Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ
ಮಾವುತ ಹೇಗಾದರೂ ಮಾಡಿ ಹೊರಡಬೇಕೆಂದು ಬೈಕ್ ಏರಿ ಕುಳಿತುಕೊಳ್ಳುತ್ತಾನೆ.
Team Udayavani, Sep 29, 2023, 3:52 PM IST
ನವದೆಹಲಿ: ಪ್ರಾಣಿಗಳು ಮಾನವನ ಜತೆ ಉತ್ತಮ ಬಾಂಧವ್ಯ ಹೊಂದಿರುವ ಘಟನೆ ಬಗ್ಗೆ ಓದಿರುತ್ತೀರಿ. ಅದೇ ರೀತಿ ತನ್ನ ಪ್ರೀತಿಯ ಮಾವುತ ಮತ್ತು ಆನೆಯ ನಡುವಿನ ಬಾಂಧವ್ಯದ ಕುರಿತು ಸೆರೆಯಾದ ಈ ವೈರಲ್ ವಿಡಿಯೋದ ಎಲ್ಲರ ಹೃದಯವನ್ನು ಗೆದ್ದಿದೆ.
ಇದನ್ನೂ ಓದಿ:CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ
ವೈರಲ್ ವಿಡಿಯೋದಲ್ಲಿ ಮಾವುತ ಬೈಕ್ ಏರಿ ಹೊರಡಲು ಸಿದ್ಧವಾಗುತ್ತಿದ್ದಂತೆಯೇ ಆನೆ ಓಡಿ ಬಂದು ತನ್ನ ಸೊಂಡಿಲಿನಿಂದ ಆತನನ್ನು ಮುದ್ದಾಡಿ ಬಿಟ್ಟು ಹೋಗದಂತೆ ತಡೆಯುತ್ತದೆ. ಕೊನೆಗೆ ಮಾವುತ ಬೈಕ್ ನಿಂದ ಕೆಳಗಿಳಿದಾಗ ಆನೆ ಮಾವುತನನ್ನು ಸೊಂಡಿಲಿನಿಂದ ಬಿಗಿದಪ್ಪಿಕೊಳ್ಳುತ್ತದೆ. ಮಾವುತ ಕೂಡಾ ಅದನ್ನು ಪ್ರೀತಿಯಿಂದ ಮೈದಡವಿ, ಸಂತೈಸುತ್ತಾನೆ. ಹಿಂದೆ-ಮುಂದೆ ಓಡಾಡಿ ಆನೆ ಸಂತಸ ವ್ಯಕ್ತಪಡಿಸುತ್ತದೆ.
ಏತನ್ಮಧ್ಯೆ ಮಾವುತ ಹೇಗಾದರೂ ಮಾಡಿ ಹೊರಡಬೇಕೆಂದು ಬೈಕ್ ಏರಿ ಕುಳಿತುಕೊಳ್ಳುತ್ತಾನೆ. ತಕ್ಷಣವೇ ಓಡಿಬಂದ ಆನೆ…ಮಾವುತನನ್ನು ತಡೆದು, ಆತನನ್ನು ಬೈಕ್ ನಿಂದ ಹಿಂದಕ್ಕೆ ಸರಿಸುವ ವಿಡಿಯೋ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.
ಈ ವಿಡಿಯೋವನ್ನು ಐಆರ್ ಎಎಸ್(Indian Railway accounts service) ಅಧಿಕಾರಿ ಅನಂತ್ ರುಪಾನ್ಗುಡಿ ಅವರು ಎಕ್ಸ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಆನೆ ಮತ್ತು ಮಾವುತನ ನಡುವಿನ ಬಾಂಧವ್ಯ ಎಂದು ಕ್ಯಾಪ್ಶನ್ ನೀಡಿದ್ದರು.
\
The bonding between the elephant and it’s caretaker – it won’t just let him go! ❤️ #elephants #bonding @Gannuuprem pic.twitter.com/AOkTmi7ceJ
— Ananth Rupanagudi (@Ananth_IRAS) September 27, 2023
ವಿಡಿಯೋಕ್ಕೆ ನೂರಾರು ಮಂದಿ ಕಮೆಂಟ್ ವ್ಯಕ್ತಪಡಿಸಿದ್ದಾರೆ. ನೋಡಿ ಆನೆ ಎಷ್ಟು ಸೌಮ್ಯವಾಗಿ ವರ್ತಿಸುತ್ತಿದೆ. ತಾನು ಬಲಿಷ್ಠ ಎಂದು ಗೊತ್ತಿದ್ದರೂ ಕೂಡಾ ಮಾವುತನ ಬಗೆಗಿನ ಅದರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.