UV Fusion: ಅತಿಯಾದ ಕೋಪ ಹಾನಿಕರ


Team Udayavani, Sep 24, 2023, 12:22 PM IST

10–fusion-anger

ಸಿಟ್ಟೇ ಬಾರದ ಮನುಷ್ಯ ಜಗತ್ತಿನಲ್ಲಿ ಎಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ. ಯಾಕೆಂದರೆ, ಸಿಟ್ಟು ಮನುಷ್ಯನ ಹುಟ್ಟುಗುಣ. ಇಷ್ಟವಾದ ವಸ್ತುವನ್ನು ಬಲವಂತವಾಗಿ ಕಿತ್ತುಕೊಂಡಾಗ, ಹೆಂಡತಿ ಕಾಫಿಗೆ ಸಕ್ಕರೆ ಕಡಿಮೆ ಹಾಕಿದಾಗ, ಗಾಢ ನಿದ್ರೆಯಲ್ಲಿರುವವರನ್ನು ತಟ್ಟಿ ಎಬ್ಬಿಸಿದಾಗ ಮತ್ತು ವಿನಾ ಕಾರಣ ಯಾರದರೂ ನಮ್ಮ ಇಚ್ಚೆಗಳ ವಿರುದ್ಧ ನಡೆದುಕೊಂಡಾಗ ನಾವು ತತ್‌ಕ್ಷಣ ಸಿಡಿ ಮಿಡಿಗೊಳ್ಳುತ್ತೇವೆ. ಯಾಕೆಂದರೆ ಸಿಟ್ಟು ಒಂದು ಸ್ವಾಭಾವಿಕ ಪ್ರತಿಕ್ರಿಯೆ. ನೆನಪಿರಲಿ ಅತಿಯಾದ ಸಿಟ್ಟು ನಮ್ಮನ್ನು ಅಪಾಯದ ಕೂಪಕ್ಕೂ ತಳ್ಳಬಹುದು.
ಒಂದು ಸಂಸ್ಕೃತ ಸುಭಾಷಿತ ಹೀಗೆ ನುಡಿಯುತ್ತದೆ. “ಕ್ರೋಧೋ ಹಿ ಶತ್ರುಃ ಪ್ರಥಮೋ ನರಾಣಾಂ’ ಅಂದರೆ, ಕೋಪ ಮನುಷ್ಯನ ಮೊದಲ ಶತ್ರು ಎಂದು. ಬಸವಣ್ಣನವರು ಸಿಟ್ಟನ್ನು ಹೀಗೆ ಬಣ್ಣಿಸಿ¨ªಾರೆ- “ಮನೆಯೊಳಗಣ ಕಿಚ್ಚು, ಮನೆಯನ್ನೇ ಸುಡುವಂತೆ ತನ್ನಲ್ಲಿ ಹುಟ್ಟಿದ ಕೋಪ ತನ್ನನ್ನೇ ಸುಡುವುದಲ್ಲದೇ ಬಿಡದು’ ಎಂದು. ಕ್ರೋಧ ಹುಟ್ಟುವುದೇ ಅತಿಯಾಸೆ(ಕಾಮ)ಯಿಂದ ಎನ್ನುತ್ತಾನೆ ಕೃಷ್ಣ. ಸಂಗಾತ್‌ ಕಾಮಃ, ಕಾಮಾತ್‌ ಕ್ರೋಧಃ, ಕ್ರೋಧಾತ್‌ ಸಂಮ್ಮೊàಹಃ, ಸಂಮೋಹಾತ್‌ ಸ್ಮ ೃತಿ ವಿಭ್ರಮಃ, ಸ್ಮ ೃತಿಭ್ರಂಶಾತ್‌ ಬುದ್ಧಿನಾಶಃ, ಬುದ್ಧಿನಾಶಾತ್‌ ಪ್ರಣಶ್ಯತಿ. ಹೀಗೆ ಅತಿಯಾದ ಮೋಹ, ಕೋಪಕ್ಕೆ ಸಿಲುಕಿದ ಮನುಷ್ಯ ಹಂತ ಹಂತವಾಗಿ ಹೇಗೆ ನಾಶವಾಗುತ್ತಾನೆ ಎನ್ನುವುದನ್ನು ಕೃಷ್ಣ ಗೀತೆಯಲ್ಲಿ ಸುಂದರವಾಗಿ ಬಣ್ಣಿಸಿದ್ದಾನೆ. ಅಲ್ಲದೇ ಅದರಿಂದ ಹೊರ ಬರುವ ಉಪಾಯವನ್ನೂ ಸೂಚಿಸಿದ್ದಾನೆ.
ಅನವಶ್ಯಕ ನಮ್ಮ ಬೇಕುಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯತೆಯಿದೆ. ಹಾಗಿದ್ದಾಗ ಮಾತ್ರ ನಾವು ಸಿಟ್ಟನ್ನು ನಿಯತ್ರಿಸಬಹುದು. ಇಲ್ಲವಾದಲ್ಲಿ ನಾವು ಸಿಟ್ಟಿನ ಸೇವಕರಾಗಬೇಕಾದೀತು.
