Ayodhya: ವರ್ಷಾಂತ್ಯಕ್ಕೆ ಅಯೋಧ್ಯಾ ವಿಮಾನ ನಿಲ್ದಾಣ ಲೋಕಾರ್ಪಣೆ
Team Udayavani, Sep 24, 2023, 10:06 PM IST
ನವದೆಹಲಿ: ಬಾಲ ಶ್ರೀರಾಮನ ಪಟ್ಟಾಭಿಷೇಕದ ಸಿದ್ಧತೆಗಳು ಭರದಿಂದ ಸಾಗುತ್ತಿರುವ ನಡುವೆಯೇ, ಪ್ರಭು ಶ್ರೀರಾಮನ ದರ್ಶನಕ್ಕೆ ದೇಶ-ವಿದೇಶಗಳಿಂದ ಆಗಮಿಸಲಿರುವ ಭಕ್ತಾದಿಗಳನ್ನು ಸ್ವಾಗತಿಸಲು ಅಯೋಧ್ಯೆ ಕೂಡ ಸಜ್ಜುಗೊಂಡಿದೆ. ಇದಕ್ಕೆ ಪೂರಕವಾಗಿ ಅಯೋಧ್ಯೆಯ ಮೊಟ್ಟ ಮೊದಲ ವಿಮಾನ ನಿಲ್ದಾಣವು ಇದೇ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಕುರಿತಾದ ಕಿರು ಮಾಹಿತಿ ಇದು..
ಮೊದಲ ನಿಲ್ದಾಣದ ವೈಶಿಷ್ಟ್ಯ?
– ಡಿಸೆಂಬರ್‌ನಲ್ಲಿ ಉದ್ಘಾಟನೆಗೊಳ್ಳಲಿರುವ ವಿಮಾನ ನಿಲ್ದಾಣವನ್ನು “ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಹೆಸರು
– 6,250 ಚದರ ಅಡಿ ವ್ಯಾಪ್ತಿಯ ಪ್ರದೇಶದಲ್ಲಿ ಟರ್ಮಿನಲ್ ಅಭಿವೃದ್ಧಿಪಡಿಸಿದ್ದು, 500 ಮಂದಿ ಪ್ರಯಾಣಿಕರನ್ನು ಹೊಂದುವ ಸಾಮರ್ಥ್ಯ
– 2,200 ಮೀಟರ್ ಉದ್ದದ ರನ್‌ವೇ, ಏಕಕಾಲದಲ್ಲಿ 4 ವಿಮಾನಗಳನ್ನು ಪಾರ್ಕ್ ಮಾಡುವಷ್ಟು ವಿಸ್ತೀರ್ಣವಾದ ಜಾಗ
– ಪ್ರಾಥಮಿಕ ಹಂತದಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್‌ಗಳಿಗೆ ಮಾತ್ರ ವಿಮಾನ ಪ್ರಯಾಣಕ್ಕೆ ಅನುವು
– ಜನವರಿಯಲ್ಲಿ ಮಂದಿರ ಉದ್ಘಾಟನೆ, ಹಿಂದೂ ಧಾರ್ಮಿಕ ಕ್ಷೇತ್ರ ಪ್ರವಾಸ ಸುಗಮಕ್ಕೆ ಪ್ರಮುಖ ದ್ವಾರವಾಗಿ ಪಾತ್ರ
ವಿಸ್ತರಣೆಗೆ ಚಿಂತನೆ
ಪ್ರಸಕ್ತ ಉದ್ಘಾಟನೆಗೊಳ್ಳಲಿರುವ ವಿಮಾನ ನಿಲ್ದಾಣವನ್ನು ಭವಿಷ್ಯದಲ್ಲಿ ಇನ್ನೂ 5 ಪಟ್ಟು ಹೆಚ್ಚು ವಿಸ್ತೀರ್ಣಗೊಳಿಸಲು ಸರ್ಕಾರ ಯೋಜಿಸಿದೆ. ಈಗಾಗಲೇ ವಿಮಾನ ನಿಲ್ದಾಣ ಅಭಿವೃದ್ಧಿಯ 2ನೇ ಹಂತದ ನಿರ್ಮಾಣಕ್ಕೆ ಪರಿಸರೀಯ ಅನುಮತಿಯನ್ನೂ ಪಡೆದುಕೊಳ್ಳಲಾಗಿದೆ.
2ನೇ ಹಂತ ಹೇಗಿರಲಿದೆ ?
* 30,000 ಚ.ಅ. ವ್ಯಾಪ್ತಿಯಲ್ಲಿ ಟರ್ಮಿನಲ್
* 3,000 ಪ್ರಯಾಣಿಕರನ್ನು ಹೊಂದಲು ಅನುವು
* 3,215 ಮೀಟರ್ ಉದ್ದದ ರನ್‌ವೇ
* 8 ವಿಮಾನಗಳ ಪಾರ್ಕಿಂಗ್ ಸಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.