Mumbai: 26/11ಕ್ಕೂ ಮುನ್ನವೇ ರಾಣಾ ಮುಂಬೈನಲ್ಲಿ ವಾಸ್ತವ್ಯ
Team Udayavani, Sep 26, 2023, 9:10 PM IST
ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ 2008ರ ನವೆಂಬರ್ನಲ್ಲಿ ನಡೆಸಲಾಗಿದ್ದ ಉಗ್ರರ ದಾಳಿ ನಡೆಯುವುದಕ್ಕೆ ಎರಡು ದಿನಗಳ ಮೊದಲೇ ಲಷ್ಕರ್ ಉಗ್ರ ತಹವ್ವುರ್ ರಾಣಾ ಇಲ್ಲಿನ ಹೋಟೆಲ್ನಲ್ಲಿ ತಂಗಿದ್ದ. ಉಪನಗರ ಪೊವೈನಲ್ಲಿ ನ.21ರವರೆಗೆ ವಾಸ್ತವ್ಯ ಹೂಡಿದ್ದ ಎಂದು ಸ್ಥಳೀಯ ಕೋರ್ಟ್ಗೆ ಪೊಲೀಸರು ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಒಟ್ಟು 400 ಪುಟಗಳ ಪೂರಕ ಆರೋಪಪಟ್ಟಿಯಲ್ಲಿ 2008ರ ನ.11ರಿಂದ 21ರವರೆಗೆ ಭಾರತಕ್ಕೆ ಆಗಮಿಸಿದ್ದ. ಈ ಪೈಕಿ ಎರಡು ದಿನ ಪೊವೈನ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ. 26/11 ದಾಳಿ ಪ್ರಕರಣದಲ್ಲಿ ರಾಣಾ ಶಾಮೀಲಾಗಿದ್ದ ಎನ್ನುವುದರ ಬಗ್ಗೆ ದಾಖಲೆಗಳೂ ಇವೆ. ಪಾಕಿಸ್ತಾನಿ- ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಗೆ ಭಾರತಕ್ಕೆ ಪ್ರವಾಸ ಮಾಡುವ ನಿಟ್ಟಿನಲ್ಲಿ ಟೂರಿಸ್ಟ್ ವೀಸಾ ನೀಡಲು ರಾಣಾ ನೆರವು ನೀಡಿದ್ದ ಎಂದೂ ಆರೋಪಿಸಲಾಗಿದೆ.
ಅದಕ್ಕಾಗಿ ಹೆಡ್ಲಿ ಮತ್ತು ರಾಣಾ ನಡುವಿನ ಇ-ಮೇಲ್ ಸಂಪರ್ಕ ಕೂಡ ಪೂರಕ ಆರೋಪಪಟ್ಟಿಯೊಂದಿಗೆ ಲಗತ್ತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.