Education: ಪಠ್ಯ ಪರಿಷ್ಕರಣೆಗೆ ಸಮಿತಿ ರಚಿಸಿದ ರಾಜ್ಯ ಸರಕಾರ

ಐವರು ಅಧ್ಯಕ್ಷರನ್ನೊಳಗೊಂಡು 37 ಸದಸ್ಯರ ಪರಿಷ್ಕರಣ ಸಮಿತಿ ರಚನೆ

Team Udayavani, Sep 26, 2023, 11:28 PM IST

text books

 

ಬೆಂಗಳೂರು: ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು-2005 ಆಧಾರಿತವಾಗಿ ರಚನೆಯಾಗಿರುವ ರಾಜ್ಯದ ಒಂದರಿಂದ ಹತ್ತನೇ ತರಗತಿಯವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ, ಒಂಭತ್ತು ಮತ್ತು ಹತ್ತನೇ ತರಗತಿಯ ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕ ಮತ್ತು ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ರಾಜ್ಯ ಸರಕಾರ ಸಮಿತಿ ರಚಿಸಿದೆ.

ಈ ಸಮಿತಿಗೆ ಉತ್ತರ ಕನ್ನಡದ ಕುಮಟದ ನಿವೃತ್ತ ಪ್ರಾಧ್ಯಾಪಕ ಡಾ| ಮಂಜುನಾಥ್‌ ಜಿ. ಹೆಗಡೆ ಅವರನ್ನು ಮುಖ್ಯ ಸಂಯೋಜಕರನ್ನಾಗಿ ನೇಮಿಸಲಾಗಿದೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಪಠ್ಯ ಪುಸ್ತಕಗಳನ್ನು ರೋಹಿತ್‌ ಚಕ್ರತೀರ್ಥ ಅವರ ಸಮಿತಿ ಪರಿಷ್ಕರಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಆಗ ಈ ಪರಿಷ್ಕರಣೆಯನ್ನು ಕಾಂಗ್ರೆಸ್‌ ಕಟುವಾಗಿ ವಿರೋಧಿಸಿತ್ತು. ತಾನು ಅಧಿಕಾರಕ್ಕೆ ಬಂದರೆ ಪಠ್ಯ ಪುಸ್ತಕವನ್ನು ಮತ್ತೆ ಪರಿಷ್ಕರಿಸುವುದಾಗಿ ಹೇಳಿದ್ದಲ್ಲದೇ ಅಧಿಕಾರಕ್ಕೆ ಬಂದ ಬಳಿಕ ಕೆಲವು ಪ್ರಮುಖ ಅಂಶಗಳನ್ನು ಪರಿಷ್ಕರಿಸಿತ್ತು. ಇದೀಗ ಐವರು ಅಧ್ಯಕ್ಷರನ್ನೊಳಗೊಂಡು ಒಟ್ಟು 37 ಸದಸ್ಯರ ಪರಿಷ್ಕರಣ ಸಮಿತಿ ರಚಿಸಿದ್ದು, 2024-25ನೇ ಶೈಕ್ಷಣಿಕ ಸಾಲಿಗೆ ಜಾರಿಗೊಳಿಸಲು ಅನುಕೂಲವಾಗುವಂತೆ 2 ರಿಂದ 3 ತಿಂಗಳೊಳಗೆ ಪರಿಷ್ಕರಣ ಕಾರ್ಯ ಪೂರ್ಣಗೊಳಿಸುವಂತೆ ಸರಕಾರ ಸೂಚಿಸಿದೆ.

2023-24ರ ಸಾಲಿನ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ| ಆಂಜನಪ್ಪ, ಕನ್ನಡ ದ್ವಿತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಚಿಕ್ಕಮಗಳೂರಿನ ಬಸವನಹಳ್ಳಿಯ ಸರಕಾರಿ ಬಾಲಿಕಾ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ಡಾ| ಎಚ್‌.ಎನ್‌. ಸತ್ಯನಾರಾಯಣ್‌, ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ದಾವಣಗೆರೆಯ ಸರಕಾರಿ ಮಹಿಳಾ ಪ್ರಥಮ ದರ್ಜೆಯ ಉಪನ್ಯಾಸಕ ಡಾ| ಮಂಜಣ್ಣ, 6 ಮತ್ತು 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಕಲಬುರಗಿಯ ಕೇಂದ್ರೀಯ ವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಕಿರಣ ಎಂ., 8 ಮತ್ತು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಸಮಿತಿಯ ಸಮಿತಿಗೆ ಬೆಂಗಳೂರು ವಿವಿ ಇತಿಹಾಸ ವಿಭಾಗದ ಡಾ| ಅಶ್ವತ್ಥ ನಾರಾಯಣ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಸಮಿತಿಗಳ ಸದಸ್ಯ ಕಾರ್ಯದರ್ಶಿಯಾಗಿ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರು ಕಾರ್ಯನಿರ್ವಹಿಸಲಿದ್ದಾರೆ.

