Education: ಕೃಷಿ ಡಿಪ್ಲೊಮಾ: ಈ ಬಾರಿ ಪ್ರವೇಶ ಪ್ರಕ್ರಿಯೆಯೇ ಇಲ್ಲ!


Team Udayavani, Sep 28, 2023, 12:20 AM IST

paddy farmers

ಬ್ರಹ್ಮಾವರ: ಡಿಪ್ಲೊಮಾ ಕಾಲೇಜುಗಳನ್ನು ಕೃಷಿ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸುವ ನೆಪದಲ್ಲಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ 2 ವರ್ಷಗಳ ಡಿಪ್ಲೊಮಾ ಕೋರ್ಸನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಈ ವರ್ಷ ಬ್ರಹ್ಮಾವರ ಸಹಿತ ಎಲ್ಲೂ ವಿದ್ಯಾರ್ಥಿ ಗಳನ್ನು ದಾಖಲಿಸಿಕೊಂಡಿಲ್ಲ.

ಹಾಗೆಂದು ಯಾವ ಕಾಲೇಜನ್ನೂ ಮೇಲ್ದರ್ಜೆಗೆ ಏರಿಸಲಾಗಿಲ್ಲ. ಒಟ್ಟಿನಲ್ಲಿ ಅತ್ತ ಡಿಪ್ಲೊಮಾವೂ ಇಲ್ಲ, ಇತ್ತ ಕಾಲೇಜು ಮೇಲ್ದರ್ಜೆಗೇರಿಸದೇ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ತಲುಪುವಂತಾಗಿದೆ. ಇದರ ಮಧ್ಯೆ ಡಿಪ್ಲೊಮಾ ಪುನರಾರಂಭಕ್ಕೆ ಆಲೋಚಿಸಲಾಗುತ್ತಿದೆ ಹಾಗೂ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭಿಸಲು ಯೋಚಿಸಲಾಗುತ್ತಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಉದಯವಾಣಿಗೆ ತಿಳಿಸಿದ್ದಾರೆ.

ಆಸಕ್ತರು ಈ ಸಾಲಿನಿಂದಲೇ ಡಿಪ್ಲೊಮಾ ಕಲಿಕೆ ಯಿಂದ ವಂಚಿತರಾಗಿದ್ದಾರೆ. ಇದರೊಂದಿಗೆ ಕಾಲೇಜುಗಳನ್ನು ಪೂರ್ಣ ಪ್ರಮಾಣದ ಕೃಷಿ ಕಾಲೇಜನ್ನಾಗಿಸದಿದ್ದರೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ; ಸರಕಾರಕ್ಕೂ ಕೋಟ್ಯಂತರ ರೂ. ವ್ಯರ್ಥವಾಗಲಿದೆ.

ಎಸೆಸೆಲ್ಸಿ ಬಳಿಕ ಗ್ರಾಮೀಣ ಭಾಗದ, ಅದರಲ್ಲೂ ಕೃಷಿ ಕುಟುಂಬದ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ ರೇಷ್ಮೆ ಮೊದಲಾದ ವಿಷಯಗಳ ಬಗ್ಗೆ ಡಿಪ್ಲೊಮಾ
ಕೋರ್ಸ್‌ ಮಾಡಿ ಸ್ವ ಉದ್ಯೋಗ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯುತ್ತಿದ್ದರು. ಆದರೆ ಇಂಥ ಉಪಯುಕ್ತ ಕೋರ್ಸನ್ನೇ ಸ್ಥಗಿತಗೊಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಹಲವು ಪೋಷಕರದ್ದು.

ಕೃಷಿ ಸಹಾಯಕರ ನೇಮಕದ ಉದ್ದೇಶದಿಂದ ವಿವಿಧ ವಿಷಯಗಳ ಡಿಪ್ಲೊಮಾ ಕೋರ್ಸ್‌ಗಳನ್ನು 10 ವರ್ಷಗಳ ಹಿಂದೆ ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಜಾರಿಗೆ ತಂದಿದ್ದರು. ಎಸೆಸೆಲ್ಸಿ ಪೂರ್ಣಗೊಂಡ ತಲಾ 50 ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರವೇಶ ನೀಡುವುದರೊಂದಿಗೆ ಮಾಸಿಕ ಒಂದು ಸಾವಿರ ರೂ. ಶಿಷ್ಯ ವೇತನ ಸಹ ನೀಡಲಾಗುತ್ತಿತ್ತು. ಡಿಪ್ಲೊಮಾದ ಅನಂತರ ಬಿಎಸ್ಸಿ (ಕೃಷಿ) ಪದವಿಗೆ ಸೇರಲು ಮೀಸಲಾತಿ ಸಹ ನೀಡಲಾಗಿತ್ತು. ಈ ಮೂಲಕ ಗ್ರಾಮೀಣ ಪ್ರದೇಶದ ಯುವಜನರಿಗೆ ಅನುಕೂಲ ಕಲ್ಪಿಸುವ ಸದುದ್ದೇಶವಿತ್ತು.

