UV Fusion: ಯಜ್ಞೋಪವೀತ ಧಾರಣೆ

Team Udayavani, Oct 2, 2023, 2:16 PM IST

13–fusion-samaveda

ಉಪನಯನ ಎಂದರೆ ದ್ವಿಜತ್ವ ಪ್ರಧಾನ. ಯಜ್ಞೋವೀತ ದಾರಣಾ ಸಂಸ್ಕಾರ ಉಪಕ್ರಮಣ ಕ್ರಿಯಾವಿಧಿ ಇದರ ಮುಖಾಂತರವಾಗಿ ಆಧ್ಯಾತ್ಮಿಕ ಜ್ಞಾನದ ವರ್ಗಾವಣೆಯನ್ನು ಸಂಕೇತಿಸಲು ಉಪಕ್ರಮಿಸುವ ವಟುವಿಗೆ ಒಂದು ಪವಿತ್ರ ದಾರವನ್ನು ತೊಡಿಸಲಾಗುತ್ತದೆ. ಇದನ್ನೇ ಯಜ್ಞೋಪವೀತ ದಾರಣಕರ್ಮ ಎನ್ನಲಾಗುತ್ತದೆ.

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್‌, ಆಯುಷ್ಯಮುಘ್ರ್ಯಂ ಪ್ರತಿಮಂಚಶುಭ್ರ ಯಜ್ಞೋಪವೀತಂ ಬಲಮಸ್ತು ತೇಜಃ ಎಂಬ ಮಂತ್ರದೊದಿಗೆ ವಟುವಿಗೆ ಉಪವೀತ ಸಂಸ್ಕಾರ(ದಿಜತ್ವ ಪ್ರಧಾನ) ಮಾಡಲಾಗುತ್ತದೆ.

ಉಪನಯನ ಎಂದರೆ ಆಚಾರ್ಯರ ಸಮೀಪಕ್ಕೆ ಉಪದೇಶಕ್ಕಾಗಿ ಆಗಮಿಸುವುದು ಎಂದರ್ಥ. ಇದರಲ್ಲಿ ಮುಖ್ಯವಾದದ್ದು ಗಾಯತ್ರೀ ಮಂತ್ರೋಪದೇಶ ಹಾಗೂ ಬ್ರಹ್ಮಚರ್ಯವ್ರತ ದೀಕ್ಷೆ. ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಎಂಬ ತ್ರಿವರ್ಣದವರಿಗೆ ಮಾತ್ರ ಈ ಸಂಸ್ಕಾರವನ್ನು ಮಾಡಲಾಗುತ್ತದೆ. ಈ ಮೂರೂ ವರ್ಣಗಳಲ್ಲಿಯೂ ವಟುವಿಗೆ ಎಷ್ಟು ವಯಸ್ಸಾಗಿರಬೇಕು ಎಂಬ ನಿಬಂಧನೆ ಹೇರಲಾಗಿದೆ. ಈ ವರ್ಣಗಳಲ್ಲಿ ಬ್ರಹ್ಮಚಾರಿಯ ಉಡುಗೆ ತೊಡುಗೆಗಳಲ್ಲಿ ನಾವು ವ್ಯತ್ಯಾಸವನ್ನು ಗಮನಿಸಬಹುದು. ಈ ಸಂಸ್ಕಾರದಲ್ಲಿ ವಟುವಿಗೆ ಯಜ್ಞೋಪವೀತ ಧಾರಣೆಯನ್ನು ಮಾಡಿ ಆತನು ಪಾಲಿಸಬೇಕಾದ ಧರ್ಮಗಳ ಕುರಿತ ಉಪದೇಶವನ್ನು ಉಪವೀತನಿಗೆ ನೀಡಲಾಗುತ್ತದೆ. ಅನಂತರ ಬ್ರಹ್ಮಚಾರಿಯಾಗಿ ಆತ ಧರ್ಮವನ್ನು ಪಾಲಿಸಬೇಕು. ಭಿಕ್ಷೆಯಿಂದ ಜೀವಿಸಬೇಕು.

ತ್ರಿಸಂಧ್ಯಾಕಾಲದಲ್ಲಿ ಆತ ಗಾಯತ್ರೀ ಮಂತ್ರ ಪೂರ್ವಕ ಸಂಧ್ಯಾವದನೆಯನ್ನು ಮಾಡಬೇಕು. ವೇದಾಧ್ಯಯನವೇ ವಟುವಿ ಆದ್ಯ ಕರ್ತವ್ಯವಾಗಿರಬೇಕು. ಬ್ರಾಹ್ಮಣನಿಗೆ ವಸಂತ ಋತುವಿನಲ್ಲೂ ಕ್ಷತ್ರಿಯನಿಗೆ ಗ್ರೀಷ್ಮ ಋತುವಿನಲ್ಲೂ, ವೈಶ್ಯನಿಗೆ ವರ್ಷ ಋತುವಿನಲ್ಲೂ, ಅವರ ಸಾತ್ವಿಕ, ರಾಜಸ, ಗುಣಗಳಿಗನುಸಾರವಾಗಿ ಉಪನಯನ(ದ್ವಿಜತ್ವ, ಯಜ್ಞೋಪವೀತ ಧಾರಣೆ) ಮಾಡಬೇಕೆಂಬ ನಿಯಮವಿದೆ.

