World Cup Cricket;1983ರ ಬಳಿಕ ಭಾರತದ ಮಹತ್ಸಾಧನೆ


Team Udayavani, Sep 30, 2023, 6:50 AM IST

1ewww

ಚೊಚ್ಚಲ ವಿಶ್ವಕಪ್‌ ಗೆದ್ದು ಸರಿಯಾಗಿ 20 ವರ್ಷಗಳ ಬಳಿಕ ಭಾರತ ಮಹತ್ತರ ಸಾಧನೆಗೈದಿತು. 2003ರಲ್ಲಿ ಸೌರವ್‌ ಗಂಗೂಲಿ ಸಾರಥ್ಯದಲ್ಲಿ ಮೊದಲ ಸಲ ಕಣಕ್ಕಿಳಿದಿದ್ದ ಭಾರತ 2ನೇ ಸಲ ಫೈನಲ್‌ಗೆ ಲಗ್ಗೆ ಹಾಕಿತು. ಕಪ್‌ ಎತ್ತಲು ವಿಫ‌ಲವಾಯಿತು.

ಮೊದಲ ಬಾರಿಗೆ ವಿಶ್ವಕಪ್‌ ಪಂದ್ಯಾವಳಿ ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದಿತ್ತು. ನೆರೆಯ ಜಿಂಬಾಬ್ವೆ ಮತ್ತು ಕೀನ್ಯಾದಲ್ಲೂ ಕೆಲವು ಪಂದ್ಯಗಳನ್ನು ಆಡಲಾಯಿತು.

ಸರ್ವಾಧಿಕ 14 ತಂಡಗಳು
ದಾಖಲೆ ಸಂಖ್ಯೆಯ 14 ತಂಡಗಳು ಪಾಲ್ಗೊಂಡದ್ದು ಈ ಪಂದ್ಯಾ ವಳಿಯ ವಿಶೇಷ. ಎಂದಿನಂತೆ ಟೆಸ್ಟ್‌ ಮಾನ್ಯತೆ ಪಡೆದ 10 ತಂಡಗಳಿಗೆ ನೇರ ಪ್ರವೇಶ ನೀಡ ಲಾಯಿತು. ಉಳಿದ 4 ತಂಡಗಳನ್ನು ಐಸಿಸಿ ಟ್ರೋಫಿ ಪಂದ್ಯಾವಳಿ ಮೂಲಕ ಆರಿಸ ಲಾಯಿತು. ನೆದರ್ಲೆಂಡ್ಸ್‌ ಇಲ್ಲಿ ಚಾಂಪಿ ಯನ್‌ ಆಗಿತ್ತು. ಜತೆಗೆ ಕೆನಡಾದ ಪುನರಾಗಮನ ವಾಯಿತು. ಈ ಎರಡೂ ತಂಡಗಳಿಗೆ ಇದು 2ನೇ ಪಂದ್ಯಾವಳಿ ಆಗಿತ್ತು. ನಮೀಬಿಯಾಕ್ಕೆ ಮೊದಲ ಸಲ ವಿಶ್ವಕಪ್‌ ಬಾಗಿಲು ತೆರೆಯಿತು.