ಸಿಟ್ಟಿನಲ್ಲಿ ನಾವು ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡು, ಅನೇಕ ಬಾರಿ ಸಂಕಷ್ಟಕ್ಕೀಡಾಗುತ್ತೇವೆ. ಅತಿಯಾದ ಸಿಟ್ಟಿನಿಂದ ದೇಹದ ಕ್ರಿಯಾಶಕ್ತಿಗೆ ಕಾರಣವಾದ ಸೆಲ್ಸ್‌ ಗಳು ನಾಶವಾಗಿ, ಮನುಷ್ಯ ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಳೆದುಕೊಳ್ಳುತ್ತಾನೆ. ಇಷ್ಟವಾದ ವ್ಯಕ್ತಿಗಳೊಂದಿಗೆ ದ್ವೇಷಕಟ್ಟಿಕೊಳ್ಳುತ್ತಾನೆ. ಕೆಲವು ಸಮಯ ನಮ್ಮ ಸಿಡುಕು ಪರರಿಗೆ ಅಸಹ್ಯವೆನಿಸುತ್ತದೆ. ವಿನಾ ಕಾರಣ ಸಿಡಿಮಿಡಿಗೊಳ್ಳುವ ನಾವು ಒಂದು ದಿನ ಜೀವನದಲ್ಲಿ ಒಂಟಿಯಾಗಬಹುದು. ಹಾಗಾಗಿ ಸಿಟ್ಟಿನ ಈ ಎಲ್ಲ ಪರಿಣಾಮಗಳನ್ನು ಸಿಟ್ಟುಗೊಳ್ಳುವ ಮುನ್ನ ನೆನೆಸಿಗೊಂಡಾಗ, ಸಿಟ್ಟಿಗೆ ತುಸು ಕಡಿವಾಣ ಹಾಕಬಹುದು. ಅದೇಷ್ಟೋ ರಾಜಕಾರಣಿಗಳನ್ನು ನಾವು ನೋಡಬಹುದು ಕ್ಷುಲ್ಲಕ ಕಾರಣಗಳಿಗೆ ಸಿಟ್ಟಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡಿ, ಸಿಟ್ಟಿನ ಭರದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಏಕವಚದಲ್ಲಿ ಬೈದು, ದೇಶ, ಸಂಸ್ಕೃತಿಯ ಬಗ್ಗೆ ಕುಹಕ ಮಾತುಗಳನ್ನಾಡಿ, ಶಾಂತವಾದ ಮೇಲೆ ಕ್ಷಮೆಯಾಚಿಸುತ್ತಾರೆ. ಇವೆಲ್ಲಾ ಸಿಟ್ಟಿನ ಪರಿಣಾಮಗಳೇ.
ಆದರೆ ಸ್ವಲ್ಪವೂ ಕೋಪಗೊಳ್ಳದೇ ಜಗತ್ತಿನಲ್ಲಿ ವ್ಯವಹಾರ ಮಾಡುವುದು ಸಾಧ್ಯವೇ? ಖಂಡಿತ ಅಸಾಧ್ಯ. ಅದೊಮ್ಮೆ ಭಕ್ತನೊಬ್ಬ ಶ್ರೀರಾಮಕೃಷ್ಣ ಪರಮಹಂಸರನ್ನು ಹೀಗೆ ಪ್ರಶ್ನಿಸಿದನಂತೆ: ಗುರುಗಳೇ! ಸಮಾಜದಲ್ಲಿ ದುಷ್ಟರು ನಮಗೆ ಕೇಡು ಬಗೆಯಲು ಸಿದ್ಧವಾಗಿದ್ದರೂ ನಾವು ಕೈಕಟ್ಟಿ ಕುಳಿತಿರುವುದು ತರವೇ? ಎಂದು. ಆಗ ರಾಮಕೃಷ್ಣರು ನುಡಿದರಂತೆ: ಸಮಾಜದಲ್ಲಿ ನಾವು ಬದುಕಬೇಕಾದರೆ ಸ್ವಲ್ಪ ತಮೋಗುಣವನ್ನೂ ಬೆಳೆಸಿಕೊಳ್ಳಬೇಕು ಸಮಯಕ್ಕನುಗುಣವಾಗಿ ಅದನ್ನು ಬಳಸಬೇಕು ಎಂದು.