ಬ್ರಹ್ಮಾವರದ ಪರಿಸ್ಥಿತಿ: 2014ರಲ್ಲಿ ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜು ಪ್ರಾರಂಭಗೊಂಡಿತ್ತು. ಕೋಟ್ಯಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ಸಹ ನಿರ್ಮಾಣಗೊಂಡಿದೆ. ಸುಮಾರು 350 ಎಕ್ರೆ ವಿಸ್ತೀರ್ಣದ ವಿಶಾಲ ಜಾಗವೂ ಇದೆ. ಇಷ್ಟೆಲ್ಲಾ ಇದ್ದೂ ಕೋರ್ಸ್‌ ಸ್ಥಗಿತಗೊಳ್ಳುವ ಭೀತಿ ಇದೆ.
ಕರಾವಳಿಯ 3 ಜಿಲ್ಲೆಗಳ ಹೃದಯ ಭಾಗ, ತಾಲೂಕು ಕೇಂದ್ರ ಬ್ರಹ್ಮಾವರದಲ್ಲಿ ಕೃಷಿ ಕಾಲೇಜಿಗೆ ಸರ್ವ ರೀತಿಯಲ್ಲೂ ಪೂರಕ ವಾತಾವರಣವಿದೆ. ಸುಸಜ್ಜಿತ ಕಟ್ಟಡಗಳು, ಬೋಧನೆಗೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಿರುವುದು ಪೂರಕವಾಗಿದೆ. ಆದ್ದರಿಂದ ಬ್ರಹ್ಮಾವರಕ್ಕೆ ಕೃಷಿ ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿ ಕರಾವಳಿ ಕೃಷಿ ಕಾಲೇಜು ಹೋರಾಟ ಸಮಿತಿ ರಚಿಸಲಾಗಿದೆ. ಈಗಾಗಲೇ ಸಮಿತಿಯ ನಿಯೋಗವು ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಉಸ್ತುವಾರಿ ಸಚಿವರ ಸಹಿತ ಹಲವರಿಗೆ ಮನವಿ ಸಲ್ಲಿಸಿದೆ. ಜಿಲ್ಲಾ ರೈತ ಸಂಘವೂ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.

ಕರಾವಳಿಯವರಿಗೆ ಕೋರ್ಸ್‌ ನಿರಾಸಕ್ತಿ!
ಎಲ್ಲ ಜಿಲ್ಲೆಯವರು ಕೃಷಿ ಡಿಪ್ಲೊಮಾ ಹಾಗೂ ಪದವಿ ಕೋರ್ಸ್‌ಗೆ ಮುಗಿ ಬೀಳುತ್ತಿದ್ದರೆ ಉಡುಪಿ, ದ.ಕ. ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಕಾಣುತ್ತಿದೆ. ಸರಕಾರಿ ಉದ್ಯೋಗ ಸಹಿತ ಖಾಸಗಿ ಕ್ಷೇತ್ರದಲ್ಲೂ ವಿಪುಲ ಅವಕಾಶವಿರುವ ಈ ಕೋರ್ಸ್‌ಗಳ ಮಹತ್ವವನ್ನು ಇನ್ನಾದರೂ ಅರಿಯಬೇಕಿದೆ.

ಡಿಪ್ಲೊಮಾ ಕಾಲೇಜುಗಳನ್ನು ಉನ್ನತೀಕರಣಗೊಳಿಸುವ ಉದ್ದೇಶವಿದೆ. 1 ವರ್ಷದ ಸರ್ಟಿಫಿಕೆಟ್‌, 2 ವರ್ಷದ ಡಿಪ್ಲೊಮಾ, 3 ವರ್ಷದ ಪದವಿ, 4 ವರ್ಷದ ಸ್ನಾತಕೋತ್ತರ ಕೋರ್ಸ್‌ಗಳನ್ನು ಪ್ರಾರಂಭಿಸುವ ಚಿಂತನೆಯಿದೆ. ಬ್ರಹ್ಮಾವರಕ್ಕೆ ಕೃಷಿ ಕಾಲೇಜು ಮಂಜೂರು ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿದೆ.
  ಆರ್‌.ಸಿ. ಜಗದೀಶ್‌, ಉಪಕುಲಪತಿ, ಶಿವಮೊಗ್ಗ ಕೃಷಿ ವಿ.ವಿ.