ಸೆಮಿಫೈನಲ್‌ಗೆ ಬಂದ ಕೀನ್ಯಾ!
“ಎ’ ವಿಭಾಗದಿಂದ ಆಸ್ಟ್ರೇಲಿಯ, ಭಾರತದ ಜತೆಗೆ ಜಿಂಬಾಬ್ವೆ ಸೂಪರ್‌-6 ಪ್ರವೇಶಿಸಿದ್ದು ಕೂಟದ ಅಚ್ಚರಿ ಎನಿಸಿತು. ಇಂಗ್ಲೆಂಡ್‌ ಮತ್ತು ಪಾಕಿಸ್ಥಾನ ಲೀಗ್‌ನಲ್ಲೇ ಹೊರಬಿದ್ದವು. ಇದಕ್ಕೂ ಮಿಗಿಲಾದ ಅಚ್ಚರಿ ಕಂಡುಬಂದದ್ದು “ಬಿ’ ವಿಭಾಗದಲ್ಲಿ. ಆತಿಥೇಯ ದಕ್ಷಿಣ ಆಫ್ರಿಕಾ, ಮೊದಲೆರಡು ಬಾರಿಯ ವೆಸ್ಟ್‌ ಇಂಡೀಸ್‌ ಬೇಗನೇ ಗಂಟು ಮೂಟೆ ಕಟ್ಟಿದವು. ಶ್ರೀಲಂಕಾ, ನ್ಯೂಜಿ ಲ್ಯಾಂಡ್‌ ಜತೆಗೆ ಆತಿಥೇಯ ದೇಶಗಳ ಲ್ಲೊಂದಾದ ಕೀನ್ಯಾ ಸೂಪರ್‌ ಸಿಕ್ಸ್‌ಗೆ ಮುನ್ನುಗ್ಗಿ ಬಂದಿತ್ತು. ಅಷ್ಟೇ ಅಲ್ಲ, ಮುಂದೆ ಸೆಮಿಫೈನಲ್‌ ಟಿಕೆಟ್‌ ಸಂಪಾದಿಸುವಲ್ಲೂ ಯಶಸ್ವಿಯಾಯಿತು!

ಸೂಪರ್‌-6 ಹಂತದಲ್ಲಿ ಉದುರಿ ಹೋದ ತಂಡಗಳೆಂದರೆ ನ್ಯೂಜಿಲ್ಯಾಂಡ್‌ ಮತ್ತು ಜಿಂಬಾಬ್ವೆ. ಸೆಮಿಫೈನಲ್‌ನಲ್ಲಿ ಭಾರತಕ್ಕೆ ಕೀನ್ಯಾ ಎದುರಾಯಿತು. ಡರ್ಬನ್‌ ಮುಖಾ ಮುಖಿಯಲ್ಲಿ ಸ್ಟೀವ್‌ ಟಿಕೊಲೊ ಪಡೆ ಇನ್ನೇನಾದರೂ ಏರುಪೇರು ಮಾಡೀತೇ ಎಂಬ ಆತಂಕ ಸಹಜವಾಗಿಯೇ ಇತ್ತು. ಆದರೆ ಅಂಥದ್ದೇನೂ ಸಂಭವಿಸಲಿಲ್ಲ. ಭಾರತವಿಲ್ಲಿ 91 ರನ್ನುಗಳ ಜಯ ಸಾಧಿಸಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ 48 ರನ್‌ ಅಂತರದಿಂದ ಶ್ರೀಲಂಕಾವನ್ನು ಕೆಡವಿತು.

ಆಸ್ಟ್ರೇಲಿಯ ಬೃಹತ್‌ ಮೊತ್ತ
ಫೈನಲ್‌ ತಾಣ ಜೊಹಾನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ. ಇದು ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡಲಿದೆ, ಮೊದಲು ಬ್ಯಾಟಿಂಗ್‌ ನಡೆಸಿದ ತಂಡಕ್ಕೆ ದೊಡ್ಡ ಮೊತ್ತ ಸಾಧ್ಯ ಮತ್ತು ಇದು ಸುರಕ್ಷಿತ ಎಂದೇ ವಿಶ್ಲೇಷಿಸಲಾಗಿತ್ತು. ಗಂಗೂಲಿಗೆ ಟಾಸ್‌ ಕೂಡ ಒಲಿಯಿತು. ಆದರೆ ಇಲ್ಲಿ ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿ ದೊಡ್ಡದೊಂದು ಎಡವಟ್ಟು ಮಾಡಿದರು. ಆಸೀಸ್‌ ಇದನ್ನೇ ಬಯಸಿತ್ತು. ನಾಯಕ ರಿಕಿ ಪಾಂಟಿಂಗ್‌, ಆ್ಯಡಂ ಗಿಲ್‌ಕ್ರಿಸ್ಟ್‌, ಡೆಮೀನ್‌ ಮಾರ್ಟಿನ್‌ ಸೇರಿಕೊಂಡು ಭಾರತದ ದಾಳಿಯನ್ನು ಧೂಳೀಪಟಗೈದರು. ಎರಡೇ ವಿಕೆಟಿಗೆ 359 ರನ್‌ ಸಂಗ್ರಹಗೊಂಡಿತು. ಇದರಲ್ಲಿ ಪಾಂಟಿಂಗ್‌ ಪಾಲು ಅಜೇಯ 140. ಗಂಗೂಲಿ ಬಳಗದ ಕಪ್‌ ಕನಸು ಈ ಹಂತದಲ್ಲೇ ಛಿದ್ರಗೊಂಡಿತು.

