Asian Games ಟೆನಿಸ್: ಬೋಪಣ್ಣ-ಭೋಸಲೆಗೆ ಕಂಚು ಖಚಿತ; ರಾಮ್ಕುಮಾರ್-ಮೈನೆನಿ ಫೈನಲಿಗೆ
Team Udayavani, Sep 28, 2023, 11:23 PM IST
ಹ್ಯಾಂಗ್ಝೂ: ಭಾರತದ ರಾಮ್ಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೆನಿ ಅವರು ಪುರುಷರ ಡಬಲ್ಸ್ನಲ್ಲಿ ಚಿನ್ನದ ಪದಕದ ಸುತ್ತಿಗೇರಿದರೆ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಮಿಕ್ಸೆಡ್ ಡಬಲ್ಸ್ ನಲ್ಲಿ ಸೆಮಿಫೈನಲಿಗೇರುವ ಮೂಲಕ ಕಡಿಮೆಪಕ್ಷ ಕಂಚಿನ ಪದಕ ಗೆಲ್ಲುವುದನ್ನು ಖಚಿತ ಪಡಿಸಿದ್ದಾರೆ.
ದ್ವಿತೀಯ ಶ್ರೇಯಾಂಕದ ರಾಮ್ಕುಮಾರ್ -ಮೈನೆನಿ ಅವರು ಕೊರಿಯದ ಸೀಂಗ್ಚಾನ್ ಹಾಂಗ್ ಮತ್ತು ಸೂನ್ವೂ ಕ್ವಾನ್ ಅವರನ್ನು 6-1, 6-7 (8), 10-0 ಸೆಟ್ಗಳಿಂದ ಸೋಲಿಸಿ ಫೈನಲ್ ಹಂತಕ್ಕೇರಿದರು. ಮೈನೆನಿ ಅವರು ಇದೀಗ ಏಷ್ಯನ್ ಗೇಮ್ಸ್ನಲ್ಲಿ ಎರಡನೇ ಚಿನ್ನದ ಪದಕ ಗೆಲ್ಲುವ ಒಳ್ಳೆಯ ಅವಕಾಶ ಪಡೆದಿದ್ದಾರೆ. ಅವರು ಈ ಹಿಂದೆ 2014ರ ಗೇಮ್ಸ್ ನಲ್ಲಿ ಸಾನಿಯಾ ಮಿರ್ಜಾ ಅವರ ಜತೆಗೂಡಿ ಮಿಕ್ಸೆಡ್ ಡಬಲ್ಸ್ನಲ್ಲಿ ಚಿನ್ನ ಜಯಿಸಿದ್ದರು.
ಶುಕ್ರವಾರ ಚಿನ್ನಕ್ಕಾಗಿ ನಡೆಯುವ ಫೈನಲ್ ಹೋರಾಟದಲ್ಲಿ ಭಾರತೀಯ ತಂಡವು ಚೈನೀಸ್ ತೈಪೆ ತಂಡವನ್ನು ಎದುರಿಸಲಿದೆ. ತೈಪೆ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಸೋಲಿಸಿತ್ತು. ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಅವರನ್ನು ಒಳಗೊಂಡ ಭಾರತದ ಡಬಲ್ಸ್ ತಂಡ ಕಳೆದ ಗೇಮ್ಸ್ನಲ್ಲಿ ಚಿನ್ನ ಜಯಿಸಿತ್ತು. ಈ ಬಾರಿ ಚಿನ್ನವನ್ನು ಉಳಿಸಿಕೊಳ್ಳುವ ಅವಕಾಶ ಭಾರತ ಪಡೆದಿದೆ.
ಬೋಪಣ್ಣ-ಬೋಸಲೆ ಮುನ್ನಡೆ
ಮಿಕ್ಸೆಡ್ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಭೋಸಲೆ ಅವರು ಕಜಾಕ್ಸ್ಥಾನದ ಝಿಬೆಕ್ ಕುಲಂಬಯೆವಾ ಮತ್ತು ಗ್ರಿಗೋರಿ ಲೊಮಕಿನ್ ಅವರನ್ನು 7-5, 6-3 ಸೆಟ್ಗಳಿಂದ ಸೋಲಿಸಿ ಸೆಮಿಫೈನಲಿಗೇರಿದ್ದಾರೆ. ಬೋಪಣ್ಣ ಅವರು ಯೂಕಿ ಭಾಂಬ್ರಿ ಜತೆಗೂಡಿ ಡಬಲ್ಸ್ನಲ್ಲಿ ಆಡಿದ್ದು ಈಗಾಗಲೇ ಹೊರಬಿದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.