ಹಾಗೆಯೇ ಸರಕಾರಕ್ಕೆ ಮಾಸಿಕ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸಂಯೋಜಕರಿಗೆ ಸರಕಾರ ಸೂಚಿಸಿದೆ. ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಸದಸ್ಯರಾಗಿ ಬೆಂಗಳೂರಿನ ಡಾ| ಬಿ.ಸಿ. ನಾಗೇಂದ್ರ ಕುಮಾರ್‌, ಚಿಕ್ಕದೇವೇಗೌಡ, ನೇತ್ರಾವತಿ, ನರಸಿಂಹ ಮೂರ್ತಿ ಬಿ.ಕೆ., ವಿಶ್ವನಾಥ್‌ ಜಿ.ಎಸ್‌., ಗಂಗಾವತಿಯ ಅಜಮೀರ ನಂದಾಪುರ, ಮದ್ದೂರಿನ ಸುಶೀಲಾ, ಶಿರಸಿಯ ಅಕ್ಷತಾ ಅವರನ್ನು ನೇಮಕ ಮಾಡಲಾಗಿದೆ.

ಕನ್ನಡ ದ್ವಿತೀಯ ಭಾಷೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಸದಸ್ಯರನ್ನಾಗಿ ಬೆಂಗಳೂರಿನ ಡಾ| ಬಿ. ಪಾಪಣ್ಣ, ಅನಿತಾ, ಈರಪ್ಪ ಮಹಾಲಿಂಗಪುರ, ರಶ್ಮಿ, ಪವಿತ್ರಾ, ಚಿಕ್ಕಮಗಳೂರಿನ ಡಾ| ಗಣೇಶ್‌, ಬೆಳಗಾವಿಯ ಡಾ| ಗಜಾನಂದ್‌, ಮೈಸೂರಿನ ರವೀಶ್‌ ಕುಮಾರ್‌ ಅವರನ್ನು ನೇಮಿಸಲಾಗಿದೆ. ಕನ್ನಡ ತೃತೀಯ ಭಾಷೆಯ ಪರಿಷ್ಕರಣ ಸಮಿತಿಗೆ ಬೆಂಗಳೂರಿನ ಮಮತಾ ಭಾಗವತ್‌, ತುಮಕೂರಿನ ಶಿವಣ್ಣ ಹೆಂದೊರೆ ಅವರನ್ನು ಆಯ್ಕೆ ಮಾಡಲಾಗಿದೆ.

ಸುಳ್ಯದ ಡಾ| ಪ್ರದೀಪ ಕೆಂಚನೂರ್‌ ನೇಮಕ
6 ಮತ್ತು 7ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಮೈಸೂರಿನ ಡಾ| ಕೃಷ್ಣಾ ಹೊಂಬಾಳೆ, ಸುಳ್ಯದ ಡಾ| ಪ್ರದೀಪ ಕೆಂಚನೂರ್‌, ಚಿಕ್ಕಬಳ್ಳಾಪುರದ ಡಾ| ಕೋಡಿ ರಂಗಪ್ಪ, ಬೆಳಗಾವಿಯ ದಾನಮ್ಮ ಜಳಕಿ, ಗುಬ್ಬಿಯ ವಸೀಮ್‌ ಅನ್ವರ್‌ ಅವರನ್ನು ನೇಮಿಸಲಾಗಿದೆ. 8, 9 ಮತ್ತು 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಚಿತ್ರದುರ್ಗದ ಡಾ| ಗಂಗಾಧರ್‌ ಪಿ.ಎಸ್‌., ತುಮಕೂರಿನ ಪ್ರೊ| ಬಿ. ಶೇಖರ್‌, ಬೆಳಗಾವಿಯ ಎ.ಬಿ. ವಗ್ಗರ, ಬೆಂಗಳೂರಿನ ಡಾ| ಶ್ರೀನಿವಾಸ ಯಡವಾಣಿ, ಮೊಹನ್‌ ಕುಮಾರಿ ಎಸ್‌., ಕನಕಪುರದ ತಬುಸ್ಸಮ್‌ ಫಾತಿಮ, ಶಿರಾದ ಪಿ.ಎಂ. ಕಾಗಿನಕರ್‌, ನೆಲಮಂಗಲದ ಶಾಹಿನಾ ಅಲ್ಲಾಪುರ ಅವರನ್ನು ನೇಮಕ ಮಾಡಲಾಗಿದೆ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.