ಕಿಯ ಅಸಮಾಧಾನಕ್ಕೆ ಕಾರಣವೇನು?, ಟರ್ಕಿಯ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಟರ್ಕಿ ಅಸಮಾಧಾನಕ್ಕೆ ಕಾರಣ?
ಜಿ20 ಶೃಂಗಸಭೆಯ ವೇಳೆ ಕೈಗೊಂಡ ನಿರ್ಣಯದಲ್ಲಿ ಹೊಸ ಆರ್ಥಿಕ ಕಾರಿಡಾರ್‌ನಲ್ಲಿ ಚೀನದ ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಬೆಂಬಲವಾಗಿದ್ದ ಟರ್ಕಿಯನ್ನು ಹೊರಗಿಡಲಾಗಿತ್ತು. ಈ ಬಗ್ಗೆ ಶೃಂಗಸಭೆಯ ಬಳಿಕ ಪ್ರತಿಕ್ರಿಯೆ ನೀಡಿದ್ದ ಟರ್ಕಿಯ ಅಧ್ಯಕ್ಷ ರಿಸೆಪ್‌ ತಯಿಪ್‌ ಎಡ್ರೊಗೆನ್‌ ಅವರು, ಟರ್ಕಿಯನ್ನು ಹೊರತುಪಡಿಸಿ ಯಾವುದೇ ಕಾರಿಡಾರ್‌ ರಚಿಸಲು ಸಾಧ್ಯವಿಲ್ಲ. ಪೂರ್ವದಿಂದ ಪಶ್ಚಿಮಕ್ಕೆ ವ್ಯಾಪಾರಕ್ಕೆ ತೆರಳಲು ಸೂಕ್ತವಾದ ಮಾರ್ಗವೆಂದರೆ ಟರ್ಕಿ ಮೂಲಕ ತೆರಳುವುದು ಎಂದಿದ್ದರು. ಹಿಂದಿನಿಂದಲೂ ಪೂರ್ವ ಮತ್ತು ಪಶ್ವಿ‌ಮ ರಾಷ್ಟ್ರಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಟರ್ಕಿಗೆ ಹೊಸ ಕಾರಿಡಾರ್‌ ರಚನೆಯ ನಿರ್ಧಾರ ಆಘಾತ ನೀಡಿತ್ತು.

ಟರ್ಕಿಯಿಂದ ಹೊಸ ಯೋಜನೆ
ಭಾರತ- ಮಧ್ಯಪ್ರಾಚ್ಯ- ಯುರೋಪ್‌ ಕಾರಿಡಾರ್‌ಗೆ ಪರ್ಯಾಯವಾಗಿ ಸುಮಾರು 17 ಬಿಲಿಯನ್‌ ಡಾಲರ್‌ ಮೊತ್ತದ ಹೊಸ ಮಾರ್ಗದ ಬಗ್ಗೆ ಇರಾಕ್‌ ಡೆವಲಪ್‌ಮೆಂಟ್‌ ರೋಡ್‌ ಇನಿಶಿಯೇಟಿವ್‌ ಯೋಜನೆ ರೂಪಿಸಿದೆ. ಕತಾರ್‌, ಯುಎಇ ಮತ್ತು ಇರಾಕ್‌ ರಾಷ್ಟ್ರಗಳ ಮಧ್ಯೆ ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಟರ್ಕಿಯ ವಿದೇಶಾಂಗ ಸಚಿವ ಹ್ಯಾಕನ್‌ ಪೈಢನ್‌ ಹೇಳಿದ್ದಾರೆ.

ದಕ್ಷಿಣ ಇರಾಕ್‌ನ ಗ್ರ್ಯಾಂಡ್‌ ಫಾ ಬಂದರಿನಿಂದ ಹೊರಟು ಇರಾಕ್‌ನ 10 ಪ್ರಾಂತಗಳನ್ನು ದಾಟಿ ಟರ್ಕಿಯನ್ನು ತಲುಪುವ ಬಗ್ಗೆ ಬಾಗ್ಧಾದ್‌ ಸರಕಾರ ಬಿಡುಗಡೆ ಮಾಡಿದ ನೀಲನಕ್ಷೆಯಲ್ಲಿ ತಿಳಿಸಿದೆ. ಮೂರು ಹಂತದಲ್ಲಿ ಈ ಯೋಜನೆ ನಿರ್ಮಾಣವಾಗಲಿದ್ದು, 2028ರಲ್ಲಿ ಮೊದಲ ಹಂತ ಪೂರ್ಣಗೊಂಡರೆ, ಕೊನೆಯ ಹಂತ 2050ರಲ್ಲಿ ಮುಗಿಯಲಿದೆ. ಭಾರತ- ಮಧ್ಯಪ್ರಾಚ್ಯ- ಯುರೋಪ್‌ ಕಾರಿಡಾರ್‌ ಪೂರ್ಣಗೊಳ್ಳಲೂ ಹಲವು ದಶಕಗಳು ಬೇಕಾಗಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಕತಾರ್‌, ಯುಎಇಯಿಂದ ಬೆಂಬಲ ನಿರೀಕ್ಷೆ
ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಟರ್ಕಿಯು ಆರ್ಥಿಕ ಸಮಸ್ಯೆ ಎದುರಿ ಸುತ್ತಿದೆ. ಈ ಹಿನ್ನೆಲೆಯಲ್ಲಿ ಯುಎಇ ಮತ್ತು ಕತಾರ್‌ನ ಬೆಂಬಲದ ನಿರೀಕ್ಷೆ ಯಲ್ಲಿದೆ. ಈ ಯೋಜನೆಯಲ್ಲಿ ಗಲ್ಫ್ ರಾಷ್ಟ್ರಗಳು ಹೂಡಿಕೆ ಮಾಡುವಂತೆ ಮನ ವೊಲಿಸಬೇಕಾಗಿದೆ ಎಂದು ಯುರೇಷ್ಯಾ ಥಿಂಕ್‌ -ಟ್ಯಾಂಕ್‌ನ ಯುರೋಪ್‌ ನಿರ್ದೇಶಕ ಎಮ್ರೆ ಪೆಕರ್‌ ಹೇಳಿದ್ದಾರೆ.

ರಂಜಿನಿ, ಮಿತ್ತಡ್ಕ

ಟಾಪ್ ನ್ಯೂಸ್

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.