World Tourism Day 2023: ಕಣ್ಮನ ಸೆಳೆಯುವ ಅದ್ಭುತ ತಾಣ “ ಈ ರಾಣಿಪುರಂ ಗಿರಿಧಾಮ”
ಟ್ರಕ್ಕಿಂಗ್ ಮೂಲಕ ನಾವು ಭೂದೃಶ್ಯ ಮತ್ತು ಹಸಿರು ಕಣಿವೆಗಳ ವಿಶಾಲವಾದ ನೋಟವನ್ನು ನೋಡಬಹುದಾಗಿದೆ
Team Udayavani, Sep 27, 2023, 2:00 PM IST
ಇತ್ತೀಚಿನ ದಿನಗಳಲ್ಲಿ ಭಾನುವಾರ ಬಂದರೆ ಸಾಕು ಮನೆ ಬಿಟ್ಟು ಹೊರಗಡೆ ಸುತ್ತಾಟ ಮಾಡುವವರೆ ಹೆಚ್ಚು , ಹೌದು ಪ್ರಸ್ತುತ ದಿನಗಳಲ್ಲಿ ಕೆಲಸದ ಒತ್ತಡದಿಂದ ಸ್ವಲ್ಪ ರಿಲೀಫ್ ಪಡೆಯಲು ಪ್ರಕೃತಿಯ ಜೊತೆ ಒಡನಾಟ, ಸುತ್ತಾಟ ಅವಶ್ಯಕ. ನಮಗೂ ಕೂಡಾ ಹೆಚ್ಚಾಗಿ ಟ್ರಿಪ್ ಹೋಗುವ ಅಭ್ಯಾಸ ಅದರಲ್ಲೂ ಸ್ನೇಹಿತರ ಜೊತೆ ಹೋಗುವುದು ಅಂದ್ರೆ ಅದರ ಮಜಾನೇ ಬೇರೆ ಅಲ್ವಾ, ಕಳೆದ ಆಗಸ್ಟ್ 15 ರಂದು ನಾವು ನಮ್ಮ ಸ್ನೇಹಿತರು ಸೇರಿ ದಕ್ಷಿಣ ಕನ್ನಡ ಬಂಟ್ವಾಳದಿಂದ ಹೋದದ್ದು ರಾಣಿಪುರಂ ಗಿರಿಧಾಮಕ್ಕೆ , ಇದೊಂದು ಅದ್ಭುತ ಪಯಣ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮ ರಾಣಿಪುರಂ, ತನ್ನ ತಂಪಾದ ಹವಾಮಾನ ಮತ್ತು ಆಳವಾದ ಕಾಡಿನ ಮೂಲಕ ಟ್ರೆಕ್ಕಿಂಗ್ ಗೆ ಪ್ರಮುಖವಾಗಿ ಹೆಸರುವಾಸಿಯಾಗಿದೆ. ಕೇರಳದ ಊಟಿ ಎಂದೂ ಕರೆಯಲ್ಪಡುವ ಈ ಗಿರಿಧಾಮವು ಸಮುದ್ರ ಮಟ್ಟದಿಂದ 750 ಮೀ (2,460 ಅಡಿ) ಎತ್ತರದಲ್ಲಿದೆ. ಮೊದಲು “ಮಾಡತುಮಲ” ಎಂದು ಕರೆಯಲಾಗುತ್ತಿದ್ದ ರಾಣಿಪುರಂ, ಬೆಟ್ಟಗಳ ತಳದಲ್ಲಿರುವ ಕಣಿವೆಯಲ್ಲಿರುವ ಅತಿಥಿ ಗೃಹಗಳಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಬೆಟ್ಟಕ್ಕೆ ಹೋಗಲು ಎರಡು ಮಾರ್ಗಗಳಿವೆ.
ಈ ಪ್ರದೇಶವು ದಟ್ಟ ಅರಣ್ಯ ಸಸ್ಯ ಮತ್ತು ಹಸಿರು ಹುಲ್ಲುಗಾವಲುಗಳನ್ನು ಹೊಂದಿದೆ. ಟ್ರಕ್ಕಿಂಗ್ ಮೂಲಕ ನಾವು ಭೂದೃಶ್ಯ ಮತ್ತು ಹಸಿರು ಕಣಿವೆಗಳ ವಿಶಾಲವಾದ ನೋಟವನ್ನು ನೋಡಬಹುದಾಗಿದೆ. ಟ್ರೆಕ್ಕಿಂಗ್ ಹಾದಿಯಲ್ಲಿ ಬಂಡೆಗಳು ಜಾರುತ್ತವೆ ಹಾಗಾಗಿ ಚಾರಣ ಹೋಗುವಾಗ ಎಚ್ಚರದಿಂದಿರಬೇಕು. ಹಾಗೆ ಇಲ್ಲಿ ರಕ್ತ ಹೀರುವ ಲೀಚ್(ಇಂಬಳ) ಹುಳ ತುಂಬಾ ಸಾಮಾನ್ಯವಾಗಿರುತ್ತದೆ.
ರಾಣಿಪುರಂನ ಟ್ರೆಕ್ ಮಾರ್ಗವು ಬಹಳ ಸುಂದರವಾಗಿದೆ ಮತ್ತು ಪ್ರಕೃತಿ ಛಾಯಾಗ್ರಾಹಕರಿಗೆ ಚಿತ್ರವನ್ನು ಸೆರೆಹಿಡಿಯಲು ಇದೊಂದು ತುಂಬಾ ಉತ್ತಮ ಸ್ಥಳವಾಗಿದೆ. ಪ್ರಾಣಿ ಪಕ್ಷಿಗಳಿಂದ ಕೂಡಿರುವ ಈ ಅದ್ಭುತ ತಾಣವು ಖಂಡಿತವಾಗಿಯೂ ಒಂದು ಪ್ರಶಾಂತ ಅನುಭವವನ್ನು ಪ್ರವಾಸಿಗರಿಗೆ ನೀಡುವುದರಲ್ಲಿ ಸಂಶಯವಿಲ್ಲ.
ಮಧ್ಯಾಹ್ನದ ತೀವ್ರ ಬಿಸಿಲಿನಿಂದ ತಪ್ಪಿಸಲು ಬೆಳಿಗ್ಗಿನ ಹೊತ್ತಿನಲ್ಲಿ ಪ್ರಯಾಣ ಮಾಡುವುದು ಉತ್ತಮ. ಅಲ್ಲಿ ನಿಮಗೆ ಯಾವುದೇ ತಿಂಡಿ ತಿನಿಸು ಸಿಗುವುದಿಲ್ಲ, ಹಾಗಾಗಿ ಹೋಗುವಾಗಲೇ ಉಪಹಾರಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಹೋಗುವುದು ಉತ್ತಮ. ನಮಗೂ ನಮ್ಮ ಸ್ನೇಹಿತರಿಗೂ ಉತ್ತಮ ಅನುಭವ ನೀಡಿದ ಟ್ರೆಕ್ಕಿಂಗ್ ಇದಾಗಿದ್ದು, ನಮ್ಮ ನೆನಪಿನ ಬುತ್ತಿಯಲ್ಲಿ ರಾಣಿಪುರಂನ ನೆನಪು ಎಂದಿಗೂ ಶಾಶ್ವತ.
* ಶೈಲಶ್ರೀ ಬಾಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.