Railways: ಗಾಲಿಕುರ್ಚಿ ಬಳಸುವವರಿಗೆ ರೈಲಿನಲ್ಲಿ ರ್‍ಯಾಂಪ್
Team Udayavani, Oct 1, 2023, 12:36 AM IST
ಹೊಸದಿಲ್ಲಿ: ಗಾಲಿಕುರ್ಚಿ ಬಳಸುವವರು ಹಾಗೂ ಹಿರಿಯ ನಾಗರಿ ಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇಯು ಮಹತ್ವದ ಹೆಜ್ಜೆಯಿಟ್ಟಿದ್ದು, ಇನ್ನು ಮುಂದೆ ರೈಲುಗಳಲ್ಲೂ ರ್‍ಯಾಂಪ್‌ಗ್ಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ತಿಳಿಸಿದ್ದಾರೆ. ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ರ್‍ಯಾಂಪ್‌ಗ್ಳ ಚಿತ್ರ ಗಳನ್ನು ಬಿಡುಗಡೆಗೊಳಿಸಿದ ಸಚಿವ ವೈಷ್ಣವ್ ಇದನ್ನು ಸದ್ಯಕ್ಕೆ ಚೆನ್ನೈ ರೈಲು ನಿಲ್ದಾಣದಲ್ಲಿ ಬಳಸಲಾಗುತ್ತಿದೆ. ರ್‍ಯಾಂಪ್‌ನ ಅಗತ್ಯವಿರುವ ಪ್ರಯಾಣಿಕರಿಗೆ ಇದರಿಂದ ಬಹಳ ಅನುಕೂಲವಾಗುತ್ತಿದೆ ಎಂದಿದ್ದಾರೆ.
ಬಾಗಿಲ ಬಳಿ ಅಳವಡಿಕೆ: ಶೀಘ್ರವೇ ನಾವು ವಂದೇ ಭಾರತ್ ರೈಲುಗಳಲ್ಲಿ ಇದನ್ನು ಪರಿಚಯಿಸಲಿದ್ದೇವೆ. ಅನಂತರದಲ್ಲಿ ಇತರ ಎಲ್ಲ ರೈಲುಗಳಲ್ಲೂ ರ್‍ಯಾಂಪ್ ಅಳವಡಿಸಲಾಗುತ್ತದೆ ಎಂದಿದ್ದಾರೆ. ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲೇ ತಮಗೆ ವ್ಹೀಲ್‌ಚೇರ್ ಅಗತ್ಯವಿದೆ ಎಂಬುದನ್ನು ಅವರು ನಮೂದಿಸುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಅನಂತರ ಆಯಾ ರೈಲು ನಿಲ್ದಾಣಗಳಿಗೆ ಅಲರ್ಟ್ ಕಳುಹಿಸಿ, ರ್‍ಯಾಂಪ್ ಸಿದ್ಧಪಡಿಸಿ ಇಡುವಂತೆ ಸೂಚಿಸ ಲಾಗುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ. ರೈಲಿನ ಬಾಗಿಲಿನ ಕೆಳ ಭಾಗದಲ್ಲಿ ರ್‍ಯಾಂಪ್ ಅನ್ನು ಅಳವಡಿಸಲಾಗುತ್ತದೆ. ಅದನ್ನು ಬಳಸಿ ಕೊಂಡು ಗಾಲಿಕುರ್ಚಿಯಲ್ಲಿ ಪ್ರಯಾಣಿಕರು ಕೆಳಗಿಳಿಯಬಹುದು ಎಂದಿದ್ದಾರೆ.
14 ನಿಮಿಷಕ್ಕೊಮ್ಮೆ ಸ್ವತ್ಛತೆ: ಅ.1ರಿಂದ ರೈಲುಗಳ ಕ್ಷಿಪ್ರ ಸ್ವತ್ಛತೆಗಾಗಿ “14 ನಿಮಿಷಗಳ ಪವಾಡ’ ಎಂಬ ಪರಿಕಲ್ಪನೆಯನ್ನು ಜಾರಿ ಮಾಡಲಾಗುತ್ತಿದೆ. ಅದರಂತೆ ಇದೇ ಮೊದಲ ಬಾರಿಗೆ ಕೇವಲ 14 ನಿಮಿಷಗಳಲ್ಲಿ ರೈಲುಗಳನ್ನು ಸ್ವತ್ಛಗೊಳಿಸಲಾಗುತ್ತದೆ. ಆರಂಭದಲ್ಲಿ 29 ವಂದೇ ಭಾರತ್ ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.