Mudalagi: ಸಹಕಾರಿಗಳ ಪ್ರಗತಿಗೆ ವಿಶ್ವಾಸ-ನಂಬಿಕೆ ಮುಖ್ಯ: ಸಂಸದೆ ಮಂಗಲಾ ಅಂಗಡಿ
Team Udayavani, Sep 26, 2023, 1:03 PM IST
ಮೂಡಲಗಿ: ಪರಸ್ಪರ ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ ಇದ್ದರೆ ಸಹಕಾರ ಸಂಸ್ಥೆಗಳು ಜನರ ಹೃದಯದಲ್ಲಿ ಶಾಶ್ವತವಾಗಿ
ಉಳಿಯುತ್ತವೆ ಮತ್ತು ಪ್ರಗತಿಯಾಗುತ್ತವೆ ಎಂದು ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಹೇಳಿದರು.
ಇಲ್ಲಿಯ ಬಸವರಂಗ ಮಂಟಪದಲ್ಲಿ ಸೋಮವಾರ ಜರುಗಿದ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಸಂಭ್ರಮ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಹಕಾರ ಸಂಘ-ಸಂಸ್ಥೆಗಳ ಬೆಳವಣಿಗೆಯಿಂದ
ಜನರಲ್ಲಿ ಸಂಘಟನೆ-ಸಮಾನತೆ ಬೆಳೆದಿದೆ. ಸಹಕಾರ ಸಂಘಗಳಿಂದ ಜನರು, ಅದರಲ್ಲೂ ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ
ಸದೃಢರಾಗಿದ್ದಾರೆ ಎಂದರು.
ಮೂಡಲಗಿಯ ಬಸವೇಶ್ವರ ಸೊಸೈಟಿ ಕೇವಲ ಎರಡೂವರೆ ದಶಕದಲ್ಲಿ 15 ಶಾಖೆಗಳನ್ನು ಆರಂಭಿಸಿ ಹೆಮ್ಮರವಾಗಿ ಬೆಳೆದಿದೆ
ಎಂದು ಶ್ಲಾಘಿಸಿದರು. ಅಂಕಲಗಿ-ಕುಂದರಗಿಯ ಅಡವಿಸಿದ್ದೇಶ್ವರ ಸಂಸ್ಥಾನಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಹಕಾರಿ ಪತ್ತಿನ ಸಂಸ್ಥೆಗಳನ್ನು ಉಳಿಸಿ ಬೆಳೆಸುವಲ್ಲಿ ಗ್ರಾಹಕರ ಪಾತ್ರ ಮುಖ್ಯವಾಗಿದೆ ಎಂದರು.
ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಸಾಲ ಸದುಪಯೋಗ ಮಾಡಿಕೊಂಡು ತಾವು
ಬೆಳೆಯುವುದರೊಂದಿಗೆ ಪತ್ತಿನ ಸಂಸ್ಥೆಗಳನ್ನು ಬೆಳೆಸಬೇಕು ಎಂದರು. ಸೊಸೈಟಿ ಅಧ್ಯಕ್ಷ ಬಸವರಾಜ ತೇಲಿ, ಸಂಸ್ಥೆಯನ್ನು ಪ್ರಗತಿಯತ್ತ ಸಾಗಿಸುವಲ್ಲಿ ಸಿಬ್ಬಂದಿ, ಗ್ರಾಹಕರ ಸಹಕಾರವನ್ನು ಸ್ಮರಿಸಿದರು.
ಅರಭಾಂವಿ ಮಠದ ಜಗದ್ಗುರು ದುರದುಂಡೇಶ್ವರ ಸಿದ್ಧಸಂಸ್ಥಾನ ಪುಣ್ಯಾರಣ್ಯದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ, ಬೈಲಹೊಂಗಲದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಶ್ಯಾಯಿನ್ ಅಖ್ತರ, ಈಶ್ವರ ಕತ್ತಿ, ಬಿ.ಬಿ ಹಂದಿಗುಂದ, ಆರ್ .ಪಿ ಸೋನವಾಲ್ಕರ, ಮಲ್ಲಿಕಾರ್ಜುನ ಕಬ್ಬೂರ,
ಟಿ.ಪಿ ಮುನ್ನೂಳಿ, ಬಿ.ಡಿ ಪಾಟೀಲ, ತಮ್ಮಣ್ಣ ಕೆಂಚರಡ್ಡಿ, ಪಿಎಸ್‌ಐ ಎಚ್.ವೈ ಬಾಲದಂಡಿ, ಜಿ.ಕೆ ಗೋಖಲೆ, ಸೊಸೈಟಿ ಉಪಾಧ್ಯಕ್ಷ ಗಿರೀಶ ಢವಳೇಶ್ವರ, ಪ್ರಧಾನ ಕಚೇರಿ ಹಾಗೂ ಶಾಖೆಗಳ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬೆಳ್ಳಿ ಸಂಭ್ರಮದ ಸ್ಮರಣ ಸಂಚಿಕೆಯನ್ನು ಪೂಜ್ಯರು, ಸಂಸದೆ ಮಂಗಲಾ ಅಂಗಡಿ ಹಾಗೂ ಗಣ್ಯರು
ಬಿಡುಗಡೆಗೊಳಿಸಿದರು. ಶ್ರೀಗಳನ್ನು, ಅತಿಥಿಗಳನ್ನು ಮತ್ತು ಪ್ರಧಾನ ಕಚೇರಿ ಹಾಗೂ ಎಲ್ಲ ಶಾಖೆಗಳ ಸಲಹಾ ಸಮಿತಿ ಸದಸ್ಯರನ್ನು ಸತ್ಕರಿಸಲಾಯಿತು. ಹರ್ಲಾಪೂರದ ಯುವಜನ ಸಾಂಸ್ಕೃತಿಕ ಕಲಾ ತಂಡದ ಶಂಭು ಹಿರೇಮಠ ಅವರಿಂದ ಜಾನಪದ ಸಂಭ್ರಮ, ಡಾ| ಶಮೀತಾ ಮಲ್ನಾಡ ತಂಡದಿಂದ ಸಂಗೀತ ರಸಸಂಜೆ ಜರುಗಿತು.
ಪ್ರಧಾನ ಕಾರ್ಯದರ್ಶಿ ಬಸವರಾಜ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಸೋಮಶೇಖರ ಹಿರೇಮಠ, ವೆಂಕಟೇಶ
ಜಂಬಗಿ ನಿರೂಪಿಸಿದರು. ನಿರ್ದೇಶಕ ಚನ್ನಬಸು ಬಡ್ಡಿ ಸ್ವಾಗತಿಸಿದರು. ಉಪಾಧ್ಯಕ್ಷ ಗಿರೀಶ ಢವಳೇಶ್ವರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
Belagavi: ಆಟೋ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ
Belagavi: ಅಕ್ರಮ ಆಸ್ತಿ ಸಂಪಾದನೆ ಆರೋಪ… ಬೆಳಗಾವಿ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.