ಉಪನಯನದ ಅನಂತರದಲ್ಲಿ ಕಠಿನ ಶಿಕ್ಷಣವನ್ನು ಕೊಡಲಾಗುವುದು. ಸಾಮಾಜಿಕ ಜೀವನ ಸುಗವಾಗಬೇಕೆಂಬ ದೃಷ್ಟಿಯಿಂದ ವಿದ್ಯಾಭ್ಯಾಸವನ್ನು ನೀಡಲಾಗುತ್ತದೆ. ಮಾನಸಿಕ ಶಿಕ್ಷಣದೊಂದಿಗೆ ಆತ್ಮಬಲ ಮತ್ತು ದೈಹಿಕಬಲಗಳ ಶಿಕ್ಷಣಕ್ಕೂ ಮಾನಸಿಕ ಶಿಕ್ಷಣದಷ್ಟೇ ಮಹತ್ವನ್ನೀಯಬೇಕು ಎಂಬುದು ಮುಖ್ಯ ವಿಚಾರ. ಇದಕ್ಕಾಗಿ ಗುರುವಿನ ಲಕ್ಷಣಗಳು ಹೇಗುರಬೇಕೆಂದು ಉಪನಯನ ಸಂಸ್ಕಾರದಲ್ಲಿ ತಿಳಿಸಲಾಗಿದೆ.

ಯಜ್ಞೋಪವೀತ ಧಾರಣೆ

ಜನಿವಾರ ಅಥವಾ ಯಜ್ಞೋಪವೀತ ಧಾರಣೆ ಯಾವಾಗಿನೀಂದ ಆರಂಭವಾಯಿತೆಬುದು ಯಾವುದೇ ಆಧಾರಗಳಲ್ಲಿ ಲಭ್ಯವಿಲ್ಲ. ಪ್ರಾಯಶಃ ಪುರಾಣ ಕಾಲದ ಅನಂತರದಲ್ಲಿ ಯಜ್ಞೋಪವೀತ ಧಾರಣೆ ಆರಂಭವಾಗಿರಬಹುದು.

ಏಕೆಂದರೆ ಹಿಂದೂ ಪುರಾಣಗಳಲ್ಲಿ ಜನಿವಾರದ ಪ್ರಸ್ತಾಪ ವಿರಳವಾದುದರಿಂದ ಹೀಗಾಗಿರಬಹುದು. ಯಜ್ಞೊàಪವೀತ ಎಂಬುದು ಸಂಸ್ಕೃತ ಶಬ್ದ. ಯಾವುದೇ ದೊಡ್ಡ ಯಜ್ಞವನ್ನು ಆರಂಭಿಸುವಾಗ ಯಜ್ಞೊàಪವೀತವನ್ನು ಹೊಸದಾಗಿ ಧರಿಸಿಕೊಳ್ಳುವ ವಾಡಿಕೆ ಈಗಲೂ ಚಾಲ್ತಿಯಲ್ಲಿದೆ. ಯಜ್ಞೊàಪವೀತ ಧಾರಣೆಯು ಒಂದು ದೀಕ್ಷೆಯನ್ನು ಹಿಡಿದ ಸಂಕೇತವಾಗಿದೆ.

ಜನಿವಾರ ಧಾರಣೆ ಸಂಖ್ಯೆ

ಬ್ರಹ್ಮಚಾರಿಗಳು ಒಂದು ಜನಿವಾರವನ್ನು ಹಾಕಬೇಕು.

ಗೃಹಸ್ಥರು/ವಿವಾಹಿತರು ಕನಿಷ್ಟ ಎರಡು ಜನಿವಾರ ಧರಿಸಬೇಕು (ಒಂದು ತನ್ನದು ಇನ್ನೊಂದು ಪತ್ನಿಯ ಪರವಾಗಿ. ಕೆಲವರು ಮೂರು ಧರಿಸುತ್ತಾರೆ.

ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ ಹಿರಿಯರಿಗೆ ವಂದನೆ ಮಾಡುವಾಗ ಹೆಗಲ ಮೇಲೆ ಉತ್ತರೀಯ ಶಾಲು ಇರಬೇಕೆಂದು ಒಂದು ರೂಢಿಯಲ್ಲಿರುವ ನಿಯಮ. ಆದ್ದರಿಂದ ಉತ್ತರೀಯವಿಲ್ಲದಿದ್ದರೂ ಅದಕ್ಕೆ ಲೋಪಬರದಂತೆ ಉತ್ತರೀಯದ ಬದಲಾಗಿ ಹೆಚ್ಚಿನ ಜನಿವಾರವನ್ನು ಧರಿಸುತ್ತಾರೆ.

ಕೆಲವು ಗೃಹಸ್ಥರು ನಾಲ್ಕು ಜನಿವಾರ ಧರಿಸುವುದೂ ಉಂಟು. ಜನಿವಾರ ತುಂಡಾದರೆ ಆದಷ್ಟು ಬೇಗ ಹೊಸತು ಬರುವ ಅಪರಾಹ್ನದೊಳಗೆ ಜನಿವಾರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ತುಂಡಾದರೂ ಲೋಪವಾಗುವುದಿಲ್ಲ. ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ ಅಗತ್ಯವೂ ಇರುವುದಿಲ್ಲ. ಆದ್ದರಿಂದ ಕೆಲವರು ಮುಂಜಾಗ್ರತಾ ಕ್ರಮಕ್ಕಾಗಿ ನಾಲ್ಕು ಜನಿವಾರ ಹಾಕಿಕೊಳ್ಳುವುದು.

-ಕಾರ್ತಿಕ್‌ ಕುಮಾರ್‌

ಏತಡ್ಕ

ಟಾಪ್ ನ್ಯೂಸ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.