Canada ಸೇನೆ ವೆಬ್ಸೈಟ್ ಹ್ಯಾಕ್: ‘ಇಂಡಿಯನ್ ಸೈಬರ್ ಫೋರ್ಸ್’ ಗುಂಪಿನ ಕೃತ್ಯ; ವರದಿ
Team Udayavani, Sep 28, 2023, 11:41 PM IST
ಹೊಸದಿಲ್ಲಿ: ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಗುರುವಾರ ಕೆನಡಾ ಸಶಸ್ತ್ರ ಪಡೆಯ ಅಧಿಕೃತ ವೆಬ್ಸೈಟ್ ಹ್ಯಾಕ್ ಆಗಿದೆ.
ಇದರಿಂದಾಗಿ ವೆಬ್ಸೈಟ್ ಕೆಲವು ಹೊತ್ತು ಕೆಲಸವನ್ನೇ ಮಾಡಿಲ್ಲ ಎಂದೂ ಹೇಳಲಾಗಿದೆ. ಸೇನೆಯ ವೆಬ್ಸೈಟ್ ಅನ್ನು “ಇಂಡಿಯನ್ ಸೈಬರ್ ಫೋರ್ಸ್’ ಎಂಬ ಭಾರತೀಯ ಹ್ಯಾಕರ್ಗಳ ಗುಂಪು ಹ್ಯಾಕ್ ಮಾಡಿದ್ದು, ಇದನ್ನು ಈ ಹ್ಯಾಕರ್ಗಳೇ ಎಕ್ಸ್ನಲ್ಲಿ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬ್ಲಿಂಕನ್ ಜತೆ ಚರ್ಚೆ?: ಈ ನಡುವೆ ಗುರುವಾರ ನ್ಯೂಯಾರ್ಕ್ಗೆ ಭೇಟಿ ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲ್ಲಿವನ್ರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಸಿದ್ದಾರೆ. ಅವರು ಅಮೆರಿಕ ವಿದೇಶಾಂಗ ಸಚಿವ ಬ್ಲಿಂಕನ್ರೊಂದಿಗೂ ಮಾತುಕತೆ ನಡೆಸಲಿದ್ದು, ಈ ವೇಳೆ ಭಾರತ-ಕೆನಡಾ ಬಿಕ್ಕಟ್ಟು ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಪಾಕಿಸ್ಥಾನ ಮತ್ತು ಖಲಿಸ್ಥಾನಿ ಭಯೋತ್ಪಾದಕರ ನಡುವಿನ ನಂಟು ಕುರಿತು ಈ ಹಿಂದೆಯೇ ನಾವು ಹಲವು ಬಾರಿ ಕೆನಡಾಕ್ಕೆ ಸಾಕ್ಷ್ಯಗಳನ್ನು ಒದಗಿಸಿದ್ದೆವು. ಆದರೆ ಕೆನಡಾ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಎನ್ಐಎ ನಿವೃತ್ತ ಡಿಜಿ ವೈ.ಸಿ.ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.