Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Team Udayavani, Sep 29, 2023, 9:12 AM IST

baana daariyalli review

ಬಾಲಕನಾಗಿದ್ದಾಗ ಪುನೀತ್‌ ರಾಜಕುಮಾರ್‌ ಹಾಡಿದ್ದ “ಬಾನದಾರಿಯಲಿ…’ ಹಾಡು ಇಂದಿಗೂ ಅದೆಷ್ಟೋ ಜನರಿಗೆ ಫೇವರೆಟ್‌. ಅದೇ ಹಾಡು ಈ ಪುಟ್ಟ ಮಗು ಲೀಲಾ ಮತ್ತು ಅವಳ ತಂದೆಗೂ ಅಚ್ಚುಮೆಚ್ಚು. “ಬಾನದಾರಿಯಲಿ…’ ಹಾಡನ್ನು ಗುನುಗುತ್ತಲೇ ಆಫ್ರಿಕಾ ಕಾಡಿನಲ್ಲಿ ಸ್ವಚ್ಛಂದವಾಗಿ ಆಡಿಕೊಂಡಿರುವ ಪ್ರಾಣಿಗಳನ್ನು ನೋಡಬೇಕೆಂಬ ತನ್ನ ಆಸೆಯನ್ನು ಅಪ್ಪನ ಮುಂದಿಡುವ ಲೀಲಾ, ನಿಧಾನವಾಗಿ ನಿದ್ದೆಗೆ ಜಾರುತ್ತಾಳೆ. ಹಾಗೆಯೇ ನಿಧಾನವಾಗಿ “ಬಾನದಾರಿಯಲಿ…’ ಹಾಡಿನ ಜೊತೆಜೊತೆಯಲ್ಲೇ ಸಿನಿಮಾದ ಕಥೆ ಕೂಡ ತೆರೆದುಕೊಳ್ಳುತ್ತದೆ. ಪುಟ್ಟ ಹುಡುಗಿ ಲೀಲಾ ಮನಸ್ಸಿನಲ್ಲಿದ್ದ ಆಸೆ ದೊಡ್ಡವಳಾದ ಮೇಲೆ ಈಡೇರುವುದು ಹೇಗೆ? ಯಾವಾಗ? ಎಲ್ಲಿ? ಎಂಬುದೇ ಈ ವಾರ ತೆರೆಗೆ ಬಂದಿರುವ “ಬಾನದಾರಿಯಲಿ…’ ಸಿನಿಮಾದ ಕಥೆಯ ಒಂದು ಎಳೆ.

ಇವಿಷ್ಟು ಹೇಳಿದ ಮೇಲೆ ಇದು ಅಪ್ಪ-ಮಗಳ ಸೆಂಟಿಮೆಂಟ್‌ ಸ್ಟೋರಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂಥದ್ದೊಂದು ಸೆಂಟಿಮೆಂಟ್‌ ಸ್ಟೋರಿ ಜೊತೆಗೊಂದು ಲವ್‌ ಸ್ಟೋರಿಯನ್ನು ಸೇರಿಸಿ “ಬಾನದಾರಿಯಲ್ಲಿ…’ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಗಣೇಶ್‌ ಮತ್ತು ಪ್ರೀತಂ ಗುಬ್ಬಿ ಸಿನಿಮಾ ಅಂದ್ರೆ ಎಮೋಶನ್ಸ್‌ ಕಡ್ಡಾಯ ಎಂಬ “ಸಿದ್ಧ್’ ಸೂತ್ರವಿರುವುದರಿಂದ, ಮೊದಲ ದೃಶ್ಯದಿಂದಲೇ “ಬಾನದಾರಿಯಲಿ…’ ಎಮೋಶನಲ್‌ ಜರ್ನಿ “ಲೀಲಾ’ಜಾಲವಾಗಿ ಶುರುವಾಗುತ್ತದೆ.

