AAINA  Mahal: ಐನಾ ಮಹಲ್‌ ಎಂಬ ಅಚ್ಚರಿ!

Team Udayavani, Sep 24, 2023, 11:40 AM IST

tdy-8

ವಿಜಯಪುರ ಎಂದಾಕ್ಷಣ ಎಲ್ಲರಿಗೂ ವಿಶ್ವವಿಖ್ಯಾತ ಗೋಲಗುಮ್ಮಟ ನೆನಪಾಗುತ್ತದೆ. ಅಲ್ಲಿಂದ ಕೇವಲ ಐದು ಕಿಲೋಮೀಟರ್‌ ದೂರವಿರುವ ಐನಾಪುರದಲ್ಲಿ ಅಪೂರ್ವ ವಾಸ್ತುಶಿಲ್ಪದ ಸ್ಮಾರಕವೊಂದಿದೆ. ಶಾಹಿಬೇಗಂ ಸ್ಮಾರಕ ಎಂದೇ ಹೆಸರಾಗಿರುವ ಈ ಸ್ಥಳದಲ್ಲಿ ಹತ್ತಾರು ಸ್ವಾರಸ್ಯಕರ ಸಂಗತಿಗಳಿವೆ…

ವಿಜಯಪುರದಿಂದ ಕಲಬುರ್ಗಿ ಕಡೆಗೆ ಪಯಣಿಸುವಾಗ ಸಿಗುವ ಐನಾಪುರ ಕ್ರಾಸ್‌ನಿಂದ ಐನಾಪುರ ಗ್ರಾಮದೊಳಗೆ ಒಂದು ಕಿ. ಮೀ ಕ್ರಮಿಸಿದರೆ ಆ ರಸ್ತೆ ನಿಮ್ಮನ್ನು ನೇರವಾಗಿ ಸ್ಮಾರಕವೊಂದರ ಎದುರು ಕರೆದೊಯ್ದು ನಿಲ್ಲಿಸುತ್ತದೆ. ಗ್ರಾಮಸ್ಥರಿಂದ ಶಾಹಿಬೇಗಂ ಸ್ಮಾರಕ ಎಂದು ಕರೆಸಿಕೊಳ್ಳುವ ಈ ಸ್ಮಾರಕ ರಾಣಿಯ ಸಮಾಧಿ ಸ್ಥಳ. ಇದು ಹಲವು ರೋಚಕ ಸಂಗತಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ವಿಶ್ವ ಪ್ರಸಿದ್ಧ ಗೋಲಗುಮ್ಮಟದ ನಾಲ್ಕು ಮೂಲೆಗಳಲ್ಲಿರುವ ಗೋಪುರಗಳ ಅಸ್ತಿಪಂಜರದಂತಿರುವ ಈ ಸ್ಮಾರಕ, ಮೇಲ್ನೋಟಕ್ಕೆ ನಗರದಲ್ಲೇ ಇರುವ ಮತ್ತೂಂದು ಅಪೂರ್ಣ ಸ್ಮಾರಕ ಬಾರಾಕಮಾನ್‌ನ ಮಾದರಿಯನ್ನು ನೆನಪಿಸುತ್ತದೆ. ಇದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿದ್ದರೂ, ಸ್ಮಾರಕ ಕುರಿತ ಸಮಗ್ರ ಮಾಹಿತಿ ಈ ಇಲಾಖೆಯಲ್ಲಿಲ್ಲ. ಇತಿಹಾಸ ಸಂಶೋಧಕರ ಅನಾದರದಿಂದ ಜಿಲ್ಲೆಯಲ್ಲಿರುವ ಹಲವು ಸ್ಮಾರಕಗಳಂತೆ ಇದೂ ಅನಾಮಧೇಯವಾಗಿಯೇ ಉಳಿದಿದೆ.

