World Tourism Day:ಪ್ರಕೃತಿ ಸೃಷ್ಟಿಸಿದ ಸ್ವರ್ಗ, ಚಾರಣ ಪ್ರಿಯರ ನೆಚ್ಚಿನ ತಾಣ “ಕೊಡಚಾದ್ರಿ”

ಚಾರಣವಾದರೆ ಬೆಳಗ್ಗೆ ಆರರಿಂದ ಸಂಜೆ ನಾಲ್ಕರವರೆಗೆ ಅವಕಾಶವಿರುತ್ತದೆ

Team Udayavani, Sep 27, 2023, 1:05 PM IST

World Tourism Day:ಪ್ರಕೃತಿ ಸೃಷ್ಟಿಸಿದ ಸ್ವರ್ಗ, ಚಾರಣ ಪ್ರಿಯರ ನೆಚ್ಚಿನ ತಾಣ “ಕೊಡಚಾದ್ರಿ”

ಆಹಾ! ಕೊಡಚಾದ್ರಿ , ಇದು ಪ್ರಕೃತಿಯು ಸೃಷ್ಟಿಸಿದ ಸ್ವರ್ಗ. ಇದೊಂದು ಪಶ್ಚಿಮ ಘಟ್ಟದ ಚಾರಣ ಸ್ನೇಹಿ ಬೆಟ್ಟವಾಗಿದ್ದು, ಮಲೆನಾಡಿನ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದೆ. ಇದೊಂದು ಸುಂದರವಾದ ಪ್ರವಾಸಿ ತಾಣವಾಗಿದ್ದು ಇದನ್ನು ಕಣ್ತುಂಬಿಸಿಕೊಳ್ಳಲು ದೇಶ- ವಿದೇಶದಿಂದ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಕ್ಕೆ (ಟ್ರಕ್ಕಿಂಗ್) ಹೇಳಿ ಮಾಡಿಸಿದ ಜಾಗ.

ಕೊಡಚಾದ್ರಿಗೆ ಹಿಂದಿನ ಕಾಲದಿಂದಲೂ ಜನರು ಪ್ರವಾಸಕ್ಕೆ ಹೋಗುತ್ತಿದ್ದರು. ಕ್ರಿಸ್ತಶಕ 8ನೇ ಶತಮಾನದಲ್ಲಿ ಶಂಕರಾಚಾರ್ಯರು ಭೇಟಿ ನೀಡಿದ್ದರು ಎಂಬ ಪ್ರತೀತಿಯಿದೆ. ಇಲ್ಲಿ ಇದ್ದ ಮೂಲ ಮೂಕಾಂಬಿಕೆಯನ್ನು ಕೊಲ್ಲೂರಿನಲ್ಲಿ ಪ್ರತಿಷ್ಠೆ ಮಾಡಿದ್ದಾರೆ ಎಂದು ಕೊಲ್ಲೂರಿನ ಸ್ಥಳಪುರಾಣ ಹೇಳುತ್ತದೆ. ಈ ದೇವಾಲಯದ ಬಳಿ ಇರುವ ಸುಮಾರು 40 ಅಡಿ ಎತ್ತರದ ಕಬ್ಬಿಣದ ಕಂಬವು ಮೂಕಾಸುರನನ್ನು ಸಂಹಾರ ಮಾಡಲು ದೇವಿ ಉಪಯೋಗಿಸಿದ ತ್ರಿಶೂಲ ಎಂಬುದು ಸ್ಥಳೀಯರ ಅಭಿಪ್ರಾಯ. ಈ ಬೆಟ್ಟದ ಮೇಲೆ ಸರ್ವಜ್ಞ ಪೀಠ ಎಂಬ ಒಂದು ಸಣ್ಣ ದೇವಾಲಯವಿದೆ. ಸರ್ವಜ್ಞ ಪೀಠದಿಂದ ಮುಂದಕ್ಕೆ ಕಡಿದಾದ ದಾರಿಯನ್ನು ಇಳಿದರೆ ಚಿತ್ರಮೂಲವೆಂಬ ಸ್ಥಳವಿದೆ. ಈ ಜಾಗವು ನಾನಾ ಜಾತಿಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ.

