Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ
ಕಾರವಾರ ತಲುಪಿದ ಯುದ್ಧ ವಿಮಾನ ಟುಪ್ಲೋವ್ ಬಿಡಿ ಭಾಗಗಳು
Team Udayavani, Sep 27, 2023, 8:48 PM IST
ಕಾರವಾರ: ಇಲ್ಲಿನ ರವೀಂದ್ರನಾಥ್ ಟಾಗೋರ್ ಸಮುದ್ರ ತೀರದಲ್ಲಿ ಯುದ್ಧನೌಕಾ ಮ್ಯೂಸಿಯಂ ಜೊತೆಗೆ ಯುದ್ಧ ವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಕಲ ಸಿದ್ಧತೆಗಳು ಪೂರ್ಣವಾಗಿವೆ.
ಆರು ವರ್ಷದ ಸತತ ಪ್ರಯತ್ನದ ಬಳಿಕ ಭಾರತೀಯ ನೌಕಾದಳ ದಿಂದ ಕಾರ್ಯಾಚರಣೆ ನಿಲ್ಲಿಸಿದ ಯುದ್ಧ ವಿಮಾನ ಟುಪ್ಲೋವ್( TU-142) ಮುಖ್ಯಭಾಗ ಹಾಗೂ ಬಿಡಿಭಾಗಗಳು ಕಾರವಾರ ಬಂದು ತಲುಪಿವೆ. ನಿವೃತ್ತ ಯುದ್ಧ ವಿಮಾನದ ಬಿಡಿ ಭಾಗ ತರಲು ಹಾಗೂ ಅದನ್ನು ಕಡಲತೀರದಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ 6 ಕೋಟಿ ರೂ. ನೆರವು ನೀಡಿದೆ.
ತಮಿಳುನಾಡಿನ ಅರಕ್ಕೋಡಮ್ ನಲ್ಲಿರುವ ಐಎನ್ ಎಸ್ ರಾಜೋಲಿಯಿಂದ ಬ್ಲೂ ಸ್ಕೈ ಸಂಸ್ಥೆಯು 50 ಟನ್ ತೂಕದ ಬಿಡಿಭಾಗಗಳನ್ನು 9 ಟ್ರಕ್ ಮೂಲಕ 5 ದಿನಗಳ ದೀರ್ಘ ಪ್ರಯಾಣದ ಬಳಿಕ ಕಾರವಾರಕ್ಕೆ ತಲುಪಿಸಿದೆ.
ಟುಪ್ಲೋವ್ ಹಿನ್ನೆಲೆ
ರಷ್ಯಾ ದೇಶದಿಂದ ನಿರ್ಮಾಣದ ಟುಪ್ಲೋವ್-142 ಯುದ್ಧ ವಿಮಾನ 1988 ರಲ್ಲಿ ಭಾರತೀಯ ನೌಕಾದಳವನ್ನು ಸೇರ್ಪಡೆಗೊಂಡಿತು . ವಿವಿಧ ಕಾರ್ಯಚರಣೆಯಲ್ಲಿ ಭಾಗಿಯಾಗಿತ್ತು. 2017 ರಲ್ಲಿ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕ ರಾಜೋಲಿಯ ನೌಕಾನೆಲೆಯಲ್ಲಿ ಇಡಲಾಗಿತ್ತು. ಆರು ವರ್ಷದ ಹಿಂದೆ ರಾಜ್ಯ ಸರ್ಕಾರದ ವಿನಂತಿ ಮೇರೆಗೆ ಆರು ಕೋಟಿಗೂ ಹೆಚ್ಚು ಹಣ ವ್ಯಯಿಸಿ ಕಾರವಾರಕ್ಕೆ ತರಲಾಗಿದ್ದು ,ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿರುವ ಚಾಪೆಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಪಕ್ಕದಲ್ಲಿ ಇದನ್ನು ಸ್ಥಾಪಿಸಸಲಾಗುತ್ತಿದೆ. ಈಗಾಗಲೇ ಯುದ್ಧ ವಿಮಾನ ಮ್ಯೂಸಿಯಂಗೆ ಅಡಿಪಾಯ ಸಹ ಹಾಲಾಗಿದ್ದು , ಜೋಡಣೆ ಮಾಡುವ ಜವಾಬ್ದಾರಿಯನ್ನು ಭಾರತೀಯ ನೌಕಾಸೇನೆ ವಹಿಸಿಕೊಂಡಿದೆ . ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಟುಪ್ಲೋವ್ ಯುದ್ಧ ವಿಮಾನ ಮ್ಯೂಸಿಯಂ ವೀಕ್ಷಣೆಗೆ ಅವಕಾಶ ಸಿಗಲಿದೆ.
ಟಪ್ಲೊವ್ ಯುದ್ಧ ವಿಮಾನ ಮ್ಯೂಸಿಯಂ ಸ್ಥಾಪನೆ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಇದು ಸಹ ಕಾರವಾರದ ವಿಶೇಷ ತಾಣವಾಗಲಿದೆ .
– ಗಂಗೂಬಾಯಿ ಮಾನಕರ್. ಜಿಲ್ಲಾಧಿಕಾರಿ. ಕಾರವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.