ಊರಿಗೂ ರಾಣಿಯ ಹೆಸರು!: 

ಇತಿಹಾಸತಜ್ಞರ ಪ್ರಕಾರ ವಿಶ್ವ ಪ್ರಸಿದ್ಧ ಗೋಲಗುಮ್ಮಟದ ನಿರ್ಮಾತೃ ಮೊಹಮ್ಮದ್‌ ಆದಿಲ್‌ ಶಹಾನ (ಕ್ರಿ.ಶ 1627-1656) ರಾಣಿಯರಲ್ಲಿ ಜಹಾನಬೇಗಂ ಒಬ್ಬಳಾಗಿದ್ದಳು. ರಾಜನ ಮೂವರು ಪತ್ನಿಯರಲ್ಲಿ ಪ್ರಭಾವಿಯಾಗಿದ್ದ ಈಕೆ ಸೂಫಿ ಸಂತನ ಮಗಳಾಗಿದ್ದಳು. ಗೋಲ್ಕೊಂಡದ ಕುತುಬ್‌ ಶಾಹಿ ಮನೆತನದ ಕುಡಿಯಾಗಿದ್ದಳು. ಈಕೆಯ ಹೊರತಾಗಿ ಈ ರಾಜನಿಗೆ ಖತೀಜಾ ಸುಲ್ತಾನಾ ಹಾಗೂ ಉರೂಸ್‌ ಬೇಗಂ ಎಂಬ ಇನ್ನಿಬ್ಬರು ರಾಣಿಯರೂ ಇದ್ದರು ಎಂಬುದು ಇತಿಹಾಸ ತಜ್ಞರ ಮಾತು.

AAINA  ಎಂದರೆ ಪರ್ಷಿಯನ್‌ ಭಾಷೆಯಲ್ಲಿ ಕನ್ನಡಿ ಎಂದರ್ಥ. ಇಲ್ಲಿ ಶಾಹಿ ಅರಸನ ಪ್ರೀತಿಯ ರಾಣಿ ಜಹಾನ ಬೇಗಂಳ ಚೆಲುವನ್ನು ಕನ್ನಡಿಗೆ ಹೋಲಿಸಲಾಗಿದೆ. ಈ ಸ್ಮಾರಕದ ಪಕ್ಕದಲ್ಲೇ ಜಹಾನಬೇಗಂ ವಾಸದ ಮನೆ ನಿರ್ಮಿಸಿಕೊಂಡು ನೆಲೆಸಿದ್ದಳು. ಈ ಕಾರಣಗಳಿಂದ ಅದನ್ನು ಐನಾ ಮಹಲ್‌ ಎಂದೂ, ರಾಣಿ ವಾಸವಿದ್ದ ಸ್ಥಳವನ್ನು ಐನಾಪುರ ಎಂದೂ ಕರೆಯಲಾಗುತ್ತದೆ.

ಈಡೇರದ ಮಹದಾಸೆ: 

ತನ್ನ ಪತಿ ವಿಶಿಷ್ಟ ವಿನ್ಯಾಸದ ಗೋಲಗುಮ್ಮಟ ನಿರ್ಮಾಣಕ್ಕೆ ಮುಂದಾದಾಗ ಜಹಾನಬೇಗಂ ಸಹ 1650ರ ಸುಮಾರಿಗೆ ಅದೇ ಮಾದರಿಯ ಸ್ಮಾರಕ ನಿರ್ಮಿಸಲು ಮುಂದಾಗಿದ್ದಳು. ಆದರೆ ಅಷ್ಟರಲ್ಲೇ ಆಕೆ ಕಾಲವಾದ ಕಾರಣ ಅದು ಅಪೂರ್ಣವಾಗಿಯೇ ಉಳಿಯಿತು ಎನ್ನಲಾಗುತ್ತದೆ.  ಈ ಸ್ಮಾರಕದಲ್ಲೇ ಜಹಾನಬೇಗಂ ಸಮಾಧಿ ಇದೆ. ಅದರ ಜೊತೆಗಿರುವ ಇತರೆ ನಾಲ್ಕು ಸಣ್ಣ ಸಮಾಧಿಗಳು ಆಕೆಯ ಕುಟುಂಬ ಸದಸ್ಯರ ಸಮಾಧಿಗಳು ಎನ್ನಲಾಗಿದೆ. ಸ್ಥಳೀಯ ಕರಿಯ ಹಾಗೂ ಒರಟು ಕಲ್ಲುಗಳನ್ನೇ ಬಳಸಿ ಇಡೀ ಕಟ್ಟಡ ನಿರ್ಮಿಸಲಾಗಿದೆ. ಸದರಿ ಸ್ಮಾರಕದ ಪರಿಸರದಲ್ಲಿಯೇ 3 ಕಮಾನಿನ 4 ಮಿನಾರುಗಳ ಮಸೀದಿಯೂ ಇದೆ.

