Politics: ಪಂಚರಾಜ್ಯ ಗೆಲುವು ನಿಶ್ಚಿತ: ರಾಹುಲ್ ಗಾಂಧಿ
Team Udayavani, Sep 25, 2023, 12:47 AM IST
ಹೊಸದಿಲ್ಲಿ: ಮುಂಬರುವ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ನಿಶ್ಚಿತವಾಗಿದ್ದು, ಕರ್ನಾಟಕ ಚುನಾ ವಣೆಯಲ್ಲಿ ಬಳಸಿದ ಕಾರ್ಯತಂತ್ರವನ್ನೇ ಇಲ್ಲೂ ಪಕ್ಷ ಅನುಸರಿಸಲಿದೆ. ಕಾಂಗ್ರೆಸ್‌ಗೆ ಕರ್ನಾಟಕ ಬಹುದೊಡ್ಡ ಪಾಠವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ನಾವು ನಿಶ್ಚಿತ ವಾಗಿ ಗೆಲುವು ಸಾಧಿಸುತ್ತೇವೆ, ತೆಲಂಗಾಣದಲ್ಲಿ ಬಹುತೇಕ ಗೆಲುವು ಸಾಧಿಸುವ ಸಾಧ್ಯತೆಗಳಿದ್ದು, ರಾಜಸ್ಥಾನದಲ್ಲಿ ಪೈಪೋಟಿ ಇದ್ದರೂ, ನಾವೇ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯವಾದದ್ದು ಹೇಗೆ ಎಂಬ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದು, ಕರ್ನಾಟಕದಿಂದ ನಾವು ಬಹು ದೊಡ್ಡ ಪಾಠ ಕಲಿತಿದ್ದೇವೆ. ನಮ್ಮ ಆಶಯಗಳನ್ನು, ಉದ್ದೇಶಗಳನ್ನು ಜನರಿಗೆ ತಲುಪದಂತೆ ತಡೆಯಲು ಬಿಜೆಪಿ ಪ್ರಯತ್ನಪಟ್ಟಿತ್ತು. ಆದರೆ, ನಾವು ಅವುಗಳನ್ನು ಮೆಟ್ಟಿ ಜನರನ್ನು ತಲುಪುವ ಮೂಲಕ ಗೆಲುವು ಸಾಧಿಸಿದ್ದೇವೆ ಎಂದಿದ್ದಾರೆ.
ಹಾದಿ ತಪ್ಪಿಸುತ್ತಿದೆ ಬಿಜೆಪಿ: ದೇಶದಲ್ಲಿ ಹಲವು ಪ್ರಮುಖ ಸಮಸ್ಯೆಗಳಿದೆ. ಇದೆಲ್ಲದರ ನಡುವೆ ಜಾತಿ ಜನಗಣತಿಯಂಥ ವಿಚಾರಗಳಿಂದ ನುಣುಚಿಕೊಳ್ಳಲು ಬಿಜೆಪಿ, ಬಿಧೂರಿ – ನಿಶಿಕಾಂತ್ ವಿವಾದ ಹುಟ್ಟುಹಾಕಿ ಜನರ ಹಾದಿ ತಪ್ಪಿಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.