ಒಂದು ಕುಗ್ರಾಮ. ಗ್ರಾಮದ ಹೊರವಲ ಯದಲ್ಲಿ ಒಂದು ಹಾವು ವಾಸವಾಗಿತ್ತು. ಅದು ಗ್ರಾಮಕ್ಕೆ ಬಂದಾಗಲೆÇÉಾ ಊರಿನ ಮಕ್ಕಳೆÇÉಾ ಗುಂಪಾಗಿ ಅದರ ಹಿಂದೆ ಸಾಗುತ್ತಾ, ಕಲ್ಲಿನಿಂದ ಹೊಡೆದು ಅದನ್ನು ಹಿಂಸಿಸುತ್ತಿದ್ದರು. ಹಾವು ಮಾತ್ರ ಹೊಡೆತ ತಿಂದು ಗೂಡು ಸೇರುತ್ತಿತ್ತು. ಇದು ಹೀಗೆ ಮುಂದುವರೆದಿತ್ತು. ಅದೊಂದು ದಿನ ಹಾವನ್ನು ಹಿಂಸಿಸುವುದನ್ನು ಸಾಧುವೊಬ್ಬ ನೋಡಿದ. ಹಾವಿನ ಪರಿಸ್ಥಿಯನ್ನು ಕಂಡು ಮರುಗಿದ. ಅನಂತರ ಹಾವಿನ ಹತ್ತಿರ ಸಮೀಪಿಸಿ, “ನೋಡು! ನೀನು ಇಷ್ಟೊಂದು ಸಾಧು ಸ್ವಭಾವದವನಾದರೆ, ಇವರು ನಿನ್ನನ್ನು ಕೊಂದೇ ಬಿಡುತ್ತಾರೆ. ಹಾಗಾಗಿ ನಿನ್ನ ಆತ್ಮರಕ್ಷಣೆಗಾಗಿ ಸ್ವಲ್ಪ ಬುಸುಗುಡುವುದನ್ನು ಕಲಿಯಬೇಕು ಎಂದು ಬುದ್ಧಿ ಹೇಳಿದ. ಮರುದಿನ ಗ್ರಾಮಕ್ಕೆ ತೆರಳಿದಾಗ ಮತ್ತದೆ ಸನ್ನಿವೇಶ ಸಾಧುವಿನ ಮಾತಿನಂತೆ ಹಾವು ಒಮ್ಮೆ ಹೆಡೆ ಎತ್ತಿ ಬುಸುಗುಟ್ಟಿತು. ಗುಂಪಾಗಿ ಬಂದಿದ್ದ ಮಕ್ಕಳೆÇÉಾ ಅಲ್ಲಿಂದ ಓಟಕಿತ್ತರು. ಇಲ್ಲಿ ಹಾವು ಮುಯ್ಯಿಗೆ ಮುಯ್ಯಿ ಅಂತಾ ಯಾರನ್ನೂ ಕಚ್ಚಿ ಹಿಂಸಿಸಲಿಲ್ಲ. ಆತ್ಮರಕ್ಷಣೆಗಾಗಿ ಸ್ವಲ್ಪ ಬುಸುಗುಟ್ಟಿತಷ್ಟೇ!. ನಮ್ಮ ಕೋಪವೂ ಅಷ್ಟೇ ಅದು ಆತ್ಮರಕ್ಷಣೆಗಾಗಿರಲಿ. ಅದರಿಂದ ನಮಗಾಗಲೀ, ಇನ್ನೋಬ್ಬರಿಗಾಗಲೀ ತೊಂದರೆಯಾಗಕೂಡದ.
ಬದುಕಿನಲ್ಲಿ ತಾಳ್ಮೆ, ಶಾಂತಿ, ಸಮಾಧಾನಗಳು ಮೇಳೈಸಿ ದಾಗಲೇ ಬದುಕು ಸರಳವಾಗುತ್ತಾ ಹೋಗುತ್ತದೆ. ಹಾಗಾಗಿ ಕೋಪದ ತಾಪದಿಂದ ಹೊರ ಬರಬೇಕಾದರೆ ನಾವು ಯೋಗ ಮಾರ್ಗವನ್ನು ಅನುಸರಿಸಬೇಕು. ಯೋಗಾಸನ, ಧ್ಯಾನ, ಪ್ರಾಣಾಯಾಮಗಳು ನಿತ್ಯ ಆಚರಣೆ ಯಲ್ಲಿಟ್ಟುಕೊಳ್ಳುತ್ತಾ ಬದುಕನ್ನು ಹಸನಾಗಿಸೋಣ.

- ಗವಿಸಿದ್ದೇಶ್‌ ಕೆ. ಕಲ್ಗುಡಿ
ಶಿಕ್ಷಕ, ವರ್ತೂರು

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಮೃಗಗಳ ಜಗತ್ತು

14-uv-fusion

Women: ಕ್ಷಮಯಾ ಧರಿತ್ರಿ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.