Health: ಜೆರೋಡರ್ಮಾ ಪಿಗ್ಮೆಂಟೋಸಂ ಎಂಬ ಮಾರಣಾಂತಿಕ ಚರ್ಮ ರೋಗ

Team Udayavani, Sep 25, 2023, 12:13 AM IST

XEDERMA PIGMENDOMOUS

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೂರು ಹಳ್ಳಿಗಳಲ್ಲಿ ಜೆರೋಡರ್ಮಾ ಪಿಗ್ಮೆಂಟೋಸಂ ಎಂಬ ಚರ್ಮರೋಗಕ್ಕೆ 14 ಮಕ್ಕಳು ತುತ್ತಾಗಿದ್ದಾರೆ. ಹನೂರು ತಾಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ ಮತ್ತು ಶೆಟ್ಟಳ್ಳಿ ಗ್ರಾಮ ದಲ್ಲಿ ಮಕ್ಕಳು ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿರು ವುದು ಬೆಳಕಿಗೆ ಬಂದಿತ್ತು. ಈ ಕಾಯಿಲೆಗೆ ತುತ್ತಾಗಿರುವ ಮಕ್ಕಳಿಗೆ ಆರು ತಿಂಗಳ ಮಗು ವಾಗಿದ್ಧಾಗಲೇ ಈ ವಿಚಿತ್ರ ಚರ್ಮರೋಗ ಕಾಣಿಸಿಕೊಂಡಿದ್ದು ಬಳಿಕ ಮೈ ಚರ್ಮವೆಲ್ಲ ಚುಕ್ಕಿಗಳಾಗಿ ಪರಿವರ್ತನೆಯಾಗಿ, ವೃದ್ಧರ ಚರ್ಮದಂತೆ ಮಾರ್ಪಾಟಾಗಿ ದೃಷ್ಟಿ ದೋಷ, ಶ್ರವಣದೋಷ ಉಂಟಾಗಿದೆ. 18-20 ವರ್ಷ ತುಂಬುವುದರೊಳಗೆ ಕಾಯಿಲೆಗೆ ತುತ್ತಾ ದವರು ಮೃತರಾಗಿದ್ದಾರೆ.

ಜೆರೋಡರ್ಮಾ ಪಿಗ್ಮೆಂಟೋಸಂ ಎಂದು ಜೆನೆಟಿಕ್‌ ರಿಸರ್ಚ್‌ನಲ್ಲಿ ಕಾಯಿಲೆಯನ್ನು ಗುರುತಿ ಸಿದ್ದು, ಇಲ್ಲಿಯವರೆಗೆ 14 ಮಕ್ಕಳು ಈ ಕಾಯಿಲೆಗೆ ತುತ್ತಾಗಿದ್ಧಾರೆ. 8 ಮಕ್ಕಳು ಸಾವನ್ನಪ್ಪಿದ್ಧಾರೆ. ಸದ್ಯ ಆರು ಮಕ್ಕಳು ಈ ಕಾಯಿಲೆಯಿಂದ ಬಾಧಿತರಾಗಿ ದ್ದಾರೆ. ಮಕ್ಕಳು ಸಾವೀಗಿಡಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಆ ಪ್ರದೇಶದಲ್ಲಿ ಜೆನಿಟಿಕ್‌ ರಿಸರ್ಚ್‌ ನಡೆಸುವಂತೆ ಸೂಚಿಸಿದ್ದರು. ಅಲ್ಲದೇ ಆರೋಗ್ಯ ಇಲಾಖೆಯಿಂದ ತಜ್ಞರ ತಂಡ ಕಳುಹಿಸಿ ರೋಗಕ್ಕೆ ತುತ್ತಾದವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದರು.

ಒಂದು ವರ್ಷದ ಹಿಂದೆ ಈ ಕಾಯಿಲೆ ಪತ್ತೆಯಾ ಗಿತ್ತು. ಜಿಲ್ಲೆ ಹಾಗೂ ರಾಜ್ಯ ಮಟ್ಟದ ತಂಡಗಳು ಈ ಗ್ರಾಮಗಳಿಗೆ ತೆರಳಿ ಅಧ್ಯಯನ ನಡೆಸಿದಾಗ ಇದು ಜೆರೋಡರ್ಮಾ ಪಿಗ್ಮೆಂಟೋಸಂ ಎಂಬುದು ಪತ್ತೆ ಯಾಯಿತು. ಜಿಲ್ಲೆಯಲ್ಲಿ ಮಾತ್ರ ಈ ಕಾಯಿಲೆಯಿದೆ ಎಂದು ತಿಳಿಯಲಾಗಿತ್ತು. ಆದರೆ ಹೆಚ್ಚಿನ ಪರಿಶೀಲನೆ ಮಾಡಿದಾಗ ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲೂ ಈ ಕಾಯಿಲೆ ಬೆಳಕಿಗೆ ಬಂದಿದೆ.

