Sapta Sagaradaache Ello ಎರಡನೇ ಭಾಗ ಬಿಡುಗಡೆ ಮುಂದಕ್ಕೆ; ಒಟಿಟಿಗೆ ಬಂತು ಸೈಡ್ 1
Team Udayavani, Sep 29, 2023, 11:05 AM IST
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಟಿಸಿ, ನಿರ್ಮಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಸ್ಪಂದನೆ ಪಡೆದಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆದ ಚಿತ್ರವು ತೆಲುಗಿನಲ್ಲೂ ‘ಸಪ್ತ ಸಾಗರಲೂ ದಾಟಿ’ ಎಂದು ತೆರೆಗೆ ಬಂದು, ಅಲ್ಲೂ ಉತ್ತಮ ಸ್ಕೋರ್ ಪಡೆದಿದೆ.
ಹೇಮಂತ್ ಎಂ ರಾವ್ ಅವರು ನಿರ್ದೇಶಿಸಿರುವ ಚಿತ್ರದ ಎರಡನೇ ಭಾಗವು ಅಕ್ಟೋಬರ್ 20ರಂದು ತೆರೆ ಕಾಣಲಿದೆ ಎಂದು ಈ ಮೊದಲು ಚಿತ್ರತಂಡ ಘೋಷಿಸಿಕೊಂಡಿತ್ತು. ಆದರೆ ಇದೀಗ ಹಲವು ಕಾರಣಗಳಿಂದ ಎರಡನೇ ಪಾರ್ಟ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.
ಹೌದು, ಮನು ಮತ್ತು ಪ್ರಿಯಾರ ಪ್ರೇಮ ಕಥೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಎರಡನೇ ಪಾರ್ಟ್ ಬಿಡುಗಡೆ ನಿಗದಿತ ದಿನಾಂಕಕ್ಕಿಂತ ಒಂದು ವಾರ ಮುಂದಕ್ಕೆ ಹೋಗಿದೆ. ಚಿತ್ರವು ಅಕ್ಟೋಬರ್ 27ರಂದು ತೆರೆಗೆ ಬರುತ್ತಿದೆ. ಸ್ವತಃ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರೇ ಇದನ್ನು ಖಚಿತಪಡಿಸಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಸೆಪ್ಟೆಂಬರ್ 1ರಂದು ತೆರೆಕಂಡಿತ್ತು. ಇದರ ತೆಲುವು ವರ್ಷನ್ ಸೆಪ್ಟೆಂಬರ್ 22ರಂದು ತೆರೆಗೆ ಬಂದು ಉತ್ತಮ ಇಂಪಾಕ್ಟ್ ಬೀರಿದೆ. ಮನು ಮತ್ತು ಪ್ರಿಯಾರ ನವಿರಾದ ಲವ್ ಸ್ಟೋರಿಯನ್ನು ಮೊದಲ ಭಾಗದಲ್ಲಿ ಕಂಡಿದ್ದ ಪ್ರೇಕ್ಷಕರು, ಹತ್ತು ವರ್ಷದ ಬಳಿಕ ಮನು ಜೀವನದಲ್ಲಿ ಏನಾಗಲಿದೆ ಎಂದು ನೋಡಲು ಅಕ್ಟೋಬರ್ 27ರವರೆಗೆ ಕಾಯಬೇಕಿದೆ.
A slight detour on our journey, but the destination remains the same! 😊
Sapta Sagaradaache Ello – Side B will be yours on the 27th of October. We hope you receive the next chapter with just as much love and support 🤗#SSESideBOct27 @hemanthrao11 @rukminitweets… pic.twitter.com/neFE17ZiLF
— Rakshit Shetty (@rakshitshetty) September 28, 2023
ಅಕ್ಟೋಬರ್ 19-20ರಂದು ಹಲವು ಭಾಷೆಗಳಲ್ಲಿ ಹಲವು ದೊಡ್ಡ ಚಿತ್ರಗಳಲ್ಲಿ ತೆರೆಗ ಬರಲಿದೆ. ಕನ್ನಡದಲ್ಲಿ ಶಿವಣ್ಣನ ‘ಘೋಸ್ಟ್’, ತಮಿಳಿನಲ್ಲಿ ವಿಜಯ್- ಲೋಕೇಶ್ ಕಣಗರಾಜ್ ಕಾಂಬಿನೇಶನ್ ನ ‘ಲಿಯೋ’, ತೆಲುಗಿನಲ್ಲಿ ರವಿ ತೇಜ ನಟನೆಯ ‘ಟೈಗರ್ ನಾಗೇಶ್ವರ ರಾವ್’, ಮತ್ತು ನಂದಮೂರಿ ಬಾಲಕೃಷ್ಣ ನಟನೆಯ ‘ಭಗವಂತ್ ಕೇಸರಿ’, ಹಿಂದಿಯಲ್ಲಿ ಟೈಗರ್ ಶ್ರಾಫ್ ನಟನೆಯ ‘ಗಣಪತ್’ ಮುಂತಾದ ಚಿತ್ರಗಳು ತೆರೆಗೆ ಬರಲಿದೆ.
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎರಡನೇ ಭಾಗದಲ್ಲಿ ಚೈತ್ರಾ ರಾವ್ ಅವರ ಪಾತ್ರವೂ ಇರಲಿದೆ.
ಒಟಿಟಿಗೆ ಬಂತು ಎಸ್ಎಸ್ಇ 1: ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಮೇಜಾನ್ ಪ್ರೈಮ್ ನಲ್ಲಿ ಶುಕ್ರವಾರ (ಸೆ.29) ಚಿತ್ರದ ಪ್ರಸಾರ ಆರಂಭವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.