Daily Horoscope: ವಿಶ್ರಾಂತಿ ಎಂಬ ಶಬ್ದಕ್ಕೂ ನಿಮಗೂ ದೂರ


Team Udayavani, Oct 2, 2023, 7:30 AM IST

1-Mondy

ಮೇಷ: ಅವಸರದ ಹೆಜ್ಜೆ ಹಾಕುವ ಅಭ್ಯಾಸವನ್ನು ಬಿಡಿ. ಎಲ್ಲ ಕಾರ್ಯಗಳೂ ಸಮಯಕ್ಕೆ ಸರಿ ಯಾಗಿಯೇ ನಡೆಯುತ್ತವೆ.ಉದ್ಯೋಗ ಸ್ಥಾನದಲ್ಲಿ ಕ್ಲಪ್ತ ಕಾಲದಲ್ಲಿ ಕೆಲಸ ಮುಗಿಸಲು ಮೇಲಿನವರ ಆಗ್ರಹ. ಕೃಷಿ ಕಾರ್ಯದಲ್ಲಿ ಒದಗಿರುವ ವಿಘ್ನಗಳು ದೂರ.

ವೃಷಭ: ಹಿಂದೆ ಮುಂದೆ ನೋಡದೆ ಮುನ್ನುಗ್ಗ ದಿರಿ. ಹಿತಶತ್ರುಗಳ ಬಾಧೆಯ ಬಗ್ಗೆ ಎಚ್ಚರ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಅಪವಾದ ಹೊರಿಸುವವರ ಬಗ್ಗೆ ಜಾಗರೂಕರಾಗಿರಿ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಸರಕಾರಿ ಅಧಿಕಾರಿಗಳಿಂದ ವಿಳಂಬಿತ ಸ್ಪಂದನೆ.

ಮಿಥುನ: ವಿಶ್ರಾಂತಿ ಎಂಬ ಶಬ್ದಕ್ಕೂ ನಿಮಗೂ ದೂರ. ಒಂದೇ ಕಾರ್ಯಕ್ಕೆ ಹಲವು ಬಾರಿ ಓಡಾಡುವ ಅನಿವಾರ್ಯತೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವ ಒತ್ತಡ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಶ್ಲಾಘನೆ. ಸಹೋದ್ಯೋಗಿಗಳ ಪೂರ್ಣ ಸಹಕಾರ.

ಕರ್ಕಾಟಕ: ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ.ಹವಾಮಾನದ ಏರುಪೇರಿ ನಿಂದ ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಆತಂಕ. ಸ್ವಂತ ವ್ಯವಹಾರ ನಡೆಸುತ್ತಿರುವವರಿಗೆ ತೆರಿಗೆ ವಿವರ ಸಲ್ಲಿಸುವ ಅವಸರ. ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ.

ಸಿಂಹ: ಕಾಲಬಾಧೆಯಿಲ್ಲದೆ ಅಭಿವೃದ್ಧಿ ನಿರಾತಂಕ. ಉದ್ಯೋಗ ಕ್ಷೇತ್ರದಲ್ಲಿ ಎಸಗಿದ ಸಾಧನೆಗೆ ಪ್ರಶಂಸೆ. ಸಹೋದ್ಯೋಗಿಗಳಿಗೆ ಹರ್ಷ. ವಿಸ್ತರಣೆ ಗೊಂಡಿರುವ ಸ್ವಂತ ವ್ಯವಹಾರ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸುವ ಭರಾಟೆ. ಹಿರಿಯರ ಆರೋಗ್ಯದಲ್ಲಿ ಕೊಂಚ ಏರುಪೇರು.

ಕನ್ಯಾ: ಹಿರಿಯರ ಆರೋಗ್ಯ ಸುಧಾರಣೆ. ಉದ್ಯೋಗ ನಿಮಿತ್ತ ಅನಿವಾರ್ಯವಾದ ಸಣ್ಣ ಪ್ರವಾಸ. ಆಪ್ತರಿಂದ ಅಪೇಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ. ಸಾಕುಪ್ರಾಣಿಗಳಿಗೆ ಅನಾರೋಗ್ಯವಾಗಿ ಅನಿರೀಕ್ಷಿತ ಧನವ್ಯಯ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ.