ಅಪೂರ್ವ ವಾಸ್ತುಶಿಲ್ಪ: 

ಜಹಾನಬೇಗಂ ಸ್ಮಾರಕ 3ರ ಗುಣಾಕಾರ, 6ರ ಲೆಕ್ಕಾಚಾರ, 12ರ ವೈಶಿಷ್ಟéತೆಯ ವಾಸ್ತು ವಿನ್ಯಾಸ ಹೊಂದಿದೆ. ಹೀಗಾಗಿಯೇ ಈ ಸ್ಮಾರಕ ಸಂಶೋಧಕರು ಮತ್ತು ಇತಿಹಾಸದ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಹಲವು ಆಕರವನ್ನು ತೆರೆದಿಡಲಿದೆ. ಹೊರನೋಟದಲ್ಲಿ ಚೌಕಾಕಾರದಲ್ಲಿರುವ ಈ ಸ್ಮಾರಕದ ನಾಲ್ಕೂ ದಿಕ್ಕಿನಲ್ಲಿ ಮೇಲೆ ಏರಲು ಸಾಧ್ಯವಿರುವ 4 ಗೋಪುರಗಳಿವೆ. ಗೋಪುರಗಳ ಪ್ರತಿ ಬುನಾದಿಯ ಮೇಲ್ಭಾಗದಲ್ಲಿ 5 ಕಡೆಗಳಲ್ಲಿ 6 ಹೂವಿನ ಚಿತ್ರಗಳನ್ನು ಕೆತ್ತಲಾಗಿದೆ. ಎರಡು ಕಡೆ 7 ಚಿತ್ತಾರಗಳ ಕುಸುರಿ ಕೆಲಸ ಮಾಡಿದ್ದಾರೆ. ಇದರಲ್ಲಿ 7 ಚಿತ್ತಾರಗಳಿರುವ ಭಾಗದಲ್ಲಿ 2-3 ಕಡೆಗಳಲ್ಲಿ ಅಪೂರ್ಣ ಚಿತ್ರಗಳಿವೆ.

ಸ್ಮಾರಕದ ಮೇಲ್ಭಾವಣಿಯಲ್ಲಿ ನೆಲ ಮಾಳಿಗೆಯಲ್ಲಿರುವ ಸಮಾಧಿಗಳಿಗೆ ಬೆಳಕಿನ ವ್ಯವಸ್ಥೆಗಾಗಿ 4 ದಿಕ್ಕಿಗೆ ತಲಾ 3ರಂತೆ 12 ಬೆಳಕಿಂಡಿಗಳ ಕಲ್ಲಿನಲ್ಲಿ ಕೆತ್ತಿನ ಜಾಲರಿ ಮಾಡಲಾಗಿದೆ. ಪ್ರತಿ ಬೆಳಕಿಂಡಿಯ ಜಾಲರಿಯಲ್ಲಿ ಉದ್ದ-ಅಗಲವಾಗಿ ತಲಾ 6 ಕಿಂಡಿಗಳ ಒಟ್ಟು 36 ಜಾಲರಿಯ ಕಲ್ಲಿನಲ್ಲಿ ಕೆತ್ತಿರುವ ಬೆಳಕಿಂಡಿಗಳಿವೆ. ಪ್ರತಿ ದಿಕ್ಕಿನಿಂದಲೂ ವ್ಯವಸ್ಥಿತವಾಗಿ ಗಾಳಿ-ಬೆಳಕು ನೆಲಮಾಳಿಗೆಗೆ ಸುಲಭವಾಗಿ ಬೀಳುವಂತೆ ಮಾಡಿರುವುದು ವಾಸ್ತುಶಿಲ್ಪಿಯ ಚಾಣಾಕ್ಷತೆಗೆ ಸಾಕ್ಷಿ ಹೇಳುತ್ತದೆ.