ಒಂದೆಡೆ ಲೀಲಾ (ರುಕ್ಮಿಣಿ ವಸಂತ್‌) ದೊಡ್ಡವಳಾದ ಮೇಲೆ ಸ್ವಿಮ್ಮಿಂಗ್‌ ಕೋಚ್‌ ಆಗುತ್ತಾಳೆ. ಮತ್ತೂಂದೆಡೆ ಸಿದ್ಧ್ (ಗಣೇಶ್‌) ಕ್ರಿಕೆಟರ್‌ ಆಗುತ್ತಾನೆ. ಒಮ್ಮೆ ಇಬ್ಬರೂ ಮುಖಾಮುಖೀಯಾಗುತ್ತಾರೆ. ಇವನಿಗೆ ಮೊದಲ ನೋಟದಲ್ಲೇ ಅವಳ ಮೇಲೆ ಪ್ರೀತಿಯಾಗುತ್ತದೆ. ಅಪ್ಪನೇ ಸರ್ವಸ್ವ ಅಪ್ಪ ಒಪ್ಪಿದರೆ ಮಾತ್ರ ಮದುವೆ ಎಂಬ ಹುಡುಗಿ ಲೀಲಾ ಹಿಂದೆ ಬೀಳುವ ಸಿದ್ಧ್, ಕೊನೆಗೂ ಅವಳಿಂದ ತಮ್ಮ ಪ್ರೀತಿಗೆ ಷರತ್ತುಬದ್ಧ ಅನುಮತಿ ಪಡೆದುಕೊಳ್ಳುತ್ತಾನೆ. ಎಲ್ಲವೂ ಸರಳ ರೇಖೆಯಲ್ಲಿ ಚಲಿಸುತ್ತಿದೆ ಎನ್ನುವಷ್ಟರಲ್ಲಿ, ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತದೆ. ಆಮೇಲೆ ನಡೆಯೋದೆಲ್ಲ ಹೈ ಡ್ರಾಮಾ… ಪ್ರೇಕ್ಷಕರ ಮನಮುಟ್ಟುವಂತೆ ಹೇಳಬಹುದಾದ, ಒಂದು ಸರಳ ಕಥೆಯನ್ನು ಆದಷ್ಟು ಸಂಕೀರ್ಣವಾಗಿಸಿ ಬೆಂಗಳೂರಿನಿಂದ ಮಂಗಳೂರು, ಅಲ್ಲಿಂದ ಆಫ್ರಿಕಾದವರೆಗೂ ತೆಗೆದುಕೊಂಡು ಹೋಗಿರುವುದು ನಿರ್ದೇಶಕರ “ಹೆಗ್ಗಳಿಕೆ’.

ಇನ್ನು ಕಲಾವಿದರ ಬಗ್ಗೆ ಹೇಳುವುದಾದರೆ, ಕ್ರಿಕೆಟರ್‌ ಆಗಿ ಗಣೇಶ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರುಕ್ಮಿಣಿ ವಸಂತ್‌ ತೆರೆಮೇಲೆ ಇರುವಷ್ಟು ಹೊತ್ತು ಇಷ್ಟವಾಗುತ್ತಾರೆ. ಗ್ರೀಷ್ಮಾ ನಾಣಯ್ಯ ತಮ್ಮ ಲವಲವಿಕೆಯಿಂದ ಪಾತ್ರಕ್ಕೆ ಒಂದಷ್ಟು ಕಳೆ ತುಂಬಿದ್ದಾರೆ. ರಂಗಾಯಣ ರಘು ಸುದೀರ್ಘ‌ ಪ್ರಯಾಣದಲ್ಲಿ ತಮ್ಮ ಪಾತ್ರವನ್ನು ಯಶಸ್ವಿಯಾಗಿ ಹೊತ್ತು ಸಾಗಿದ್ದಾರೆ.

ತಾಂತ್ರಿಕವಾಗಿ ಛಾಯಾಗ್ರಹಣ, ಸಂಕಲನ, ಸುಂದರ ಲೊಕೇಶನ್ಸ್‌ “ಬಾನದಾರಿಯಲಿ…’ ಕಾಣಬಹುದಾದ ದೊಡ್ಡ ಹೈಲೈಟ್ಸ್‌. ಅರ್ಜುನ್‌ ಜನ್ಯ ಸಂಗೀತವಿದ್ದರೂ, ಹಾಡುಗಳು ಗುನುಗುಡುವಂತಿಲ್ಲ. ಗಣೇಶ್‌, ಪ್ರೀತಂ ಗುಬ್ಬಿ ಕಾಂಬಿನೇಶನ್‌ನ ಮೂರು ಸಿನಿಮಾಗಳ ಜೊತೆಗೆ ಮತ್ತೂಂದು ಎಂಬಂತೆ ಸೇರ್ಪಡೆಯಾಗಿರುವ “ಬಾನದಾರಿಯನ್ನು…’ ಒಮ್ಮೆ ನೋಡಿಬರಬಹುದು.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.