ಈ ಬೆಟ್ಟವನ್ನು ತಲುಪಲು ತೀರಾ ಕಡಿದಾದ ರಸ್ತೆ ಇದ್ದು ಕೊಲ್ಲೂರು, ನಿಟ್ಟೂರು, ಸಂಪ್ಪೆಕಟ್ಟೆ, ಕಟ್ಟಿನ ಹೊಳೆಯ, ತನಕ ಟಾರ್ ರಸ್ತೆಗಳಿದ್ದು ನಂತರ ಕಡಿದಾದ ರಸ್ತೆ ಇದ್ದು ಜೀಪ್ ಗಳ ವ್ಯವಸ್ಥೆ ಇದೆ. ಇಲ್ಲಿ ಚಾರಣ ಎಂದು ನಡೆದು ಸಾಗುವ ಅನುಭವ ಒಂದಾದರೆ, ಜೀಪಿ ನಲ್ಲಿ ಸಾಗುವ ಅನುಭವ ಮತ್ತೊಂದು ಬಗೆ. ಆ ರಸ್ತೆಯಲ್ಲಿ ವಾಲಾಡುತ್ತ ಈಗ ಬಿದ್ದೆ, ಇನ್ನೊಂದು ಕ್ಷಣಕ್ಕೆ ಬಿದ್ದೆ ಎನ್ನುವಂತಹ ಜೀಪ್ ಪ್ರಯಾಣ ಕನಸಲ್ಲೂ ಬಿಟ್ಟುಬಿಡದಂತೆ ಕಾಡುತ್ತದೆ. ಆದರೆ ಜೀಪ್ ಚಾಲಕರಿಗೆ ಇದು ಬಲು ಸಲೀಸಾದ ಕೆಲಸ. ದಿನಕ್ಕೆ ಜೀಪ್ ಚಾಲಕರು ಎರಡರಿಂದ ಮೂರು ಟ್ರಿಪ್ ಹೋಗುತ್ತಾರೆ. ಹಲವರು ಜೀಪ್ ಚಾಲಕರ ಜೀವನಕ್ಕೆ ಇದು ಆಧಾರವಾಗಿದೆ. ಕಾಲುದಾರಿಯ ಮೂಲಕ ಚಾರಣದ ಅನುಭವ ಪಡೆಯಬಹುದು.

ಸ್ಥಳೀಯ ಗೈಡುಗಳು ಮಾರ್ಗದರ್ಶನ ಕೂಡ ನೀಡುತ್ತಾರೆ. ಚಾರಣ ಮಾಡುವುದಾದರೆ ಆದಷ್ಟು ಗುಂಪಿನಲ್ಲಿ ಹೋಗುವುದು ಉತ್ತಮ. ಜೀಪಿನಲ್ಲಿ ಪ್ರಯಾಣ ಮಾಡಿದರೆ ಕೊಡಚಾದ್ರಿಯ ಸೊಬಗನ್ನು ವೀಕ್ಷಿಸಲು ಎರಡು ಗಂಟೆ ಅವಕಾಶವಿರುತ್ತದೆ. ಚಾರಣವಾದರೆ ಬೆಳಗ್ಗೆ ಆರರಿಂದ ಸಂಜೆ ನಾಲ್ಕರವರೆಗೆ ಅವಕಾಶವಿರುತ್ತದೆ. ಕೊಡಚಾದ್ರಿಯ ಸೂರ್ಯಾಸ್ತ ಅಪರೂಪವಾದ ದೃಶ್ಯವಾಗಿದ್ದು, ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತದೆ. ವಿಶಾಲವಾದ ಆಗಸದಲ್ಲಿ ಸೂರ್ಯನು ಸಮುದ್ರದೊಳಗೆ  ಜಾರಿ ಕಣ್ಮರೆಯಾದಂತೆ ಭಾಸವಾಗುತ್ತದೆ. ಸರ್ವಜ್ಞ ಪೀಠವು ಸೂರ್ಯಾಸ್ತವನ್ನು ವೀಕ್ಷಿಸುವ ವಿಹಂಗಮ ಸ್ಥಳವಾಗಿದೆ. ಕೊಡಚಾದ್ರಿಯಾ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಪ್ರವಾಸಿಗರಿಗೆ ಉಳಿಯಲು ಪ್ರವಾಸಿ ಮಂದಿರಗಳು ಲಭ್ಯವಿದೆ.

ಕೊಡಚಾದ್ರಿಗೆ ಸಾಗುವ ದಾರಿಯು  ನರಕ ಎನಿಸಿದರು, ಅಲ್ಲಿನ ಸೌಂದರ್ಯ ಭೂಮಿಯ ಮೇಲಿನ ಸ್ವರ್ಗದಂತೆ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ತಂಪಾದ ಗಾಳಿ, ಪ್ರಕೃತಿ ಸೌಂದರ್ಯ, ನಮ್ಮ ಮನಸ್ಸಿನಲ್ಲಿರುವ ಚಿಂತೆಗಳನ್ನು ಹೊರಹಾಕಿ ಮನಸ್ಸಿಗೆ ಹಿತವನ್ನು ನೀಡುತ್ತದೆ. ಇಲ್ಲಿಗೆ ಒಂದು ಸಲ ಭೇಟಿ ನೀಡಿದರೆ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ನಮ್ಮ ತನು-ಮನ ಅಲ್ಲಿಯೇ ಮನೆಮಾಡುತ್ತದೆ.

ಮೇದಿನಿ.ಎಸ್.ಭಟ್, ಎಂ.ಜಿ.ಎಂ ಕಾಲೇಜು ಉಡುಪಿ

ಟಾಪ್ ನ್ಯೂಸ್

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

virat-sachin-Dhoni

Brand Value: ಬಾಲಿವುಡ್‌ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್‌ ಮೌಲ್ಯ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು ?

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.