IAF ಸರಕು ಸಾಗಣೆ ವ್ಯವಸ್ಥೆಗೆ ಭೀಮ ಬಲ – ವಾಯುಪಡೆಯಲ್ಲಿ ಹೊಸ ಯುಗಾರಂಭ; C-295 ಸೇರ್ಪಡೆ
Team Udayavani, Sep 25, 2023, 8:44 PM IST
ಗಾಜಿಯಾಬಾದ್: ಭಾರತೀಯ ವಾಯುಪಡೆಯ ಸರಕು-ಸೇವಾ ವ್ಯವಸ್ಥೆಗೆ ಬಲನೀಡುವ ಸಿ-295 ವಿಮಾನವನ್ನು ಸೋಮವಾರ ಎಐಎಫ್ಗೆ ಸೇರ್ಪಡೆಗೊಳಿಸಲಾಗಿದ್ದು, ಈ ಮೂಲಕ ಸರಕು-ಸೇವಾ ವಲಯದಲ್ಲಿ ಹೊಸ ಶಕೆ ಆರಂಭವಾದಂತಾಗಿದೆ.
ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಐಎಎಫ್ ಮುಖ್ಯಸ್ಥರಾದ ವಿ.ಆರ್.ಚೌಧರಿ ಸಮ್ಮುಖದಲ್ಲಿ ಸಿ-295 ಸೇರ್ಪಡೆಗೊಳಿಸಲಾಗಿದ್ದು, 6 ದಶಕಗಳಿಂದ ಸೇವೆಯಲ್ಲಿರುವ ಆರ್ವೋ – 748 ವಿಮಾನಗಳಿಗೆ ಪರ್ಯಾಯವಾಗಿ ಈ ನೂತನ ವಿಮಾನಗಳನ್ನು ನಿಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ವರ್ಷಗಳ ಹಿಂದೆ ಸ್ಪೇನ್ ಮೂಲದ ಸಂಸ್ಥೆ ಏರ್‌ಬಸ್ ಜತೆಗೆ ಸಿ-295ನ ಖರೀದಿಗೆ ಸಂಬಂಧಿಸಿ ಭಾರತ 21,935 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದು, ಅದರ ಭಾಗವಾಗಿ ಸಿ-295ನ ಮೊದಲ ವಿಮಾನವನ್ನು ಸೆ.13ರಂದೇ ಹಸ್ತಾಂತರಿಸಲಾಗಿತ್ತು. ಸೆ.20ರಂದು ವಡೋದರಾಗೆ ಸಿ-295 ಬಂದಿಳಿದಿದ್ದು, ಇದೀಗ ಐಎಎಫ್ಗೆ ಸೇರ್ಪಡೆಗೊಂಡಿದೆ. ರಕ್ಷಣೆಯ ಸೇವಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ” ಸುಪೀರಿಯರ್ ಏರ್‌ಕ್ರಾಫ್ಟ್’ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.
ಸಿ-295 ವೈಶಿಷ್ಟ್ಯವೇನು ?
* ಏಕಕಾಲಕ್ಕೆ 71 ಟ್ರೂಪ್ಸ್ ಅಥವಾ 50 ಪ್ಯಾರಾಟ್ರೂಪರ್‌ಗಳನ್ನು ಸಾಗಿಸುವ ಸಾಮರ್ಥ್ಯ
* ಬೃಹತ್‌ವಿಮಾನಗಳು ತಲುಪಲಾಗದಂಥ ಸ್ಥಳದಲ್ಲೂ ಕಾರ್ಯಾಚರಿಸುವ ಛಾತಿ
* ಯುದ್ಧ ಸಂದರ್ಭದಲ್ಲಿ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಕ್ಷಿಪ್ರ ಕಾರ್ಯಕ್ಕೆ ಸಹಕಾರಿ
* ವಿಪತ್ತಿನ ಸಂದರ್ಭದಲ್ಲೂ ವಿಶೇಷ ಕಾರ್ಯಾಚರಣೆ, ಸಮುದ್ರ ಗಸ್ತಿಗೂ ಸೈ !
