C-295 Aircraft: ಸೇನೆಗೆ ಮತ್ತಷ್ಟು ಬಲ: ಭಾರತೀಯ ವಾಯುಪಡೆಗೆ ‘C-295’ ಸರಕು ವಿಮಾನ ಸೇರ್ಪಡೆ
Team Udayavani, Sep 25, 2023, 1:17 PM IST
ನವದೆಹಲಿ: ಭಾರತೀಯ ವಾಯುಪಡೆಯ ಬಲ ದ್ವಿಗುಣಗೊಂಡಿದೆ. ಇಂದು ವಾಯುಪಡೆಯ ಮೊದಲ C-295 ಸಾರಿಗೆ ವಿಮಾನವನ್ನು ಔಪಚಾರಿಕವಾಗಿ ವಾಯುಪಡೆಗೆ ಸೇರಿಸಲಾಯಿತು.
ಇಂದು ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಭಾರತ್ ಡ್ರೋನ್ ಶಕ್ತಿ -2023 ಪ್ರದರ್ಶನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದರು ಈ ವೇಳೆ ವಾಯುಪಡೆಗೆ ಸಾರಿಗೆ ವಿಮಾನವನ್ನು ಹಸ್ತಾಂತರಿಸಿದರು.
ಈ ವಿಮಾನವು ಸ್ಪೇನ್‌ನಿಂದ ಹೊರಟು ಸುಮಾರು 6,854 ಕಿಲೋಮೀಟರ್ ದೂರವನ್ನು ಕ್ರಮಿಸಿದ ನಂತರ ಸೆಪ್ಟೆಂಬರ್ 20 ರಂದು ವಡೋದರಾಕ್ಕೆ ಬಂದು ತಲುಪಿದೆ. ಇಂದು ಈ ವಿಮಾನವು ವಡೋದರಾದಿಂದ ಹೊರಟು ಹಿಂಡನ್ ವಾಯುನೆಲೆಯನ್ನು ತಲುಪಿತು.
#WATCH | Defence Minister Rajnath Singh formally inducts C-295 MW transport aircraft into the Indian Air Force at Hindon Airbase in Ghaziabad pic.twitter.com/hiIdEipFxY
— ANI (@ANI) September 25, 2023
ವಿಮಾನದ ವಿಶೇಷತೆ:
ಈ ವಿಮಾನದ ವಿಶೇಷವೆಂದರೆ ವಿಮಾನವು ಒಂದು ಕಿಲೋಮೀಟರ್‌ಗಿಂತ ಕಡಿಮೆ ರನ್‌ವೇಯಿಂದ ಟೇಕ್ ಆಫ್ ಮಾಡಬಹುದು. ಆದರೆ ಲ್ಯಾಂಡಿಂಗ್‌ಗೆ ಕೇವಲ 420 ಮೀಟರ್ ರನ್‌ವೇ ಅಗತ್ಯವಿದ್ದು. ಇದರರ್ಥ ಪ್ರಸ್ತುತ ವಾಯುಪಡೆಯು ಪ್ರವೇಶಿಸಲಾಗದ ಗುಡ್ಡಗಾಡು ಪ್ರದೇಶಗಳನ್ನು ಮತ್ತು ದ್ವೀಪಗಳಲ್ಲಿಯೂ ಸೈನ್ಯವನ್ನು ನೇರವಾಗಿ ಇಳಿಸಲು ಇದರಿಂದ ಸಾಧ್ಯವಾಗಲಿದೆ.
ಈ ವಿಮಾನ ಸ್ವಾವಲಂಬಿ ಭಾರತದ ಗುರುತಾಗಲಿದೆ. ಇಲ್ಲಿಯವರೆಗೆ ಈ ವಿಮಾನವನ್ನು ಏರ್‌ಬಸ್ ಕಂಪನಿ ತಯಾರಿಸುತ್ತಿತ್ತು ಆದರೆ ಈಗ ಇದನ್ನು ಭಾರತದಲ್ಲಿ ಮಾತ್ರ ತಯಾರಿಸಲಾಗುವುದು. ಎರಡು ವರ್ಷಗಳ ಹಿಂದೆ ಏರ್‌ಬಸ್ ಸ್ಪೇಸ್ ಮತ್ತು ಡಿಫೆನ್ಸ್ ಕಂಪನಿಯೊಂದಿಗೆ 56 ಸಿ – 295 ವಿಮಾನಗಳನ್ನು 21,935 ಕೋಟಿ ರೂ.ಗೆ ಖರೀದಿಸಲು ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ 16 ವಿಮಾನಗಳು ಸ್ಪೇನ್‌ನಿಂದ ಬರಬೇಕಿದ್ದರೆ, 17ನೇ ವಿಮಾನವನ್ನು ದೇಶದಲ್ಲೇ ತಯಾರಿಸಲಾಗುವುದು. ಈ ವಿಮಾನವನ್ನು ಭಾರತದಲ್ಲಿ ತಯಾರಿಸಲು ಏರ್‌ಬಸ್ ಮತ್ತು ಟಾಟಾ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಕಳೆದ ವರ್ಷ ಅಕ್ಟೋಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಡೋದರಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ವಡೋದರದಲ್ಲಿ ಏರ್‌ಬಸ್‌ನ ಸಹಭಾಗಿತ್ವದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಸಿದ್ಧಪಡಿಸಿದ ಸೆಟಪ್‌ನಲ್ಲಿ 40 ವಿಮಾನಗಳನ್ನು ತಯಾರಿಸಲಾಗುವುದು. ಆದರೆ ಏರ್‌ಬಸ್ ಸ್ಪೇನ್‌ನಲ್ಲಿ ತನ್ನ ಸ್ಥಾಪನೆಯಿಂದ ಭಾರತಕ್ಕೆ 16 ಸಿದ್ಧ ವಿಮಾನಗಳನ್ನು ಪೂರೈಸುತ್ತದೆ. 2026 ರ ವೇಳೆಗೆ ಎಲ್ಲಾ 56 ವಿಮಾನಗಳನ್ನು ವಾಯುಪಡೆಗೆ ತಲುಪಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯು ಭಾರತದ ವಾಯುಯಾನ ಉದ್ಯಮದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ ಎನ್ನಲಾಗಿದೆ.
ಇದನ್ನೂ ಓದಿ: Vizag Zoo: ವಿಶಾಖಪಟ್ಟಣಂ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿ ಮೃತ್ಯು… ಹೃದಯಾಘಾತವೇ ಕಾರಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.