Asian Games:100 ಮೀಟರ್ ಹರ್ಡಲ್ಸ್‌ನಲ್ಲಿ ವಿವಾದಾತ್ಮಕ ಕ್ಷಣ!;ಬೆಳ್ಳಿ ಗೆದ್ದ ಭಾರತದ ಜ್ಯೋತಿ
ನಾಟಕೀಯ 'ಅನರ್ಹತೆ' ನಂತರ...
Team Udayavani, Oct 1, 2023, 8:03 PM IST
ಹ್ಯಾಂಗ್‌ಝೂ: ಏಷ್ಯನ್ ಗೇಮ್ಸ್ ನ ಭಾನುವಾರ ಮಹಿಳೆಯರ 100 ಮೀಟರ್ ಹರ್ಡಲ್ಸ್ ವಿವಾದಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.
ಚೀನಾದ ಹರ್ಡಲರ್ ವು ಯಾನ್ನಿ ತಪ್ಪು ಆರಂಭಕ್ಕಾಗಿ ಅನರ್ಹಗೊಂಡಿದ್ದರು. ಉಳಿದ ಹಡ್ಲರ್‌ಗಳಲ್ಲಿ ಚೀನಾದ ಯಾನ್ನಿಯನ್ನು ಅನುಸರಿಸಿದ ಕಾರಣ ಭಾರತದ ಜ್ಯೋತಿ ಯರ್ರಾಜಿ ಕೂಡ ಅನರ್ಹಗೊಂಡಿದ್ದಾರೆಂದು ತೋರಿಬಂತು. ಯನ್ನಿ ಮತ್ತು ಯರ್ರಾಜಿ ಇಬ್ಬರೂ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದರು.
ಭಾರಿ ಚರ್ಚೆಯ ಬಳಿಕ ವು ಯನ್ನಿ ಮತ್ತು ಜ್ಯೋತಿ ಯರ್ರಾಜಿಗೆ ಓಡಲು ಅವಕಾಶ ನೀಡಲಾಯಿತು.ಯಾನ್ನಿ ಮತ್ತು ಜ್ಯೋತಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಮುಗಿಸಿದರು. ಚೀನಾದ ಲಿನ್‌ಗೆ ಚಿನ್ನದ ಪದಕ ಖಚಿತವಾಯಿತು, ಯಾನ್ನಿ ಅವರ ಬೆಳ್ಳಿ ಮತ್ತು ಯರ್ರಾಜಿ ಅವರ ಕಂಚು ನಿರ್ಣಯ ಅಂತಿಮವಾಗಬೇಕಾಯಿತು.
ಕೊನೆಗೆ ಎರಡನೇ ಸ್ಥಾನದಲ್ಲಿ ಚೀನಾದ ವು ಯಾನ್ನಿ ಅನರ್ಹಗೊಂಡಿದ್ದರಿಂದ ಜ್ಯೋತಿ ಯರ್ರಾಜಿ ಕಂಚಿನ ಪದಕ ಬೆಳ್ಳಿ ಪದಕವಾಗಿ ಮೇಲ್ದರ್ಜೆಗೇರಿಸಲಾಯಿತು.
ಸಮಸ್ಯೆ ಏನು?
ಜ್ಯೋತಿ ಅವರು ಲೇನ್ 5 ರಲ್ಲಿ, ವು ಲೇನ್ 4 ರಲ್ಲಿ ಇದ್ದರು. ಅಥ್ಲೀಟ್‌ಗಳು ತಮ್ಮ ರನ್ನಿಂಗ್ ಬ್ಲಾಕ್‌ಗಳಿಗೆ ಪ್ರವೇಶಿಸಿ ಓಟವನ್ನು ಪ್ರಾರಂಭಿಸಲು ಸಿದ್ಧರಾಗಿದ್ದರು. ಸ್ಟಾರ್ಟ್ ಗನ್ ಆಫ್ ಆಗುವ ಮೊದಲು, ವೂ ಬ್ಲಾಕ್‌ಗಳಿಂದ ಹೊರಹೋಗಿಯಾಗಿತ್ತು, ತತ್ ಕ್ಷಣ ಓಟವನ್ನು ನಿಲ್ಲಿಸಲಾಯಿತು.
ಜ್ಯೋತಿ ಅವರು ಪ್ರತಿಭಟಿಸಿ ತನ್ನ ಪಕ್ಕದ ಲೇನ್ ಕಡೆಗೆ ಸನ್ನೆ ಮಾಡಿ ವೂ ತಪ್ಪು ಆರಂಭಿಸಿದ್ದಾಳೆ ಎಂದು ಸೂಚಿಸಿದರು.
ಅಧಿಕಾರಿಗಳು, ಟ್ರ್ಯಾಕ್‌ಸೈಡ್ ಪರದೆಯಲ್ಲಿ ಹಲವು ಬಾರಿ ರಿಪ್ಲೈ ಗಳನ್ನು ನೋಡಿದ ನಂತರ, ವೂ ಡೀಫಾಲ್ಟ್ ಆಗಿದ್ದಾರೆ ಎಂದು ಕೆಂಪು ಕಾರ್ಡ್ ತೋರಿಸಿದರು. ಕೆಂಪು ಕಾರ್ಡ್ ತೋರಿಸಿದರೆ ಅನರ್ಹ. ಓಟದಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ. ಅಧಿಕಾರಿ ಜ್ಯೋತಿ ಅವರಿಗೂ ರೆಡ್ ಕಾರ್ಡ್ ತೋರಿಸಿದರು. ಅವರು ತತ್ ಕ್ಷಣವೇ ನಿರ್ಧಾರದ ವಿರುದ್ಧ ಪ್ರತಿಭಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.