Aditi Prabhudeva; ಬಾಲ್ಯದ ಕನಸು ಸಿನಿಮಾದಲ್ಲಿ ನನಸು:’ಅಲೆಕ್ಸ’ದಲ್ಲಿ ಅದಿತಿ ಖಡಕ್‌ಪೊಲೀಸ್
Team Udayavani, Sep 24, 2023, 12:16 PM IST
“ಚಿಕ್ಕ ವಯಸ್ಸಿನಲ್ಲಿ ನನಗೆ ಪೊಲೀಸ್ ಆಫೀಸರ್ ಆಗಬೇಕೆಂಬ ಕನಸಿತ್ತು. ನಿಜ ಜೀವನದಲ್ಲಿ ಅಂಥದ್ದೊಂದು ಕನಸು ನನಸಾಗಲಿಲ್ಲ. ಆದರೆ ಈಗ ಸಿನಿಮಾದಲ್ಲಿ ಆ ಕನಸು ನನಸಾಗಿದೆ’ ಇದು ನಟಿ ಅದಿತಿ ಪ್ರಭುದೇವ ಮಾತು. ಅಂದಹಾಗೆ, ಮದುವೆಯ ಬಳಿಕ ಅದಿತಿ ಪ್ರಭುದೇವ ಅಭಿನಯಿಸಿರುವ ಮತ್ತೂಂದು ಸಿನಿಮಾ “ಅಲೆಕ್ಸ’ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿರುವ ಅದಿತಿ ಪ್ರಭುದೇವ, ಇದೇ ಮೊದಲ ಬಾರಿಗೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ “ಅಲೆಕ್ಸ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದೇ ವೇಳೆ ಮಾತನಾಡಿದ ಅದಿತಿ ಪ್ರಭುದೇವ ತಮ್ಮ ಬಾಲ್ಯದ ಕನಸು ತೆರೆಮೇಲೆ ನನಸಾದ ಖುಷಿ ಹಂಚಿಕೊಂಡರು. “ಚಿಕ್ಕ ವಯಸ್ಸಿನಲ್ಲಿ ಪೊಲೀಸ್ ಆಫೀಸರ್ ಆಗಬೇಕೆಂಬ ಕನಸು ನನಸಾಗಲಿಲ್ಲ. ಆಮೇಲೆ ಮಾಲಾಶ್ರೀ ಅವರ ಸಿನಿಮಾಗಳನ್ನು ನೋಡುತ್ತಿದ್ದಾಗ, ನನಗೂ ಈ ಫೈಟ್ಸ್, ಆ್ಯಕ್ಷನ್ಸ್ ಮಾಡಬೇಕು ಅಂಥ ಅನಿಸುತ್ತಿತ್ತು. ಈಗ ಅದೆಲ್ಲವೂ “ಅಲೆಕ್ಸ’ ಸಿನಿಮಾದಲ್ಲಿ ನನಸಾಗಿದೆ. ಈ ಸಿನಿಮಾದಲ್ಲಿ ನಾನು ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಇದೊಂದು ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಇದರಲ್ಲಿ ನನಗೆ ಎರಡು-ಮೂರು ಭರ್ಜರಿ ಆ್ಯಕ್ಷನ್ಸ್, ಫೈಟ್ಸ್ ಸೀನ್ಸ್‌ಯಿದೆ. ಮೊದಲ ಬಾರಿಗೆ ಈ ಥರದ ಪಾತ್ರದಲ್ಲಿ ಅಭಿನಯಿಸಿದ್ದು, ಶೂಟಿಂಗ್ ಮಾಡಿದ್ದು ಎಲ್ಲವೂ ಹೊಸಥರನಾಗಿತ್ತು’ ಎಂದಿದ್ದಾರೆ.
“ಸಿನಿಮಾದಲ್ಲಿ ನಾನು ಮಾಡಿರುವ ಆ್ಯಕ್ಷನ್ ದೃಶ್ಯಗಳನ್ನು ರವಿವರ್ಮ ಮತ್ತು ಮಾಸ್ ಮಾದ ಅವರು ಕಂಪೋಸ್ ಮಾಡಿದ್ದಾರೆ. ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದಲ್ಲಿ ಸಣ್ಣ-ಪುಟ್ಟ ಗಾಯಗಳಾಯಿತು. ಆದರೂ ಮಾನಿಟರ್‌ನಲ್ಲಿ ನನ್ನ ಆ್ಯಕ್ಷನ್ಸ್ ಸೀನ್ಸ್ ನೋಡಿದಾಗ, ಇನ್ನೂ ಹೆಚ್ಚಾಗಿ ಆ್ಯಕ್ಷನ್ಸ್ ಮಾಡಬೇಕು ಅನಿಸುತ್ತಿತ್ತು. ಹೀರೋಗಳಿಗೆ ಮಾತ್ರ ಆ್ಯಕ್ಷನ್ಸ್, ಫೈಟ್ಸ್ ಇರುತ್ತದೆ. ನನಗೂ ಅಂಥದ್ದೇ ಆ್ಯಕ್ಷನ್ಸ್-ಫೈಟ್ಸ್ ಮಾಡಬೇಕು ಎಂಬ ಆಸೆ ಈ ಸಿನಿಮಾದಲ್ಲಿ ಈಡೇರಿದೆ’ ಎಂದಿದ್ದಾರೆ ಅದಿತಿ ಪ್ರಭುದೇವ.