ಕಾಯಿಲೆಗೆ ಕಾರಣ?: ಈ ಕಾಯಿಲೆ ಆನುವಂಶಿಕ ವಾಗಿ ಬರುವಂಥದ್ದು. ಆಟೋಜೋಮಲ್‌ ರಿಸೆಸಿವ್‌ ಜೆನೆಟಿಕ್‌ ಡಿಸಾರ್ಡರ್‌ ಇರುವ ತಂದೆ ಅಥವಾ ತಾಯಿಯ ಡಿಎನ್‌ಎನಲ್ಲಿ ಈ ಕಾಯಿಲೆ ಇರುವ ಜೀನ್‌ ಇರುತ್ತದೆ. ತಂದೆ ಮತ್ತು ತಾಯಿ ಇಬ್ಬರಿಗೂ ಈ ಕಾಯಿಲೆಯ ಜೀನ್‌ ಇದ್ದಾಗ ಅವರಿಗೆ ಹುಟ್ಟುವ ಮಕ್ಕಳಲ್ಲಿ ಶೇ. 25ರಷ್ಟು ಈ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ತಂದೆ ಅಥವಾ ತಾಯಿ ಒಬ್ಬರಿಗೆ ಇದ್ದಾಗ ಈ ಕಾಯಿಲೆ ಮಗುವಿಗೆ ಬರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಸ್‌. ಚಿದಂಬರ ತಿಳಿಸಿದರು.

ಮಗು ಹುಟ್ಟಿದ 2 – 3 ತಿಂಗಳಲ್ಲೇ ಈ ಕಾಯಿಲೆ ಇರುವುದು ಗೊತ್ತಾಗುತ್ತದೆ. ಮಗುವನ್ನು ಸೂರ್ಯನ ಕಿರಣಕ್ಕೆ ಬಿಟ್ಟಾಗ, ಪ್ರಖರ ಬೆಳಕಿನ ಲೈಟ್‌ ಬಿಟ್ಟಾಗ ಚರ್ಮದಲ್ಲಿ ಸನ್‌ ಬರ್ನ್ ಆಗುತ್ತದೆ. ಚರ್ಮ ಕಂದು ಬಣ್ಣಕ್ಕೆ ತಿರುಗುತ್ತದೆ. ಅಲ್ಲದೇ ಚರ್ಮ ಗಟ್ಟಿಯಾಗುವುದು, ರ್ಯಾಶಸ್‌ ಆಗುತ್ತದೆ. ಕಣ್ಣಿನ ತೊಂದರೆ ಕಾಣಿಸಿಕೊಳ್ಳುತ್ತದೆ. ಚರ್ಮದ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾಯಿಲೆಯನ್ನು ಗುಣಪಡಿಸುವ ಸಾಧ್ಯತೆ ಅತ್ಯಂತ ವಿರಳ. ಹಾಗಾಗಿ ಇಂಥ ಮಗುವನ್ನು ಸೂರ್ಯನ ಬೆಳಕಿಗೆ ಒಡ್ಡದೇ, ಇರುವಷ್ಟು ದಿನ ಸಲಹಿಕೊಂಡು ಹೋಗಬೇಕಾಗುತ್ತದೆ.

ಈ ಕಾಯಿಲೆ ತಡೆಗಟ್ಟಲು ಸಾಧ್ಯ: ಈ ಕಾಯಿ ಲೆಯನ್ನು ಮುಂದಿನ ಪೀಳಿಗೆಗೆ ಹೋಗದಂತೆ ತಡೆ ಗಟ್ಟುವುದು ಸಾಧ್ಯ. ಈ ಜೀನ್ಸ್‌ ಇರುವ ಗಂಡು- ಹೆಣ್ಣು ಮದುವೆಯಾಗಬಾರದು. ಅಲ್ಲದೇ ಯಾರೇ ಆಗಲೀ ಹತ್ತಿರದ ಸಂಬಂಧಗಳಲ್ಲಿ ವಿವಾಹವಾಗ ಬಾರದು. ಈ ಕಾಯಿಲೆ ಕಂಡು ಬಂದ ಪ್ರದೇ ಶಗಳಲ್ಲಿ ಮಗು ಗರ್ಭದಲ್ಲಿರುವ ಮೂರು ತಿಂಗಳ ಒಳಗೆ ಜೆನೆಟಿಕ್‌ ಪರೀಕ್ಷೆ ಮಾಡಬೇಕು.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.