ನೆಲ ಮಾಳಿಗೆಯಲ್ಲಿ ಹೊರ ಗೋಡೆಯಲ್ಲದೇ ವಿಶಾಲ ಮೇಲ್ಛಾವಣಿಗೆ ಆಸರೆಯಾಗಿ ಒಳ ಭಾಗದಲ್ಲಿ 4 ದಿಕ್ಕುಗಳಲ್ಲಿ ತಲಾ 3ರಂತೆ ಕಮಾನು ಸಹಿತ ಗೋಡೆಗಳನ್ನು ನಿರ್ಮಿಸಲಾಗಿದೆ. ಇಷ್ಟೆಲ್ಲ ವಿಶಿಷ್ಟ ಹಾಗೂ ಅಪರೂಪದ ವಾಸ್ತು ವಿನ್ಯಾಸ ಹೊಂದಿದ್ದರೂ ಪಟ್ಟದರಾಣಿ ಜಹಾನ ಬೇಗಂಳ ಸಮಾಧಿ ಸ್ಥಳವಾಗಿದ್ದರ ಬಗ್ಗೆ ಹೆಚ್ಚಿನ ದಾಖಲೆಗಳು, ಐತಿಹಾಸಿಕ ಸಂಗತಿಗಳು ನಿಖರವಾಗಿ ಲಭ್ಯವಾಗುತ್ತಿಲ್ಲ. ಈ ಸ್ಮಾರಕದ ಕುರಿತು ಇತಿಹಾಸ ತಜ್ಞರು, ಸಂಶೋಧಕರು ಇನ್ನಾದರೂ ಬೆಳಕು ಚೆಲ್ಲಬೇಕಿದೆ.

ಕಮಾನುಗಳ ಲೋಕದಲ್ಲಿ…
ಪ್ರತಿ ಗೋಪುರವೂ 4 ಅಂತಸ್ತುಗಳನ್ನು ಹೊಂದಿವೆ. ಪ್ರತಿ ಗೋಪುರದ ಮೇಲ್ಛಾವಣಿಯ ಸುತ್ತಲೂ ಇರುವ 4 ಗೋಪುರಗಳಲ್ಲಿ ಪ್ರತಿ ಸಾಲಿನಲ್ಲಿ ಒಟ್ಟು ಅಡ್ಡಲಾಗಿ 6 ಹಾಗೂ ಎತ್ತರವಾಗಿ 4 ಕಮಾನುಗಳಿವೆ. ಯಾವುದೇ ದಿಕ್ಕಿನಿಂದ ನೋಡಿದರೂ ಅಡ್ಡಲಾಗಿ 3 ಹಾಗೂ ಎತ್ತರವಾಗಿ 4 ಕಮಾನುಗಳಂತೆ 3ರಿಂದ 4ರ ಗುಣಿತದ ಲೆಕ್ಕದಲ್ಲಿ ಒಟ್ಟು 12 ಕಮಾನುಗಳು ಮಾತ್ರ ಗೋಚರಿಸುವಂತೆ ನಿರ್ಮಿಸಿರುವುದು ಈ ಸ್ಮಾರಕದ ವೈಶಿಷ್ಟ್ಯ

ಗೋಲಗುಮ್ಮಟ ನಿರ್ಮಿಸಿರುವ ಮೊಹಮ್ಮದ್‌ ಆದಿಲ್‌ ಶಹಾನ ರಾಣಿಯರಲ್ಲಿ ಒಬ್ಬಳಾಗಿದ್ದ ಜಹಾನಬೇಗಂ ಈ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದಳು. ಕಟ್ಟಡ ಪೂರ್ಣಗೊಳ್ಳುವ ಮುನ್ನವೇ ಆಕೆ ನಿಧನಳಾದ ಕಾರಣ ಅಪೂರ್ಣ ಆ ಸ್ಮಾರಕದಲ್ಲೇ ಆಕೆಯ ಅಂತ್ಯಸಂಸ್ಕಾರ ಮಾಡಿ ಸಮಾಧಿ ನಿರ್ಮಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ.-ಡಾ| ಕೃಷ್ಣ ಕೊಲ್ಹಾರ ಕುಲರ್ಣಿ, ಇತಿಹಾಸ ಸಂಶೋಧಕರು, ವಿಜಯಪುರ 

-ಜಿ.ಎಸ್‌.ಕಮತರ

ಟಾಪ್ ನ್ಯೂಸ್

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.