ಇನ್ನು “ಅಲೆಕ್ಸಾ’ ಸಿನಿಮಾದಲ್ಲಿ ಅದಿತಿ ಪ್ರಭುದೇವ ಅವರಿಗೆ ಪವನ್ ತೇಜ್ ನಾಯಕನಾಗಿ ಅಭಿನಯಿಸಿದ್ದಾರೆ. ಮೇಘಶ್ರೀ, ನೂತನ್, ನಾಗಾರ್ಜುನ್, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“2020ರಲ್ಲಿ “ಅಲೆಕ್ಸ’ ಸಿನಿಮಾದ ಕೆಲಸ ಶುರುವಾಯಿತು. ಸಿನಿಮಾಕ್ಕಾಗಿ ಸಾಕಷ್ಟು ರಿಸರ್ಚ್ ಮಾಡಲಾಗಿದೆ. “ಅಲೆಕ್ಸ’ ಮರ್ಡರ್ ಮಿಸ್ಟರಿ ಸಿನಿಮಾ. ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಕೊಲೆಯೊಂದರ ಹಿಂದೆ ನಡೆಯುವ ಘಟನೆಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಫಾರ್ಮಾಸಿಟಿಕಲ್ ಮಾಫಿಯಾದ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ ಎಂಬುದು ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ನಿರ್ದೇಶಕ ಜೀವ ಅವರ ವಿವರಣೆ.
“ಸಿನಿಮಾದಲ್ಲಿ ಗಂಡ-ಹೆಂಡತಿ ಕೊಲೆ ಆಗಿರುತ್ತದೆ. ಆ ಕೊಲೆಯ ತನಿಖೆಯ ಸುತ್ತ ಮತ್ತು ಅದರ ಹಿಂದಿನ ಕಥೆಯ ಸುತ್ತ ಸಾಗುತ್ತದೆ. ಅದಿತಿ ಪ್ರಭುದೇವ ಅವರ ಜೊತೆ ಅಭಿನಯಿಸುವ ಕನಸು ಈ ಸಿನಿಮಾದಲ್ಲಿ ನನಸಾಗಿದೆ. ಅವರೊಂದಿಗೆ ಅಭಿನಯಿಸಿದ್ದು, ಒಂದೊಳ್ಳೆಯ ಅನುಭವ. ಫಾರ್ಮಾಸೆಟಿಕಲ್ ಮಾಫಿಯಾ ಬಗ್ಗೆ ಕೂಡ ಸಿನಿಮಾದಲ್ಲಿ ತೋರಿಸಿದ್ದೇವೆ. ಮೂರು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ’ ಎಂಬುದು ನಾಯಕ ನಟ ಪವನ್ ತೇಜ್ ಮಾತು.
ವಿ. ಚಂದ್ರು ನಿರ್ಮಾಣದಲ್ಲಿ ಮೂಡಿಬಂದಿರುವ “ಅಲೆಕ್ಸ’ ಚಿತ್ರಕ್ಕೆ ಸಾಯಿ ಸತೀಶ್ ಛಾಯಾಗ್ರಹಣ, ಉಮೇಶ್ ಆರ್. ಬಿ ಸಂಕಲನವಿದೆ. ಮೈಸೂರು, ಮಡಿಕೇರಿ, ಶ್ರೀರಂಗಪಟ್ಟಣ, ಬೆಂಗಳೂರು ಸುತ್ತಮುತ್ತ “ಅಲೆಕ್ಸ’ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಸೆನ್ಸಾರ್‌ನಿಂದ “ಯು/ಎ’ ಪ್ರಮಾಣ ಪತ್ರ ಪಡೆದುಕೊಂಡಿರುವ “ಅಲೆಕ್ಸ’ ಸಿನಿಮಾವನ್ನು ಇದೇ ನವೆಂಬರ್ ಮೊದಲ ವಾರ ಬಿಡುಗಡೆಗೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ ಎಂದಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.