Mangaluru ವಿದೇಶಿ ಮಹಿಳೆಯ ಹೆಸರಲ್ಲಿ 8.42 ಲ.ರೂ. ವಂಚನೆ
Team Udayavani, Sep 28, 2023, 12:26 AM IST
ಮಂಗಳೂರು: ವಿದೇಶಿ ಮಹಿಳೆಯ ಹೆಸರಿನಿಂದ ಪರಿಚಯಿಸಿಕೊಂಡು 8.42 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಫೇಸ್ಬುಕ್ ಖಾತೆಯ ಮೂಲಕ ಅಪರಿಚಿತ ಮಹಿಳೆ ಮೆಸೆಂಜರ್ನಲ್ಲಿ ಸಂದೇಶ ಕಳುಹಿಸಿ ವಾಟ್ಸ್ಆ್ಯಪ್ ನಂಬರ್ ಪಡೆದುಕೊಂಡಿದ್ದಳು. ಅನಂತರ ವಾಟ್ಸ್ಆ್ಯಪ್ಗೆ ಸಂದೇಶಗಳನ್ನು ಕಳುಹಿಸಿ ತಾನು ವಿದೇಶದಲ್ಲಿರುವುದಾಗಿಯೂ ಭಾರತಕ್ಕೆ ಬಂದು ಭೇಟಿ ಮಾಡುವುದಾಗಿಯೂ ತಿಳಿಸಿದ್ದಳು.
ಅನಂತರ ಸೆ. 21ರಂದು ಕರೆ ಮಾಡಿ ತಾನು ಭಾರತಕ್ಕೆ ಬಂದಿದ್ದು ತನ್ನ ಬಳಿ 70,000 ವಿದೇಶಿ ಕರೆನ್ಸಿ ಇದ್ದು ಅದನ್ನು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿ ವಶಪಡಿಸಿಕೊಂಡಿದ್ದಾನೆ. ಅದನ್ನು ಬಿಡಿಸಲು ಹಣ ಪಾವತಿಸಬೇಕಾಗಿದೆ ಎಂದಳು. ಅಲ್ಲದೆ ಕಸ್ಟಮ್ ಅಧಿಕಾರಿಯೆಂದು ಬಿಂಬಿಸಿ ಬೇರೊಂದು ವ್ಯಕ್ತಿಯ ಮೂಲಕ ಮಾತನಾಡಿಸಿದಳು. ಇದನ್ನು ನಂಬಿದ ದೂರುದಾರರು ಮಹಿಳೆ ನೀಡಿದ ಬ್ಯಾಂಕ್ಗಳ ಖಾತೆಗೆ ಸೆ. 21ರಿಂದ 25ರ ವರೆಗೆ ಹಂತ ಹಂತವಾಗಿ ಒಟ್ಟು 8,43,050 ರೂ. ವರ್ಗಾಯಿಸಿದ್ದಾರೆ. ಅನಂತರವೂ ಮಹಿಳೆ ಹೆಚ್ಚಿನ ಹಣ ಪಾವತಿಸುವಂತೆ ತಿಳಿಸಿದಾಗ ಅನುಮಾನಗೊಂಡು ತನ್ನ ಮನೆಯವರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.