ಆತ್ಮನಿರ್ಭರತೆಗೆ ಸಹಕಾರಿ
ಒಪ್ಪಂದ ಪ್ರಕಾರ, ಏರ್‌ಬಸ್ ಕಂಪನಿಯು ಸಿ-295ನ ಮೊದಲ 16 ವಿಮಾನಗಳನ್ನು ತಯಾರಿಸಿ ಭಾರತಕ್ಕೆ ಹಸ್ತಾಂತರಿಸಲಿದೆ. ಬಳಿಕ ವಿಮಾನ ತಯಾರಿಕೆಯ ತಂತ್ರಜ್ಞಾನವನ್ನು ಭಾರತದ ಜತೆಗೆ ಏರ್‌ಬಸ್ ವಿನಿಮಯ ಮಾಡಿಕೊಳ್ಳಲಿದೆ. ನಂತರ 40 ವಿಮಾನಗಳನ್ನು ಭಾರತದಲ್ಲೇ ದೇಶಿಯ ಸಂಸ್ಥೆ ಟಾಟಾ ಅಡ್ವಾನ್ಸ್$x ಸಿಸ್ಟಮ್ (ಟಿಎಎಸ್‌ಎಲ್) ಉತ್ಪಾದಿಸಲಿದೆ. ವಿಮಾನದ ಉತ್ಪಾದನೆ ಮತ್ತು ನಿರ್ವಹಣೆ ಎರಡೂ ಖಾಸಗಿ ಸಂಸ್ಥೆಯದ್ದೇ ಆಗಿರುವುದರಿಂದ ದೇಶೀಯ ಸಂಸ್ಥೆಗಳಿಗೂ ಇದು ಮಹತ್ತರ ಅವಕಾಶಗಳನ್ನು ಸೃಷ್ಟಿಸಿಕೊಡಲಿದೆ.
ಉತ್ಪಾದನೆ ಎಲ್ಲಿ?
ಈಗಾಗಲೇ ಭಾರತದಲ್ಲಿ ಸಿ-295 ವಿಮಾನದ ಬಿಡಿ ಭಾಗಗಳನ್ನು ಹೈದರಾಬಾದ್‌ನಲ್ಲಿ ಉತ್ಪಾದಿಸಲಾಗುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಗುಜರಾತ್‌ನ ವಡೋದರದಲ್ಲಿ ವಿಮಾನ ಬಿಡಿಭಾಗಗಳ ಜೋಡಣೆ ಘಟಕ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ್ದರು. 2024ರ ನವೆಂಬರ್‌ನಲ್ಲಿ ಈ ಘಟಕ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಆ ಬಳಿಕ ಹೈದರಾಬಾದ್‌ನಲ್ಲಿ ಉತ್ಪಾದನೆಯಾದ ಬಿಡಿ ಭಾಗಗಳ ಜೋಡಣೆ ವಡೋದರಾದಲ್ಲಿ ನಡೆಯಲಿದೆ.
ಸಿ-295 ಭಾರತೀಯ ವಾಯುಪಡೆಗೆ ನಿರ್ಣಾಯಕ ಬದಲಾವಣೆಗಳ ಪೈಕಿ ಒಂದಾಗಿದ್ದು, ನೂತನ ಸೇರ್ಪಡೆಯು ಐಎಎಫ್ನ ಏರ್‌ಲಿಫ್ಟ್ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಮುಂಬರುವ ದಿನಗಳಲ್ಲಿ ಯುದ್ಧತಂತ್ರವನ್ನು ಮೇಲ್ದರ್ಜೆಗೇರಿಸಲು ಇದು ಸಹಕಾರಿಯಾಗಲಿದೆ.
– ಮಾ. ಆರ್‌ಕೆಎಸ್ ಬಧೌರಿಯಾ, ಐಎಎಫ್ ನಿವೃತ್ತ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.