Bantwal; ತೋಟದಲ್ಲಿ ಕೂಲಿ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು
Team Udayavani, Oct 1, 2023, 9:02 PM IST
ಬಂಟ್ವಾಳ: ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ತೋಟದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಯ ಉಳ್ಳಾಲ ತಾಲೂಕಿನ ಕುರ್ನಾಡು ಎಂಬಲ್ಲಿ ನಡೆದಿದೆ. ಕುರ್ನಾಡು ಗ್ರಾಮದ ಹೂವಿನಕೊಪ್ಪಲು ನಿವಾಸಿ ವಿಶ್ವನಾಥ ( 52) ಮೃತಪಟ್ಟ ವ್ಯಕ್ತಿ.
ಅವರು ಚೇಳೂರು ಗ್ರಾಮದ ಬರೆ ಎಂಬಲ್ಲಿ ವಿಟ್ಠಲ ಬೆಳ್ಚಾಡ ಅವರ ಮನೆಗೆ ಕೂಲಿ ಕೆಲಸಕ್ಕೆಂದು ಹೋಗಿದ್ದರು. ಅಲ್ಲಿ ಹರಿಶ್ಚಂದ್ರ ಎಂಬವರ ಜತೆಯಲ್ಲಿ ಅಡಿಕೆ ತೋಟಕ್ಕೆ ದನದ ಗೊಬ್ಬರವನ್ನು ಹಾಕುತ್ತಿದ್ದರು. ಸಂಜೆ ಸುಮಾರು 5 ಗಂಟೆ ವೇಳೆಗೆ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೆಲಕ್ಕೆ ಕುಸಿದು ಬಿದ್ದು ಮೂರ್ಚೆ ಹೋಗಿದ್ದರು. ಕೂಡಲೇ ಮಂಗಳೂರು ಕಣಚ್ಚೂರು ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಲಾಯಿತಾದರೂ ಅವರು ದಾರಿ ಮಧ್ಯ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಬಿ.ಪಿ.ಖಾಯಿಲೆ ಇದ್ದು ಮಾತ್ರೆ ತೆಗೆದು ಕೊಳ್ಳುತ್ತಿದ್ದರು. ಆದರೆ ಇವರಿಗೆ ಬಿ.ಪಿ.ಸಮಸ್ಯೆಯಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರಾ? ಅಥವಾ ಬೇರೆ ಕಾರಣದಿಂದ ಮೃತಪಟ್ಟಿದ್ದಾರಾ ಎಂಬುದರ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.