Asian Games ಸ್ಕ್ವಾಷ್: ಭಾರತ ಸೆಮಿಫೈನಲಿಗೆ; ಎರಡು ಪದಕ ಖಚಿತ
Team Udayavani, Sep 28, 2023, 11:16 PM IST
ಹ್ಯಾಂಗ್‌ಝೂ: ಭಾರತದ ಪುರುಷರ ಮತ್ತು ವನಿತೆಯರ ತಂಡಗಳು ಸ್ಕ್ವಾಷ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತ ಕ್ಕೇರಿದ್ದು ಪದಕ ಗೆಲ್ಲುವುದನ್ನು ಖಚಿತ ಪಡಿಸಿವೆ.
ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಪುರುಷರ ತಂಡವು ನೇಪಾಲ ತಂಡವನ್ನು 3-0 ಅಂತರದಿಂದ ಉರುಳಿಸಿದರೆ ವನಿತೆ ಯರ ತಂಡ ಮಲೇಷ್ಯಾ ವಿರುದ್ಧ 0-3 ಅಂತರದಿಂದ ಸೋತಿತ್ತು. ಆದರೆ ಬಣದ ಅಗ್ರ ಎರಡು ತಂಡಗಳಾಗಿ ಭಾರತ ಮತ್ತು ಮಲೇಷ್ಯಾ ಸೆಮಿಫೈನಲಿಗೇರಿದ್ದು ಕಂಚು ಗೆಲ್ಲುವುದನ್ನು ಖಚಿತಪಡಿಸಿದೆ.
ಪುರುಷರಲ್ಲಿ ಅಭಯ್ ಸಿಂಗ್, ಮಹೇಶ್ ಮಂಗೋನ್ಕರ್ ಮತ್ತು ಹರೀಂದರ್ ಪಾಲ್ ಸಿಂಗ್ ಸಂಧು ಅವರು ತಮ್ಮ ಎದುರಾಳಿಯೆದುರು ಸುಲಭ ಗೆಲುವು ಸಾಧಿಸಿ ಸಂಭ್ರಮಿಸಿದರು. ಆದರೆ ವನಿತೆಯರ ಮೂರು ಪಂದ್ಯಗಳಲ್ಲಿ ಭಾರತ ಗೆಲ್ಲಲು ವಿಫಲವಾಯಿತು.
ಮೊದಲ ಪಂದ್ಯದಲ್ಲಿ ಅನುಭವಿ ಜೋಶ್ನಾ ಚಿನ್ನಪ್ಪ ಅವರು ಕೇವಲ 21 ನಿಮಿಷಗಳಲ್ಲಿ ಸುಬ್ರಹ್ಮಣಿಯಮ್ ಸಿವ ಸಾಂಗರಿ ಅವರಿಗೆ ಶರಣಾದರೆ ದ್ವಿತೀಯ ಪಂದ್ಯದಲ್ಲಿ ತನ್ವಿ ಖನ್ನಾ ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ಐಫಾ ಬಿಂಟಿ ಅಜ್ಮಾನ್ ಅವರ ವಿರುದ್ಧ ತೀವ್ರ ಸ್ಪರ್ಧೆ ನೀಡಿ ಅಂತಿಮವಾಗಿ ಸೋತು ಹೊರಬಿದ್ದರು. ಮೂರನೇ ಪಂದ್ಯ ದಲ್ಲಿ 15ರ ಹರೆಯದ ಅನಾಹತ್ ಸಿಂಗ್ ಸುಲಭವಾಗಿ ಪರಾಭವಗೊಂಡರು.
ಬ್ಯಾಡ್ಮಿಂಟನ್: ಭಾರತ ಕ್ವಾರ್ಟರ್‌ಫೈನಲಿಗೆ; ಮುಂದಿನ ಎದುರಾಳಿ ಥಾಯ್ಲೆಂಡ್
ಭಾರತೀಯ ವನಿತಾ ತಂಡವು ಬ್ಯಾಡ್ಮಿಂಟನ್ ಸ್ಪರ್ಧೆಯ ತಂಡ ವಿಭಾಗದಲ್ಲಿ ಮಂಗೋಲಿಯ ತಂಡವನ್ನು 3-0 ಅಂತರದಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿತು.
ಏಕಮುಖವಾಗಿ ಸಾಗಿದ ಈ ಹೋರಾಟದಲ್ಲಿ ಭಾರತೀಯ ಆಟಗಾರ್ತಿಯರು ಸುಲಭವಾಗಿ ಪಂದ್ಯಗಳನ್ನು ಗೆದ್ದು ಮುನ್ನಡೆದರು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡ ಕಠಿನ ಎದುರಾಳಿ ಥಾಯ್ಲೆಂಡ್ ತಂಡವನ್ನು ಎದುರಿಸಬೇಕಾಗಿದೆ. ಥಾಯ್ಲೆಂಡ್ ತಂಡದಲ್ಲಿ ಮಾಜಿ ವಿಶ್ವ ಚಾಂಪಿಯನ್ ರಚನಾಕ್ ಇಂತನಾನ್, ವಿಶ್ವದ 12ನೇ ರ್‍ಯಾಂಕಿನ ಪೋರ್ನ್ ಪಾವೀ ಚೊಚುನ್‌ವಾಂಗ್ ಮತ್ತು ವಿಶ್ವದ 17ನೇ ರ್‍ಯಾಂಕಿನ ಸುಪಾನಿದ ಕಟೆತಾಂಗ್ ಅವರಿದ್ದಾರೆ. ಹೀಗಾಗಿ ಭಾರತೀಯ ವನಿತೆಯರು ಬಹಳಷ್ಟು ಎಚ್ಚರಿಕೆಯಿಂದ ಆಡಬೇಕಾಗಿದೆ.
ಮಂಗೋಲಿಯ ವಿರುದ್ಧ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು
ಗನ್‌ಬಾಟರ್ ಅವರನ್ನು 21-3, 21-3 ಅಂತರದಿಂದ ಸುಲಭವಾಗಿ ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಆಶ್ಮಿತಾ ಚಲಿಹಾ ಅವರು ಖೇರ್ಲನ್ ಡಾರ್ಕನ್‌ಬಾಟರ್ ಅವರನ್ನು 21-2, 21-3 ಗೇಮ್‌ಗಳಿಂದ ಉರುಳಿಸಿದರು.
ಮೂರನೇ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ ಅವರು ಖುಲಾಂಗೂ ಬಾಟರ್ ಅವರನ್ನು 21-0, 21-2 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.