ತುಲಾ: ಚಾಂಚಲ್ಯವನ್ನು ದೂರವಿಡುವ ಪ್ರಯತ್ನದಲ್ಲಿ ಯಶಃಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳಿಂದ ಸಹಕಾರ. ಅಕಸ್ಮಾತ್‌ ಆತ್ಮೀಯರ ಭೇಟಿ. ಕಟ್ಟಡ ನಿರ್ಮಾಣ ನೌಕರರಿಗೆ ಆದಾಯ ವೃದ್ಧಿ. ಕೃಷಿ ಕಾರ್ಮಿಕರಿಗೆ ಉತ್ತಮ ಆದಾಯ.

ವೃಶ್ಚಿಕ: ಮನೆಯಲ್ಲಿ ಸಹಕಾರದ ಸನ್ನಿವೇಶ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳಿಂದ ಸಹಕಾರ. ಮೇಲಧಿಕಾರಿಗಳ ಉತ್ತೇಜನ. ಸ್ವಂತ ವ್ಯವಹಾರಸ್ಥರಿಗೆ ತಕ್ಕಮಟ್ಟಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ ಸಾಮಾನ್ಯ ಲಾಭ.

ಧನು: ಉದ್ಯೋಗ ಕ್ಷೇತ್ರದಲ್ಲಿ ಸಾಮಾನ್ಯ ವಾತಾವರಣ. ಕಾರ್ಯಗಳು ನಿರಾತಂಕವಾಗಿ ಮುನ್ನಡೆ. ಆಪ್ತರ ಸಹಾಯ ಸಕಾಲದಲ್ಲಿ ಲಭಿಸಿ ಸಮಾಧಾನ. ಸ್ವಂತ ವ್ಯವಹಾರಸ್ಥರಿಗೆ ಆದಾಯ ತೃಪ್ತಿಕರ. ಉತ್ಪನ್ನಗಳಿಗೆ ಬೇಡಿಕೆ ಮಧ್ಯಮ ವೇಗದಲ್ಲಿ ವೃದ್ಧಿ.

ಮಕರ: ಪೂರ್ಣಪ್ರಮಾಣದಲ್ಲಿ ದೈವಾನುಗ್ರಹ ಪ್ರಾಪ್ತಿ. ಮಾತೃಸ್ಥಾನದಲ್ಲಿರುವ ಹಿರಿಯ ಬಂಧು ವಿನಿಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡ. ಸಹೋದ್ಯೋಗಿಗಳಿಂದ ಸಹಾಯ. ಮಕ್ಕಳ ಭವಿಷ್ಯದ ಚಿಂತನೆ. ಸೋದರ, ಸೋದರಿಯ ಪ್ರೋತ್ಸಾಹ.

ಕುಂಭ: ಅಧಿಕಾರಿ ವರ್ಗದವರಿಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ಗೌರವ ಪ್ರಾಪ್ತಿ. ಮುದ್ರಣ ಸಾಮಗ್ರಿ, ಸ್ಟೇಶನರಿ ಮೊದಲಾದ ವಿತರಕರಿಗೆ ಬೇಡಿಕೆ ಪೂರೈ ಸುವ ತರಾತುರಿ. ಮುದ್ರಣಾಲಯ ವ್ಯವಹಾರಸ್ಥರಿಗೆ ಲಾಭ. ಸೇವಾಕಾರ್ಯಗಳಿಗೆ ಸಮಾಜದಿಂದ ನಿರಂತರ ಕರೆ.

ಮೀನ: ಶುಭದಿನ. ಸಂಚಿತ ಪುಣ್ಯಕರ್ಮಗಳ ಶುಭಫ‌ಲ ಪ್ರಾಪ್ತಿ. ಉದ್ಯೋ ಗ ಕ್ಷೇತ್ರದಲ್ಲಿ ನಿರಾತಂಕದ ಮುನ್ನಡೆ. ಸರಕಾರಿ ಅಧಿಕಾರಿಗಳಿಂದ ಹಾಗೂ ನೌಕರರಿಂದ ಉತ್ತಮ ಸ್ಪಂದನೆ. ಗ್ರಾಹಕ ವರ್ಗಕ್ಕೆ ಹರ್ಷ. ವ್ಯವಹಾರ ನಿರ್ವಹಣೆಗೆ ಸಂಗಾತಿಯ ಹಾಗೂ ಕುಟುಂಬದ ಸದಸ್ಯರಿಂದ ಪರ್ಯಾಪ್ತ ಸಹಕಾರ. ಧಾರ್ಮಿಕ ಕಾರ್ಯಗಳ ಸಮರ್ಪಕ ನಿರ್ವಹಣೆಯಿಂದ ಮನಸ್ಸಂತೋಷ.

ಟಾಪ್ ನ್ಯೂಸ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.