TTD: ತಿರುಮಲಕ್ಕೆ ಭಕ್ತರ ದಂಡು: ಟೋಕನ್ ವಿತರಣೆ ಸ್ಥಗಿತ
Team Udayavani, Oct 1, 2023, 7:43 PM IST
ತಿರುಪತಿ: ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಶ್ರೀ ಬಾಲಾಜಿಯ ದರ್ಶನ ಪಡೆಯಲು ಕನಿಷ್ಠ 48 ಗಂಟೆಗಳು ಸಾಲಿನಲ್ಲಿ ಕಾಯುವುದು ಅನಿವಾರ್ಯವಾಗಿದೆ.
ಶನಿವಾರ ಮತ್ತು ಭಾನುವಾರ ದರ್ಶನಕ್ಕೆ 5 ಕಿ.ಮೀ. ಉದ್ದದ ಸರತಿ ಸಾಲು ಕಂಡುಬಂದಿತು. ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ತುಂಬಿ ಹೋಗಿವೆ. ಶನಿವಾರ, ಭಾನುವಾರ ಮತ್ತು ಅ.2ರ ಗಾಂಧಿ ಜಯಂತಿ ಪ್ರಯುಕ್ತ ರಜೆಗಳ ಹಿನ್ನೆಲೆಯಲ್ಲಿ ಭಕ್ತರ ದಂಡು ತಿರುಪತಿಗೆ ಹರಿದುಬಂದಿದೆ. ವಾಹನ ತಪಾಸಣಾ ಸ್ಥಳ ಅಲಿಪಿರಿಯಲ್ಲೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ. ಭಕ್ತರ ಸಂದಣಿ ನಿಯಂತ್ರಿಸಲು ಅ.1, 7, 8, 14 ಮತ್ತು 15ರ ಸರ್ವ ದರ್ಶನ ಟೋಕನ್ಗಳನ್ನು ವಿತರಿಸುವುದನ್ನು ಟಿಟಿಡಿ ಸ್ಥಗಿತಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.