Khalistan: ಭಾರತ ವಿಭಜನೆಯೇ ಖಲಿಸ್ತಾನಿ ಉಗ್ರನ ಅಜೆಂಡಾ
ದೇಶ ವಿಭಜಿಸಿ ಹಲವು ರಾಷ್ಟ್ರ ರಚಿಸುವ ಗುರಿ- ಉಗ್ರ ಪನ್ನುನ್ ಯೋಜನೆ ಬಹಿರಂಗಪಡಿಸಿದ ಎನ್‌ಐಎ
Team Udayavani, Sep 25, 2023, 7:52 PM IST
ನವದೆಹಲಿ/ಟೊರೊಂಟೋ: “ಭಾರತವನ್ನು ವಿಭಜನೆ ಮಾಡಿ ಹಲವು ದೇಶಗಳನ್ನು ರಚಿಸುವುದೇ ಖಲಿಸ್ತಾನಿ ಉಗ್ರ, ಸಿಖ್Õ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್‌ನ ಪ್ರಮುಖ ಅಜೆಂಡಾವಾಗಿದೆ’.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಆತನ ವಿರುದ್ಧ ಸಿದ್ಧಪಡಿಸಿರುವ ದಾಖಲೆಗಳೇ ಈ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿವೆ. ಪಂಜಾಬ್ ಸೇರಿದಂತೆ ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಆರೋಪದಲ್ಲಿ 2019ರಿಂದಲೇ ಎನ್‌ಐಎಗೆ ಬೇಕಾಗಿರುವ ಉಗ್ರ ಪನ್ನುನ್, ಹಲವು ಆಡಿಯೋ ಸಂದೇಶಗಳಲ್ಲಿ ಭಾರತದ ಏಕತೆ ಮತ್ತು ಸಾರ್ವಭೌಮತೆಗೆ ಸವಾಲು ಹಾಕಿದ್ದಾನೆ. ಈತ ದೇಶವನ್ನು ವಿಭಜನೆ ಮಾಡಿ, ಕಾಶ್ಮೀರದ ಜನರಿಗೆ ಪ್ರತ್ಯೇಕ ದೇಶವನ್ನು ರಚಿಸುವ, ಮುಸ್ಲಿಂ ರಾಷ್ಟ್ರವೊಂದನ್ನು ಸೃಷ್ಟಿಸುವ ಉದ್ದೇಶವನ್ನೂ ಹೊಂದಿದ್ದಾನೆ ಎಂದು ಎನ್‌ಐಎ ದಾಖಲೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಪ್ರತಿಭಟನೆಗೆ ಕರೆ:
ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಿದ್ದರೂ ಖಲಿಸ್ತಾನಿಗಳ ದುರಹಂಕಾರ ಮಾತ್ರ ಕೊನೆಗೊಂಡಿಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿರುವ ಕೆನಡಾದಲ್ಲಿರುವ ಖಲಿಸ್ತಾನಿ ಗುಂಪೊಂದು ಭಾರತದ ರಾಜತಾಂತ್ರಿಕ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವಂತೆ ತನ್ನ ಸದಸ್ಯರಿಗೆ ಕರೆ ನೀಡಿದೆ. ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್‌ಗಳ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಹೇಳಿಕೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಟೊರೊಂಟೋ, ಒಟ್ಟಾವಾ ಮತ್ತು ವ್ಯಾಂಕೂವರ್‌ಗಳಲ್ಲಿರುವ ಭಾರತೀಯ ಕಾನ್ಸುಲೇಟ್ ಮತ್ತು ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಿಖ್ ಫಾರ್ ಜಸ್ಟಿಸ್ ನಿರ್ದೇಶಕ ಜತೀಂದರ್ ಸಿಂಗ್ ಕರೆ ನೀಡಿದ್ದಾನೆ. ಜತೆಗೆ, ಭಾರತೀಯ ರಾಯಭಾರಿಯನ್ನು ವಜಾ ಮಾಡುವಂತೆ ಕೆನಡಾ ಸರ್ಕಾರದ ಮೇಲೂ ಒತ್ತಡ ತರುವುದಾಗಿ ಹೇಳಿದ್ದಾನೆ.
8 ಗುರುದ್ವಾರ ಖಲಿಸ್ತಾನಿಗಳ ಕೈಯ್ಯಲ್ಲಿ:
ಕೆನಡಾದಲ್ಲಿರುವ 250 ಗುರುದ್ವಾರಗಳ ಪೈಕಿ 8 ಗುರುದ್ವಾರಗಳು ಖಲಿಸ್ತಾನಿಗಳ ನಿಯಂತ್ರಣದಲ್ಲಿವೆ ಎಂದು ಭಾರತದ ಗುಪ್ತಚರ ಮೂಲಗಳು ತಿಳಿಸಿವೆ. ಅಲ್ಲದೇ, ಸರ್ರೆ, ಬ್ರಿಟಿಷ್ ಕೊಲಂಬಿಯಾ, ಬ್ರಾಂಪ್ಟನ್, ಅಬ್ಬೊàಟ್ಸ್‌ಫೋರ್ಡ್ ಮತ್ತು ಟೊರೊಂಟೋದ ಕೆಲವು ಪ್ರದೇಶಗಳಲ್ಲಿ ಖಲಿಸ್ತಾನಿ ಗುಂಪುಗಳು ಸಕ್ರಿಯವಾಗಿವೆ. ಸುಮಾರು 10 ಸಾವಿರ ಸಿಖVರು ಖಲಿಸ್ತಾನಿ ಸಿದ್ಧಾಂತವನ್ನು ಬೆಂಬಲಿಸಿದರೆ, ಈ ಪೈಕಿ 5 ಸಾವಿರ ಮಂದಿ ಕಟ್ಟರ್ ಬೆಂಬಲಿಗರಾಗಿದ್ದಾರೆ. ಉಳಿದವರು ಖಲಿಸ್ತಾನಿಗಳ ಪರ ಮೃದು ಧೋರಣೆ ಹೊಂದಿದ್ದು, ಕೆಲವರು ಒತ್ತಡಕ್ಕೆ ಮಣಿದು ಬೆಂಬಲ ನೀಡುತ್ತಿದ್ದಾರೆ ಎಂದೂ ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.