ಬ್ರಹ್ಮಾವರದಲ್ಲಿ ಪೂರ್ಣ ಪ್ರಮಾಣದ ಕೃಷಿ ಕಾಲೇಜು ಪ್ರಾರಂಭಿಸುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಶೀಘ್ರ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರ ಬಳಿಗೆ ನಿಯೋಗದಲ್ಲಿ ತೆರಳಿ ಚರ್ಚಿಸಲಾಗುವುದು. ಕರಾವಳಿಯ ಸಮಗ್ರ ಕೃಷಿಕರು ಹಾಗೂ ಯುವ ಜನತೆಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಸಂಶೋಧನಾ ಕೇಂದ್ರದ 350 ಎಕ್ರೆ ಸ್ಥಳವನ್ನು ಸದ್ಬಳಕೆ ಮಾಡಲಾಗುವುದು. ಈ ಕುರಿತು ಮಾಸ್ಟರ್‌ ಪ್ಲಾನ್‌ ನೀಡುವಂತೆ ವಿಜ್ಞಾನಿಗಳಿಗೆ ಸೂಚಿಸಲಾಗಿದೆ.
  ಯಶಪಾಲ್‌ ಸುವರ್ಣ, ಶಾಸಕ, ಉಡುಪಿ

ಪ್ರಸ್ತುತ ಎಲ್ಲೆಲ್ಲಿ ಡಿಪ್ಲೊಮಾ?
ಮುಖ್ಯವಾಗಿ ಧಾರವಾಡ ವಿ.ವಿ.ಯಲ್ಲಿ ಕೃಷಿ ಹಾಗೂ ಅರಣ್ಯ ಡಿಪ್ಲೊಮಾ ಕೋರ್ಸ್‌, ಬೆಂಗಳೂರು ಕೃಷಿ ವಿ.ವಿ.ಗೆ ಸಂಬಂಧಪಟ್ಟ ಮಂಡ್ಯದ ಕೃಷಿ ಕಾಲೇಜಿನಲ್ಲಿ ಕೃಷಿ, ಚಿಂತಾಮಣಿ ಕೃಷಿ ಕಾಲೇಜಿನಲ್ಲಿ ರೇಷ್ಮೆ ವಿಷಯದ ಬಗ್ಗೆ, ಬೀದರ್‌ ವಿ.ವಿ.ಯಲ್ಲಿ ಹೈನುಗಾರಿಕೆ ಹಾಗೂ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಷಯದ ಡಿಪ್ಲೊಮಾ ಕೋರ್ಸ್‌ಗಳಿವೆ. ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧೀನದಲ್ಲಿ ಬ್ರಹ್ಮಾವರ ಕೆವಿಕೆಯಲ್ಲಿ ಕೃಷಿ ವಿಷಯಕ್ಕೆ ಸಂಬಂಧಿಸಿದ ಡಿಪ್ಲೊಮಾ ಕೋರ್ಸ್‌ಗಳಿದ್ದವು.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಂಗಳೂರಿನಲ್ಲಿ ಬೀದರ್‌ ವಿ.ವಿ.ಯ ಬಿಎಸ್ಸಿ ಫಿಶರೀಸ್‌ ಕಾಲೇಜು ಹಾಗೂ ಶಿರಸಿಯಲ್ಲಿ ಧಾರವಾಡ ಕೃಷಿ ವಿ.ವಿ.ಯ ಬಿಎಸ್ಸಿ ಫಾರೆಸ್ಟರಿ ಬಿಟ್ಟರೆ ಕೃಷಿಗೆ ಸಂಬಂಧಪಟ್ಟ ಯಾವುದೇ ಕಾಲೇಜುಗಳಿಲ್ಲ. ಉಡುಪಿ ಜಿಲ್ಲೆಯಲ್ಲಿ ಇರುವ ಒಂದು ಕೃಷಿ ಡಿಪ್ಲೊಮಾ ಕಾಲೇಜು ಸಹ ಮುಚ್ಚಲು ತಯಾರಿ ನಡೆದಿದೆ.

ಹಿಂದಿನ ಸರಕಾರದ ಅವಧಿಯಲ್ಲೇ ಡಿಪ್ಲೊಮಾ ಕೋರ್ಸ್‌ ಸ್ಥಗಿತಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈಗ ಹಲವು ಶಾಸಕರ ಮನವಿ ಮೇರೆಗೆ ಮರು ಪ್ರಾರಂಭಿ ಸಲು ಚಿಂತನೆ ನಡೆಯುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಬ್ರಹ್ಮಾವ ರದಲ್ಲಿ ಕೃಷಿ ಕಾಲೇಜು ಪ್ರಾರಂಭಿ ಸಲು ಆಲೋಚಿಸಲಾ ಗುವುದು.
-ಎನ್‌. ಚೆಲುವರಾಯಸ್ವಾಮಿ, ಕೃಷಿ ಸಚಿವರು

~  ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.