![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 2, 2023, 12:15 AM IST
ಮಲ್ಪೆ: ಸರಣಿ ರಜೆಯ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ನಲ್ಲಿ ರವಿವಾರ ಭಾರೀ ಜನ ಸಂದಣಿ ಕಂಡು ಬಂದಿದೆ. ಮಲ್ಪೆ ಬೀಚ್‌ನಿಂದ ಸೀವಾಕ್‌ವರೆಗೆ ಸುಮಾರು ಮೂರು ಕಿ.ಮೀ ಉದ್ದಕ್ಕೆ ಕಡಲತೀರದಲ್ಲಿ ಜನರ ಸಾಲು ಕಂಡು ಬಂದಿದೆ.
ಬಲೆ ದಾಟಿ ಸಮುದ್ರಕ್ಕೆ
ಮಲ್ಪೆ ಬೀಚ್ ಪ್ರವಾಸಿಗರಿಗೆ ಇನ್ನೂ ಮುಕ್ತವಾಗಿಲ್ಲದಿದ್ದರೂ ಪ್ರವಾಸಿಗರು ಮಾತ್ರ ಕಡಲತೀರದಲ್ಲಿ ಉದ್ದಕ್ಕೆ ಕಟ್ಟಿದ ಬಲೆ ದಾಟಿ ನೀರಿಗಿಳಿದು ಆಟವಾಡುತ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಮಡಿಕೇರಿ ಸೇರಿದಂತೆ ಹೊರರಾಜ್ಯದಿಂದಲೂ ಹೆಚ್ಚಿನ ಪ್ರವಾಸಿಗರು ಮಲ್ಪೆ ಬೀಚ್ ಕಡೆ ಮುಖ ಮಾಡಿದ್ದಾರೆ.
ರವಿವಾರ ಬೆಳಗ್ಗೆಯಿಂದಲೇ ಜನ ಬೀಚ್‌ಗೆ ಆಗಮಿಸಿ ಸಮುದ್ರದಲ್ಲಿ ಬಹುದೂರದವರೆಗೆ ಸಾಗಿ ನೀರಾಟ ವಾಡುತ್ತಿದ್ದರು. ಇಲ್ಲಿನ ಜೀವರಕ್ಷಕರು ಎಚ್ಚರಿಕೆಯನ್ನು ನೀಡುತ್ತಿದ್ದರೂ ಇನ್ನೊಂದು ಕಡೆಯಲ್ಲಿ ಸಮುದ್ರಕ್ಕೆ ಇಳಿಯುತ್ತಿದ್ದರು.
ಸೀವಾಕ್‌ನಲ್ಲೂ ಜನ
ಸೀವಾಕ್‌ನಲ್ಲೂ ಬೆಳಗ್ಗಿನಿಂದ ಜನ ಸಮೂಹ ಕಂಡು ಬಂದಿದೆ. ಮಧ್ಯಾಹ್ನದ ಬಳಿಕ ಸೀವಾಕ್ ಉದ್ಯಾನವನದಲ್ಲಿ ಜನರು ಸುತ್ತಾಡುತ್ತಿದ್ದರು.
ಸಮುದ್ರ ಸಹಜ ಸ್ಥಿತಿಗೆ
ವಾಯುಭಾರ ಕುಸಿತದಿಂದಾಗಿ ಕಳೆದ ಮೂರ್‍ನಾಲ್ಕು ದಿನಗಳಿಂದ ಅರಬಿ ಸಮುದ್ರದಲ್ಲಿ ಚಂಡಮಾರುತ ಕಂಡು ಬಂದಿದ್ದು ಇದೀಗ ನಿಧಾನವಾಗಿ ಸಮುದ್ರ ಸಹಜ ಸ್ಥಿತಿಗೆ ಮರಳುತ್ತಿದೆ.
ಸಮುದ್ರ ಮಧ್ಯೆ ಬಲವಾದ ಗಾಳಿ ಬೀಸುವುದರಿಂದ ಬಹುತೇಕ ಮೀನುಗಾರರು ಮೀನುಗಾರಿಕೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ದಡ ಸೇರಿದ್ದರು. ಬಹುತೇಕ ಆಳಸಮುದ್ರದಲ್ಲಿರುವ ದೋಣಿಗಳು ಮೀನುಗಾರಿಕೆ ನಡೆಸಲಾಗದೆ ಸಮೀಪದ ಬಂದರನ್ನು ಆಶ್ರಯಿಸಿತ್ತು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.