Kannada Cinema; ‘ಯಾವೋ ಇವೆಲ್ಲಾ’- ಇದು ಹೊಸಬರ ಕನಸು
Team Udayavani, Sep 24, 2023, 12:58 PM IST
“ಯಾವೋ ಇವೆಲ್ಲಾ’ ಎಂಬ ಸಿನಿಮಾವೊಂದು ಆರಂಭವಾಗಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ.
ಒಂಬತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಅನುಭವ ಪಡೆದುಕೊಂಡಿರುವ ಹರೀಶ್. ಸಾ.ರಾ ಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಇವರ ಪ್ರಯತ್ನಕ್ಕೆ ಪತ್ನಿ ಸುಜಾತ.ಎಸ್ ರಾಶ್ರೀ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಚಿಕ್ಕಂದಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇವರ ಮನೆಗ ಕೊಡಬೇಕೆಂದು ನಿರ್ಧಾರ ಕೈಗೊಂಡಿರುತ್ತಾರೆ. ಮುಂದೆ ಶ್ರೀಮಂತರ ಮನೆಯಿಂದ ಪ್ರಸ್ತಾಪ ಬಂದರೆ ಎಲ್ಲವನ್ನು ಮರೆಯುತ್ತಾರೆ. ದೂರದ ಬೆಟ್ಟ ನುಣ್ಣಗೆ ಅನ್ನುವಂತೆ ಹತ್ತಿರದ ಸಂಬಂಧಗಳಿಗೆ ಮೊದಲ ಅದ್ಯತೆ ಕೊಡಿ. ಬೇರೆ ಆಯ್ಕೆ ಇಲ್ಲದೆ ಹೋದಲ್ಲಿ ಹೊಸ ಸಂಬಂಧವನ್ನು ನೋಡಿಕೊಳ್ಳಿ. ಜೊತೆಗಿದ್ದವರು ನಿಮಗೆ ನೆರವಾಗುತ್ತಾರೆ. ಸಣ್ಣತನವಿರುವ ಮನಷ್ಯನಿಂದ ಅವಘಡಗಳು ಬಂದರೆ, ನಾಯಕನಾದವನು ಅದೆಲ್ಲಾವನ್ನು ಹೇಗೆ ಬಗೆಹರಿಸುತ್ತಾನೆ ಎನ್ನುವ ಅಂಶಗಳೊಂದಿಗೆ ಕಥೆ ಸಾಗುತ್ತದೆಯಂತೆ.
ಕಿರುಚಿತ್ರಗಳಲ್ಲಿ ನಟಿಸಿರುವ ಶಿರಸಿ ಮೂಲದ ಶಿಲ್ಪನಾಯಕ್ ನಾಯಕಿ. ಉಳಿದಂತೆ ಜಗನ್ ಮೌನಿಕಾ ಪೂಜಾರಿ, ಕಾವ್ಯಭಾರಧ್ವಾಜ್, ಪಾಲಾಕ್ಷ, ಹನುಮಂತ ಮೂರ್ತಿ.ಕೆ, ಕೀರ್ತಿವೆಂಕಟೇಶ್ ಅಭಿನಯಿಸಿದ್ದಾರೆ. ಬೆಂಗಳೂರು, ಹೆಸರಘಟ್ಟ, ಕನಕಪುರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.