Wushu: ಫೈನಲ್‌ನಲ್ಲಿ ವು ಕ್ಸಿಯೊವೈ ವಿರುದ್ಧ ಸೋಲು; ರೋಶಿಬಿನಾ ದೇವಿಗೆ ಬೆಳ್ಳಿ
ಮಣಿಪುರದ ಸಂತ್ರಸ್ತರಿಗೆ ಅರ್ಪಣೆ
Team Udayavani, Sep 28, 2023, 11:07 PM IST
ಹ್ಯಾಂಗ್‌ಝೂ: ಭಾರತದ ನೋರಮ್ ರೋಶಿಬಿನಾ ಅವರು ವನಿತೆಯರ 60 ಕೆ.ಜಿ. ವುಶು ಸಾಂಡ ಸ್ಪರ್ಧೆಯ ಫೈನಲ್‌ನಲ್ಲಿ ಸ್ಥಳೀಯ ಹೆವಿವೇಟ್ ವು ಕ್ಸಿಯೊವೈ ಅವರ ವಿರುದ್ಧ 0-2 ಅಂತರದಿಂದ ಸೋಲನ್ನು ಕಂಡು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಹಾಲಿ ಚಾಂಪಿಯನ್ ಆಗಿರುವ ಕ್ಸಿಯೊವೈ ಸ್ಪರ್ಧೆಯ ವೇಳೆ ಬಲಿಷ್ಠ ಎದುರಾಳಿಯಾಗಿ ಕಂಡು ಬಂದರು. ಭರ್ಜರಿ ಆರಂಭ ಪಡೆದ ಅವರು ಎರಡು ಸುತ್ತುಗಳ ಬಳಿಕ ತೀರ್ಪುಗಾರರು ಕ್ಸಿಯೊವೈ ವಿಜಯಿ ಎಂದು ಘೋಷಿಸಿದರು.
ಮೊದಲ ಸುತ್ತಿನಲ್ಲಿ ಕ್ಸಿಯೊವೈ ಆಕ್ರಮಣಕಾರಿಯಾಗಿ ಆಡಿ ರೋಶಿಬಿನಾ ಅವರನ್ನು ನೆಲಕ್ಕುರುಳಿ ಸಲು ಯಶಸ್ವಿಯಾದರು. ದ್ವಿತೀಯ ಸುತ್ತಿನಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದರೂ ರೋಶಿಬಿನಾ ಅವ ರಿಂದ ಮೇಲುಗೈ ಸಾಧಿಸಲು ಆಗಲಿಲ್ಲ. ರೋಶಿಬಿನಾ 2018ರ ಗೇಮ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದರು.
ಮಣಿಪುರದ ಸಂತ್ರಸ್ತರಿಗೆ ಅರ್ಪಣೆ
ಚುರಾಚಂದಪುರ್‌ನ ಬಿಸು°ಪುರ್ ಜಿಲ್ಲೆಯ ಕ್ವಾಶಿಪಾಯ್ ಗ್ರಾಮದ ಮೈತೇಯಿ ಸಮುದಾಯದ ರೋಶಿಬಿನಾ ಅವರು ಈ ಪದಕವನ್ನು ನಮ್ಮನ್ನು ರಕ್ಷಿಸುತ್ತಿರುವ ಮತ್ತು ಮಣಿಪುರದಲ್ಲಿ ಸಂತ್ರಸ್ತರಾಗಿರುವ ಜನರಿಗೆ ಅರ್ಪಿಸಲು ಬಯಸಿದ್ದಾರೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ಮುಂದುವರಿದಿದೆ. ನನ್ನ ಗ್ರಾಮಕ್ಕೆ ಹೋಗಲು ಸಾಧ್ಯ ವಾಗುತ್ತಿಲ್ಲ ಎಂದವರು ದುಃಖದಿಂದ ಹೇಳಿದರು.
ಮುಂದೆ ಏನಾಗಬಹುದು ಎಂಬುದು ಗೊತ್ತಿಲ್ಲ. ಹಿಂಸಾಚಾರ ಯಾವಾಗ ಕೊನೆಗೊಳ್ಳುತ್ತದೆ ಮತ್ತು ಜೀವನ ಸಹಜ ಸ್ಥಿತಿಗೆ ಯಾವಾಗ ಮರಳುತ್ತದೆ ಎಂಬುದು ತಿಳಿದಿಲ್ಲ ಎಂದ ಅವರು ಪದಕ ಗೆಲ್ಲುವ ಮೊದಲು ಹೆತ್ತವರೊಂದಿಗೆ ಮಾತ ನಾಡಿದ್ದೆ. ಅವರು ಫೈನಲ್ ಸ್ಪರ್ಧೆಯ ಬಗ್ಗೆ ಗಮನ ನೀಡು ತವರಿನ ಪರಿ ಸ್ಥಿತಿಯ ಬಗ್ಗೆ ಚಿಂತಿಸಬೇಡ ಎಂದು ಹೇಳಿದ್ದರು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.