Health: ಮಾತೃಶ್ರೀ- ಗರ್ಭಿಣಿಯರಿಗೆ 6 ಸಾವಿರ- ಅರ್ಜಿ ಸಲ್ಲಿಕೆ ಹೇಗೆ?
Team Udayavani, Sep 25, 2023, 12:22 AM IST
ರಾಷ್ಟ್ರೀಯ ಆರೋಗ್ಯ ಮಿಷನ್‌ನ ಮಾತೃ ಪುಷ್ಠಿವರ್ಧಿನಿ ಯೋಜನೆಯಡಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. 2018ರ ನ.1ರಂದು ರಾಜ್ಯ ಸರಕಾರ ಜಾರಿಗೊಳಿಸಿದ್ದು ಗರ್ಭಿಣಿಯರು- ಹಾಲುಣಿಸುವ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಗರ್ಭಿಣಿಯರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ಒಂದು ಹೊತ್ತಿನ ಪೌಷ್ಟಿಕ ಆಹಾರವನ್ನು ಒದಗಿಸುವುದಾಗಿದೇ ಈ ಯೋಜನೆಯ ಉದ್ದೇಶವಾಗಿದೆ. ಗರ್ಭಾವಸ್ಥೆಯಿಂದ ಆರಂಭವಾಗಿ ಮಗುವಿಗೆ 6 ತಿಂಗಳು ಆಗುವವರೆಗೂ 15 ತಿಂಗಳು ಯೋಜನೆಯನ್ನು ಪಡೆಯಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿದೆ
ನಿಮ್ಮ ಗ್ರಾಮದ ಹಾಗೂ ಸುತ್ತಮುತ್ತಲಿನ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಯೋಜನೆ ಸದ್ಬಳಕೆ ಪಡೆಯಬಹುದಾಗಿದೆ.
ಸೌಲಭ್ಯಗಳು ಏನೇನು?
ಗರ್ಭಾವಸ್ಥೆಯಿಂದ ಆರಂಭವಾಗಿ ಮಗುವಿಗೆ 6 ತಿಂಗಳು ಆಗುವವರೆಗೂ 15 ತಿಂಗಳೂ ಸೌಲಭ್ಯ ಪಡೆಯಬಹುದಾಗಿದೆ
6 ಕಂತುಗಳಲ್ಲಿ 6 ಸಾವಿರ ರೂ.ವನ್ನು ಬ್ಯಾಂಕ್ ಖಾತೆ ಸರಕಾರದಿಂದ ಜಮೆ ಮಾಡಲಾಗುತ್ತದೆ
ಬಿಪಿಎಲ್ ಕುಟುಂಬಗಳ ಎಲ್ಲಾ ಗರ್ಭಿಣಿಯರಿಗೆ ಈ ಯೋಡನೆಯಡಿ ನೆರವು ನೀಡಲಾಗುತ್ತದೆ.
ಅಕ್ಕಿ, ದಾಲ್, ಸಾಂಬರ್, ಹಸಿರು ತರಕಾರಿ, ದ್ವಿದಳ ಧಾನ್ಯ, ಮೊಟ್ಟೆ, ನೆಲಗಡಲೆ, ಬೆಲ್ಲದ ಚಿಕ್ಕಿಯನ್ನು ನೀಡಲಾಗುತ್ತದೆ
ಮೊಟ್ಟೆಯನ್ನು ತಿನ್ನದ ಮಹಿಳೆಯರಿಗೆ 2 ರೀತಿಯ ಮೊಳಕೆ ಕಾಳುಗಳನ್ನು ಈ ಯೋಜನೆಯಡಿ ಒದಗಿಸಲಾಗುತ್ತದೆ
ದಾಖಲೆ ಏನೇನು ಬೇಕು?
ತಾಯಿ ಕಾರ್ಡ್
ಆಧಾರ್ ಕಾರ್ಡ್
ಚುನಾವಣಾ ಚೀಟಿ
ಆಧಾರ್ ಲಿಂಕ್ ಆದ ಬ್ಯಾಂಕ್ ಖಾತೆ
ಪತಿಯ ಆಧಾರ್ ಮತ್ತು ಮತದಾರರ ಗುರುತಿನ ಚೀಟಿ
ನಿಬಂಧನೆ ಏನೇನು?
ಮೊದಲ 2 ಶಿಶುಗಳಿಗೆ ಮಾತ್ರ ಈ ಯೋಜನೆ ಅನ್ವಯ
3ನೇ ಮಗುವನ್ನು ಹೊಂದಿದರೆ ಈ ಯೋಜನೆ ಅನ್ವಯವಾಗುವುದಿಲ್ಲ
ಹರೀಶ್ ಹಾಡೋನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.