ಚೇಸಿಂಗ್‌ ವೇಳೆ ತೆಂಡುಲ್ಕರ್‌ (4) ವಿಕೆಟ್‌ ಬೇಗ ಬಿತ್ತು. ನಾಯಕ ಗಂಗೂಲಿ ಕೂಡ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲ ರಾದರು (24). ಮೊಹಮ್ಮದ್‌ ಕೈಫ್ ಸೊನ್ನೆ ಸುತ್ತಿದರು. ಆದರೆ ಡ್ಯಾಶಿಂಗ್‌ ಓಪನರ್‌ ವೀರೇಂದ್ರ ಸೆಹವಾಗ್‌ ಮಾತ್ರ ಸಿಡಿದು ನಿಂತಿದ್ದರು. ಇವರು ಕ್ರೀಸ್‌ನಲ್ಲಿರುವಷ್ಟು ಹೊತ್ತು ಆಸೀಸ್‌ಗೆ ಅಪಾಯವಿತ್ತು. ಕೊನೆಗೂ 24ನೇ ಓವರ್‌ನಲ್ಲಿ 82 ರನ್‌ ಮಾಡಿದ ಸೆಹವಾಗ್‌ 4ನೇ ವಿಕೆಟ್‌ ರೂಪದಲ್ಲಿ ರನೌಟ್‌ ಆಗು ವುದ ರೊಂದಿಗೆ ಭಾರತದ ಅಂತಿಮ ಭರವಸೆಯೂ ಕಮರಿತು.

39.2 ಓವರ್‌ಗಳಲ್ಲಿ ಭಾರತ 234ಕ್ಕೆ ಆಲೌಟ್‌ ಆಯಿತು. “ಕೋಲ್ಕತಾ ಪ್ರಿನ್ಸ್‌’ ಸೌರವ್‌ ಗಂಗೂಲಿಗೆ ಜೊಹಾನ್ಸ್‌ಬರ್ಗ್‌ ಕಿಂಗ್‌ ಆಗಿ ಮೆರೆಯಲು ಸಾಧ್ಯವಾಗಲಿಲ್ಲ. ಸರ್‌ ಗ್ಯಾರಿ ಸೋಬರ್ ಕೈಯಿಂದ ಸಚಿನ್‌ ತೆಂಡುಲ್ಕರ್‌ ಸರಣಿಶ್ರೇಷ್ಠ ಪ್ರಶಸ್ತಿ ಪಡೆದುದೊಂದೇ ಭಾರತದ ಪಾಲಿನ ಖುಷಿಯಾಗಿ ಉಳಿಯಿತು. ಆಸ್ಟ್ರೇಲಿಯ 3 ವಿಶ್ವಕಪ್‌ ಗೆದ್ದ ಮೊದಲ ತಂಡವೆನಿಸುವುದರ ಜತೆಗೆ ಟ್ರೋಫಿ ಉಳಿಸಿಕೊಂಡ ದ್ವಿತೀಯ ತಂಡವಾಗಿ ಮೂಡಿಬಂತು.

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.