Kota ಸುಣ್ಣಾರಿ: ಮದುವೆ ಆಗುವುದಾಗಿ ವಂಚನೆ; ದೂರು ದಾಖಲು
Team Udayavani, Sep 26, 2023, 11:25 PM IST
ಕೋಟ: ಯುವತಿಯೋರ್ವಳಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಾವರ ಗ್ರಾಮದ ಸುಣ್ಣಾರಿ ನಿವಾಸಿ ಶಾಂತಿ ಶೆಟ್ಟಿ (23) ವಂಚನೆಗೊಳಗಾದ ಮಹಿಳೆ. ಈಕೆಗೆ ಮೂಲತಃ ತೀರ್ಥಹಳ್ಳಿ ನಿವಾಸಿ ಖಾಸಗಿ ಬಸ್ ಚಾಲಕ ಹರ್ಷ (32) ಎನ್ನುವ ಯುವಕನೊಂದಿಗೆ ಎಂಟು ವರ್ಷದಿಂದ ಪರಿಚಯವಿದ್ದು ಆತ ತನ್ನ ಜಾತಿ ಹಾಗೂ ಬೇರೊಂದು ಯುವತಿಯೊಂದಿಗಿರುವ ಸಂಬಂಧವನ್ನು ಮರೆಮಾಚಿ ಶಾಂತಿ ಅವರನ್ನು ಪ್ರೀತಿಸುವ ನಾಟಕವಾಡಿದ್ದ ಮತ್ತು ದೈಹಿಕ ಸಂಪರ್ಕ ಬೆಳೆಸಿದ್ದ.
ಈಕೆ ತನಗಾದ ಅನ್ಯಾಯದ ಬಗ್ಗೆ ನ್ಯಾಯ ಕೇಳುವ ಸಲುವಾಗಿ ಆ. 28ರಂದು ಕೋಟ ಠಾಣೆಗೆ ದೂರು ನೀಡಿದಾಗ ವಿಚಾರಣೆಗೆ ಬಂದ ಹರ್ಷ ಶಾಂತಿ ಅವರಿಗೆ ಹಲ್ಲೆ ನಡೆಸಿದ್ದಾನೆ. ಇದೀಗ ಸಂತ್ರಸ್ತೆ ತನಗಾದ ವಂಚನೆ ಮತ್ತು ಹಲ್ಲೆ ನಡೆಸಿದ ಬಗ್ಗೆ ನ್ಯಾಯ ಒದಗಿಸಬೇಕೆಂದು ಎಸ್.ಪಿ.ಯವರಿಗೆ ಮನವಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.